ಗೆಳೆಯರೇ ನನ್ನ ಗೆಳತಿಯರೇ ಕಳೆಯಿತು
ಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ ಹೊರಬಂದಂತೆ ಮಕ್ಕಳು ಬೇಸಿಗೆ ರಜೆಯನ್ನ ಮುಗಿಸಿಕೊಂಡು ಶಾಲೆಗೆ ಕಾಲಿಡುವ ದಿನ ಬಂದಿದೆ ಪರೀಕ್ಷೆಗಳು ಮುಗಿದು ಪರೀಕ್ಷೆ ಫಲಿತಾಂಶ ಬಂದ ತಕ್ಷಣ ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಗಳಲ್ಲಿ ದಾಖಲಾತಿಯನ್ನು ಮಾಡಿಕೊಳ್ಳುವ ಸಂದರ್ಭ ಉಂಟು.
ಮಕ್ಕಳು ಊರೆಲ್ಲಾ ಸುತ್ತಿ ಸ್ನೇಹಿತರೊಡನೆ ಕಾಲ ಕಳೆದು ಇನ್ನೇನು ಶಾಲೆ ಆರಂಭವಾಗಿದೆ ಎಂದಾಗ ವಿದ್ಯಾರ್ಥಿಗಳಿಗೆ ಇರುಸು ಮುರಿಸು ಉಂಟಾಗುತ್ತದೆ ಕಾರಣ ಯಾಕಾದ್ರೂ ಶಾಲೆ ಆರಂಭವಾಯಿತು ಇನ್ನು ಸ್ವಲ್ಪ ದಿನ ರಜೆ ಕೊಡಬಾರದೇ ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳು ಇರುತ್ತಾರೆ.
ಶಾಲೆ ಪ್ರಾರಂಭ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಪೋಷಕರಿಗೂ ಚಿಂತೆ ಗೀಡು ಮಾಡುತ್ತದೆ.ಕಾರಣ ಮಕ್ಕಳ ಶಾಲಾ ಶುಲ್ಕ,ಸಮವಸ್ತ್ರ ಶುಲ್ಕ,ಪುಸ್ತಕಗಳನ್ನು ಕೊಡಿಸುವುದು ಹಣಕ್ಕೆ ಮತ್ತೊಬ್ಬರ ಬಳಿ ಸಾಲ ಮಾಡುವಂತಹ ಸಂದರ್ಭ ಉಂಟು.
ಮಕ್ಕಳು ಎಲ್ಲವೂ ಮರೆತು ತಂದೆ ತಾಯಿಯ ಆಸೆಯನ್ನು ಈಡೇರಿಸುವುದು ಕರ್ತವ್ಯವಾಗಿದೆ.ಶಿಕ್ಷಣ ವಿದ್ಯಾರ್ಥಿಯ ಒಂದು ಮುಖ್ಯವಾದ ಭಾಗವಾಗಿದೆ. ಆಸ್ತಿಯನ್ನು ಕದಿಯಬಹುದು ಹೊರತು,ಜ್ಞಾನವನ್ನು ಕದಿಯಲು ಸಾಧ್ಯವಿಲ್ಲ,ಹಾಗಾಗಿ ಮಕ್ಕಳು ಬೇಸರವಿಲ್ಲದೆ ಶಿಕ್ಷಣವನ್ನು ಕಲಿಯಬೇಕಾಗಿದೆ.
-ಚಂದ್ರಶೇಖರ್ ಚಾರ್.ಎಂ.
ಶಿಕ್ಷಕರು,ವಿಶ್ವಮಾನವ ಶಾಲೆ ಸೀಬಾರ ಗುತ್ತಿ ನಾಡು ಚಿತ್ರದುರ್ಗ