ಮನುಜ ಕೇಳಿದ ಮರವ…
ವಿಶ್ವ ಪರಿಸರ ದಿನದಂದು
ನಿನಗೇನು ಕಾಣಿಕೆ ಕೊಡಲಿ..?
ಮರ ಕೈ ಮುಗಿದು ಹೇಳಿತು
“ಬಾಗಿ ಬೇಡುವೆನು ನಿನ್ನಲ್ಲಿ
ಇಂದಾದರೂ ದಯಮಾಡಿ
ಹಾಕದಿರು ಬುಡಕ್ಕೆ ಕೊಡಲಿ”
ನೆಲದಾಳದಿ ವೃಕ್ಷದ ಬೇರುಗಳಿಗೆ ಏನೊ…ತೊಡರಿ ಕಟ್ಟಿ ಹಾಕಿದಂತೆ ಚುರು ಚುರು ಚಡಪಡಿಸಿ ಮರ ಬಾಗುತ
ನೋಡಿದರೆ…..ತಿಂದೆಸೆದ ಸಿಹಿ ತಿಂಡಿಯ ಪ್ಲಾಸ್ಟಿಕ್ ಕವರು
ಅದರ ಮೇಲೆ ಹಸಿರು ಬಣ್ಣದಿ ಹೊಳೆದಿತ್ತು “ವಿಶ್ವ ಪರಿಸರ ದಿನಾಚರಣೆಯ ಮೊಹರು…
-ಶಾಂತಾ ಮೊಳಕಾಲ್ಮುರು