ಕೊಪ್ಪಳ ಜಿಲ್ಲೆಯ ಗಂಗಾವತಿಯ ನಿರುಪಾದಿ ಭೋವಿ ಅವರು ಸಮಾಜ ಸೇವಕರು ಹಾಗೂ ವೃತ್ತಿಯಲ್ಲಿ ಗೃಹ ರಕ್ಷಕ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಪೋಲೀಸ್ ಆಗಿ ಕಾರ್ಯನಿರ್ವಹಿಸುತ್ತಾ ಕೆಲ ಸಮಯವನ್ನು ಸಮಾಜದ ಜೊತೆಗೆ ಬೆರೆಯುತ್ತಾರೆ, ಚಾರಣಕ್ಕೆ ಹೋಗುವುದು,ಪರಿಸರ ರಕ್ಷಣೆಯಲ್ಲಿ ಭಾಗಿಯಾಗುವುದು,ಸ್ವಚ್ಚತೆಯಲ್ಲಿ ಭಾಗಿಯಾಗುವುದು ಹಾಗೂ ಪುರಾತನ ಕಾಲದ ಇತಿಹಾಸ ಉಳ್ಳ ದೇವಲಾಯಕ್ಕೆ ಇವರುಗಳ ತಂಡದಿಂದ ಭಾಗಿಯಾಗುವುದು ಇವರ ಅತ್ಯುತ್ತಮ ಹವ್ಯಾಸ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಯಾರಾದರೂ ರಕ್ತವನ್ನು ಕೇಳಿದಲ್ಲಿ ರಕ್ತದ ವ್ಯವಸ್ಥೆ ಮಾಡುವ ವ್ಯವಸ್ಥಾಪಕರು ಹಾಗೂ ಸದಾ ರಕ್ತದಾನಿಗಳು ಇದುವರೆಗೆ 60 ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ತಮ್ಮ 39 ನೇ ಜನ್ಮದಿನವನ್ನು ಆಚರಿಸಿಕೊಂಡು ಇತರರಿಗೂ ಹಾಗೂ ಯುವಕರಿಗೂ ಸಮಾಜಕ್ಕೆ ಸ್ಪೂರ್ತಿ ದಾಯಕರು ಆಗಿದ್ದಾರೆ. ಗಂಗಾವತಿಯ ಚಾರಣ ಬಳಗ ಹಾಗೂ ಕಿಷ್ಕಿಂಧ ಯುವ ಚಾರಣ ಬಳಹ ಹಾಗೂ ರಕ್ತದಾನಿಗಳ ಗುಂಪುಗಳಲ್ಲಿ ಸಮಾನ ಮನಸ್ಕರೊಡನೆ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.