ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕ ಸುಕ್ಷೇತ್ರ ಬಿನ್ನಾಳ ಗ್ರಾಮದ ಶ್ರೀ ಗ್ರಾಮದೇವತೆಯ ಪ್ರತಿಷ್ಠಾಪನೆ ಹಾಗೂ ನೂತನ ಜಾತ್ರಾ ಮಹೋತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ ಪೂಜಾ ವಿಧಿ ವಿಧಾನಗಳ ಮೂಲಕ ಜರುಗಿತು.ಬೆಳಿಗ್ಗೆ ದೇವಾಲಯ ಶುದ್ದೀಕರಣ,ಯಾಗ ಶಾಲಾ ಪ್ರವೇಶ,ಗಣಪತಿ ಪೂಜೆ, ಪುಣ್ಯಾಹವಾಚನ,ನವಗ್ರಹ,ಸರ್ವತೋಭದ್ರ ಮಂಡಲ, ಪರಿಹಾರ ದೇವತಾ ಪೂಜೆ ನಂತರ ಅಗ್ನಿ ಪ್ರತಿಸ್ಥಾಪನೆ ಹಾಗೂ ಚಂಡಿಕಾಹೋಮ,ಲಘುಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ ಹಾಗೂ ದುರ್ಗಾದೀಪ, ನಮಸ್ಕಾರ ಕಾರ್ಯಕ್ರಮ ಜರುಗಿದವು.
ಶ್ರೀ ದ್ಯಾಮಮ್ಮ ದೇವಿಯ ಪ್ರಾಣ ಪ್ರತಿಷ್ಟಾಪನೆ, ಪ್ರತಿಷ್ಟಾ ಹೋಮ,ಕಲಾಹೋಮ, ಮಹಾಪೂರ್ಣಾಹುತಿ,ಮಹಾಮಂಗಳಾರತಿ,ತೀರ್ಥ ಪ್ರಸಾದ ವಿತರಣೆ ನಂತರ ಸಂಜೆ ಗ್ರಾಮದ ಸಮಸ್ತ ದೈವದ ವತಿಯಿಂದ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಧ್ವಜಾರೋಹಣ ಜರುಗಿದ ಬಳಿಕ ಮೆರವಣಿಗೆಯು ಶ್ರೀ ದ್ಯಾಮಮ್ಮ ದೇವಿಯ ಗಂಗಾ ಸ್ಥಳದಿಂದ ಬನ್ನಿಮಹಾಕಾಳಿಯ ಪಾದಗಟ್ಟೆಯವರೆಗೆ ಸಾಗಿ ನಂತರ ಊರಿನ ಪ್ರಮುಖ ಬೀದಿಯಲ್ಲಿ ಚಳ್ಳೆ ಹೊರಟು ಮೆರವಣಿಗೆ ಸಾಗಿ ಬಂದಿತು.ಶ್ರೀ ದೇವಿಗೆ ಮಹಿಳೆಯರು ಗುರು ಹಿರಿಯರು ಭಕ್ತಿ ಭಾವದಿಂದ ಉಡಿ ತುಂಬಿದರು.ಈ ವೇಳೆ
ಶ್ರೀ ಬಿನ್ನಾಳ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶ್ರೀ ಬಸವೇಶ್ವರ ಭಜನಾ ಸಾಂಸ್ಕೃತಿಕ ಕಲಾ ಸೇವಾ ಸಂಘ,ಶ್ರೀ ಬಿನ್ನಾಳ ಬಸವೇಶ್ವರ ಪ್ರಸಾದ ಸೇವಾ ಸಮಿತಿ,ಶ್ರೀ ಬಸವೇಶ್ವರ ಕರಡಿ ಮಜಲು,ಶ್ರೀ ಭೀರಲಿಂಗೇಶ್ವರ ಡೊಳ್ಳಿನ ಮೇಳ,ಶ್ರೀ ಮಾರುತಿ ಡೊಳ್ಳಿನ ಕಲಾ ಸಂಘ,ಚಾಮಲಾಪುರ,ಶ್ರೀ ಜಯದೇವ ಯುವಕ ಮಂಡಳ,ಶ್ರೀ ಶರಣ ಬಸವೇಶ್ವರ ಪುರಾಣ ಸೇವಾ ಸಮಿತಿ,ಶ್ರೀ ಶರಣಬಸವೇಶ್ವರ ಯುವಕ ಮಂಡಳ,ಶ್ರೀ ದುರ್ಗಾದೇವಿ ಸೇವಾ ಸಮಿತಿ,ಶ್ರೀ ಹಿರಿಯಮ್ಮದೇವಿ ಸೇವಾ ಸಮಿತಿ,ಶ್ರೀ ಜ.ಜ. ಮುರುಘರಾಜೇಂದ್ರ ಯುವಕ ಸಂಘ,ಶ್ರೀ ಷಣ್ಮುಖೇಶ್ವರ ಸೇವಾ ಸಮಿತಿ,ಶ್ರೀ ಭಗತ್ ಸಿಂಗ ಯುವಕ ಸಂಘ,ಶ್ರೀ ಸಾಯಿ ಕಲ್ಪತರು ಫೌಂಡೇಶನ್ , ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ,ಶ್ರೀ ಶಾರದಾ ಮಹಿಳಾ ಸಂಘ,ಮುಬಾರಕ ಡ್ರಮ್ ಸೆಟ್,ಶ್ರೀ ಮಾರುತಿ ಹಲಗಿ ಮೇಳ ಹಾಗೂ ಗುರು ಹಿರಿಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ