ಬೆಂಗಳೂರು:ಸರ್ಕಾರದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ವಾರದೊಳಗೆ ಕಡ್ಡಾಯವಾಗಿ ಹಳೇ ವಿದ್ಯಾರ್ಥಿ ಸಂಘ ಸ್ಥಾಪಿಸಿ ವಾಟ್ಸಾಪ್ ಗ್ರೂಪ್ ರಚಿಸಿ ಕಚೇರಿಯಿಂದ ನೀಡಿರುವ ಗೂಗಲ್ ಫಾರ್ಮ್‌ನಲ್ಲಿ ಮಾಹಿತಿ ಭರ್ತಿ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಹಿಂದೆಯೇ ಹೊರಡಿಸಿದ್ದ ಆದೇಶನ್ವಯ 25,007 ಶಾಲೆಗಳ ಪೈಕಿ 15,170 ಶಾಲೆಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿವೆ.ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡಿರುವ ಶಾಲೆಗಳು ವಾಟ್ಸಾಪ್ ಗ್ರೂಪ್ ಆರಂಭಿಸಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು.ಸಂಘ ಸ್ಥಾಪಿಸದ ಶಾಲೆಗಳು ಮುಂದಿನ ಒಂದು ವಾರದೊಳಗೆ ಕಡ್ಡಾಯವಾಗಿ ಸ್ಥಾಪಿಸಿಕೊಂಡು ವಾಟ್ಸಾಪ್ ಗ್ರೂಪ್ ರಚಿಸಿಕೊಳ್ಳಬೇಕೆಂದು ಇಲಾಖೆ ಗಡುವು ನೀಡಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್