ಹನೂರು ದಿ 26-05-2024 ರಂದು ಹನೂರು ಟೌನ್ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸೋಲಿಗ ಅಭಿವೃದ್ಧಿ ಸಂಘ ದ ಸಭೆಯ ತೀರ್ಮಾನಗಳು.
1.ಇಂಡಿಗನತ್ತ ಚುನಾವಣೆ ಬಹಿಷ್ಕಾರ ಘರ್ಷಣೆಯಲ್ಲಿ ನೊಂದ ಸೋಲಿಗ ಆದಿವಾಸಿಗಳ ರಕ್ಷಣೆಗೆ ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿರುವ ಕ್ರಮವನ್ನು ಶ್ಲಾಘಿಸಲಾಯಿತು,ಅಲ್ಲದೆ ಮಾನ್ಯ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
2.ಮೆಂದಾರೆ ಪೋ ಡಿ ನ ಸೋಲಿಗರ ಪುನರ್ವಸತಿ ಕುರಿತು ದಿನಾಂಕ 27-05-2024 ರಿಂದ 29-05-2024 ರ ವರೆಗೆ ನಡೆಸಲು ಉದ್ದೇಶಿಸಿರುವ ಸಮೀಕ್ಷೆಗೆ ಸೋಲಿಗ ಸಂಘಟನೆಯಿಂದ ಸಹಕರಿಸಲು ನಿರ್ಧರಿಸಲಾಯಿತು.
- ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಪುನರ್ವಸತಿ ಸಮಿತಿ ಯಲ್ಲಿ ಮೆಂದಾರೆ ಸೋಲಿಗ ಸಮುದಾಯದ ಮುಖಂಡರು ಸೇರಿದಂತೆ ಕನಿಷ್ಠ 3 ಮಂದಿ ಆದಿವಾಸಿ ಪ್ರತಿನಿಧಿಗಳನ್ನು ನೇಮಿಸಬೇಕೆಂದು ತೀರ್ಮಾನಿಸಲಾಯಿತು.
- ಸೋಲಿಗರ ಪುನರ್ವಸತಿ ಯೋಜನೆ ಪ್ರಸ್ತಾವನೆಯನ್ನು ಕಾರ್ಯಾಸಾದು ವಾದ ಮಾರ್ಗದಲ್ಲಿ ತಯಾರಿಸಿ ಅನುಷ್ಠಾನಕ್ಕೆ ಯೋಗ್ಯ ರೀತಿಯಲ್ಲಿ ಸೋಲಿಗರ ಇಚ್ಛೆ ಗೆ ಆನುಗುಣವಾಗಿ ಇಲಾಖೆಗಳ ಸಮನ್ವಯತೆಯಿಂದ ಕಾರ್ಯಗತಗೊಳಿಸಬೇಕು.ಸರ್ಕಾರ ಅಗತ್ಯ ಅನುದಾನವನ್ನು ನೀಡಬೇಕು.
5.ಘಟನೆಯಿಂದ ನೊಂದಿರುವ ಮೆಂದಾರೆ ಸೋಲಿಗರಿಗೆ ತಕ್ಷಣ ಪರಿಹಾರ ವಿತರಿಸಬೇಕು.
- ಆದಿವಾಸಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರುಗಳ ತಂಡವು ಮೆಂದಾರೆ ಪೋಡಿ ಗೆ ತೆರಳಿ ವಾಸ್ತವ್ಯ ಮಾಡಿ ಸಭೆ ನಡೆಸಲು ನಿರ್ಧರಿಸಿದೆ.
ಈ ಸಂಧರ್ಭದಲ್ಲಿ
ಸಭೆಯ ಅಧ್ಯಕ್ಷತೆಯನ್ನು ಶ್ರೀ ದೊಡ್ಡಸಿದ್ದಯ್ಯ ವಹಿಸಿದ್ದರು. ಕಾರ್ಯದರ್ಶಿ ಶ್ರೀ ರಂಗೇಗೌಡ,ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಮಾದೇಗೌಡ,ರಾಜ್ಯ ಮೂಲ ನಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ಶ್ರೀ ಮುತ್ತಯ್ಯ ವಿ ಸಂಘದ ಖಜಾಂಚಿ ಶ್ರೀ ಶಿವಣ್ಣ,ಕ್ಷೇತ್ರ ಮಟ್ಟದ ಸೋಲಿಗ ಅಭಿವೃದ್ಧಿ ಸಂಘ ದ ಕಾರ್ಯದರ್ಶಿ/ಅಧ್ಯಕ್ಷರುಗಳಾದ ಶ್ರೀ ಗಿರಿಯ (ಮ.ಮ ಬೆಟ್ಟ) ಶ್ರೀ ಕೇತೆಗೌಡ (ಗುಂಡಾಲ್) ಶ್ರೀ ಭದ್ರಪ್ಪ ( ಪೊನ್ನಾಚಿ) ನಾಗಣ್ಣ (ಹುತ್ತೂರು) ಶ್ರೀ ಪೇರಿಸ್ವಾಮಿ (ಪಿ.ಜಿ.ಪಾಳ್ಯ) ಶ್ರೀ ಕೆ. ರಂಗೇಗೌಡ (ನಕ್ಕುಂದಿ) ಕಾರ್ಯಕರ್ತರಾದ ಶ್ರೀ ಗಿರೀಶ್ ಕುಮಾರ್, ಸಿದ್ದಮ್ಮ, ಮಾದೇವ,ಮುತ್ತುಸ್ವಾಮಿ,ಪುಟ್ಟಮಾದು,ಸಣ್ಣಪ್ಪ, ಕೇಶವ ವಿಶೇಷವಾಗಿ ಮೆಂದಾರೆ ಪೋಡಿ ನ ಮಾದಯ್ಯ,ಶಿವಕುಮಾರ್,ಬೇರ,ಪಡಗಲ್ಲ,ನಾಗ, ಮಾದಯ್ಯ ಸೇರಿದಂತೆ 60 ಹೆಚ್ಚು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವರದಿ:ಉಸ್ಮಾನ್ ಖಾನ್