ಶಿವಮೊಗ್ಗ:ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಆಲಿಂಕೋ ಸಂಸ್ಥೆಯ ವತಿಯಿಂದ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಶಿಬಿರಗಳನ್ನು ನಿಗದಿತ ದಿನಾಂಕಗಳಂದು ಅಯೋಜಿಸಿದ್ದು, ಈ ಸಂಸ್ಥೆಯು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅವಶ್ಯಕ ಸಾಧನ ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ.
ಜೂನ್ 21 ರಂದು ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ,ಜೂ. 22 ರಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆ,ಜೂ. 23 ಸಾಗರ ಸಾರ್ವಜನಿಕ ಆಸ್ಪತ್ರೆ, ಜೂ.24 ಸೊರಬ ಸಾರ್ವಜನಿಕ ಆಸ್ಪತ್ರೆ,
ಜೂ. 25 ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆ,
ಜೂ. 26 ಹೊಸನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಜೂ. 27 ಮತ್ತು 28 ರಂದು ಶಿವಮೊಗ್ಗ ಜಿಲ್ಲಾ ಮೆಗ್ಗಾನ ಭೋದನಾ ಆಸ್ಪತ್ರೆಗಳಲ್ಲಿ ಶಿಬಿರಗಳು ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸಲು ವಿಕಲಚೇತನರು ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ), ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ. ಹಿರಿಯ ನಾಗರಿಕರು ಗುರುತಿನ ಚೀಟಿ ಅಥವಾ ವಯೋಮಿ ಸೂಚಿಸು ದಾಖಲಾತಿ, ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ ಗಳನ್ನು ಹಾಜರುಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ – ಹುಚ್ಚುರಾಯಪ್ಪ- 9741161346, ಭದ್ರಾವತಿ-ದಿನೇಶ್-7899137243, ಸಾಗರ ಶ್ಯಾಮ್‍ಸುಂದರ್-9535247757, ಸೊರಬ- ಭರತ್‍ಕುಮಾರ್-9110493122, ತೀರ್ಥಹಳ್ಳಿ -ದಿವಾಕರ್ ಬಿ.ಆರ್.-9480767638, ಹೊಸನಗರ-ರವಿಕುಮಾರ್- 9731922693, ಮೆಗ್ಗಾನ್ ಆಸ್ಪತ್ರೆ-ಮಲ್ಲಿಕಾರ್ಜುನ-9980150110 ಗಳನ್ನು ಸಂಪರ್ಕಿಸುವುದು.
ವರದಿ ಕೊಡಕ್ಕಲ್ ಶಿವಪ್ರಸಾದ್