ಹನೂರು:ಜಿಲ್ಲಾಧಿಕಾರಿ ಶಿಲ್ಪಾನಾಗ್, ಶಾಸಕ ಎಂ.ಆರ್. ಮಂಜುನಾಥ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯು ಮಂಗಳವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಆಗಿರುವ ಹಾಗೂ ಆಗಬೇಕಿರುವ ಕಾಮಗರಿಗಳ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಂಡರು. ಬಳಿಕ ತುರ್ತು ಕಾಮಗಾರಿಯನ್ನು ಆದಷ್ಟು ಬೇಗ ಮಾಡಿ ಪೂರ್ಣಗೊಳಿಸಬೇಕು ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್. ಮಂಜುನಾಥ್ ಖಡಕ್ ಸೂಚನೆ ನೀಡಿದರು.
ಅಜ್ಜೀಪುರ ಗ್ರಾಮ ಪಂಚಾಯತ್ ರೋಜ್ ಗಾರ್ ದಿವಸ್ ಯೋಜನೆಯು ಕೆಲವು ಕಾಮಗಾರಿಗಳಿಗೆ ಸೀಮಿತವಾಗಿ ಹೊಸ ಜಾಬ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಗಳನ್ನು ಹಂತ ಹಂತವಾಗಿ ಬಗೆಹರಿಸಲು ಅಧಿಕಾರಿಗಳು ಸಹಕಾರ ನೀಡಬೇಕು, ನರೇಗಾ ಯೋಜನೆ 2284ಜಾಬ್ ಕಾರ್ಡ್ ಇದೆ, ಈ ವರ್ಷ ಕ್ರಿಯಾ ಯೋಜನೆಯಲ್ಲಿ ತಯಾರು ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು, 15ಹಣಕಾಸು ಸಮುದಾಯ ಆಧಾರಿತ ಕಾಮಗಾರಿ, ಕೆರೆ ಹೂಲು ಚೆಕ್ ಡ್ಯಾಮ್ ನಿರ್ಮಾಣ, ಶಾಲಾ ಸೌಚಾಲಯ, ವ್ಯಕ್ತಿಕ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ನಿರ್ಮಾಣಗೊಳಿಸಬೇಕು.
ಸೊಕ್ ಫಿಟ್ ನಿರ್ಮಾಣ ಕಾಮಗಾರಿಗೆ 21ದಿನಗಳ ಅವಧಿಯಲ್ಲಿ ನಿರ್ಮಾಣ ಮಾಡಬೇಕು ಆದರೆ 2ವರ್ಷ ಗಲಾದರೂ ಸಹ ಕಾಮಗಾರಿ ನಿರ್ಮಾಣ ಮಾಡಿತ್ತಿಲ್ಲ ಇದರ ಬಗ್ಗೆ ಹರಿಸಬೇಕು,3 ನಾಲ್ಕು ತಿಂಗಳು ನರೇಗಾ ಯೋಜನೆ ಯಲ್ಲಿ ಕೆಲಸ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ರವರು ಮಾತನಾಡಿ
ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಬೇಕು, ಕಡ್ಡಾಯವಾಗಿ ನರೇಗಾ ಯೋಜನೆ ಯಲ್ಲಿ 100ದಿನಗಳ ಕೆಲಸ ನೀಡಬೇಕು, ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಲಿಗ ಸಮುದಾಯದ ಜನರು ಇರುವುದರಿಂದ ಅವರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನೀಡಬೇಕು, ಕಾಡಂಚಿನ ಭಾಗದಲ್ಲಿ ಬೇರೆಡೆ ಕೂಲಿ ಕೆಲಸ ಗಳಿಗೆ ತೆರಳುವ ಜನರಿಗೆ ನಮ್ಮಲ್ಲಿರುವ ಸರ್ಕಾರದ ಮಹತ್ವ ಡಾ ಯೋಜನೆ ಯಾದ ನರೇಗಾದಲ್ಲೂ ಕೂಲಿ ಕೆಲಸ ನೀಡಿ, ವಲಸೆ ಹೋಗುವುದನ್ನು ತಪ್ಪಿಸಬೇಕು, ಕೆರೆ ಅಭಿವೃದ್ಧಿ ಒಂದು ತಿಂಗಳ ಅವಧಿಯಲ್ಲಿ ಕಡ್ಡಾಯವಾಗಿ ನರೇಗಾ ಯೋಜನೆ ಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್ ನೀಡಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಕೆರೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಮೃತ ಸರೋವರ, ಶಾಲಾ ಆಟದ ಮೈದಾನ ನರೇಗಾದಲ್ಲಿ ಅವಕಾಶವಿದೆ, ಮಕ್ಕಳಿಗೆ ಅನುಕೂಲವಾಗುವಂತೆ ವಾಲಿಬಾಲ್ ಬಾಲ್, ಖೋ ಖೋ ಸೇರಿದಂತೆ ಆಟದ ಮೈದಾನಗಳನ್ನು ನಿರ್ಮಾಣ ಮಾಡಲು ನರೇಗಾ ಯೋಜನೆ ಯಲ್ಲಿ ಅವಕಾಶವಿದೆ, ಗ್ರಾಮ ಸಭೆಗಳಲ್ಲಿ ಉಳ್ಳವರಿಗೆ ಸೌಲಭ್ಯವನ್ನು ನೀಡಲಾಗುತ್ತಿದೆ, ಎಲ್ಲರಿಗೂ ಸೌಲಭ್ಯಗಳನ್ನು ನೀಡುವ ಕೆಲಸ ವಾಗಬೇಕು ಎಂದರು.
ಸರ್ಕಾರಿ ಹಾಸ್ಟೆಲ್ ಗಳಲ್ಲೂ ತೋಟಗಾರಿಕೆ ಸೊಪ್ಪು ತರಕಾರಿಗಳನ್ನು ಬೆಳೆಯಬೇಕು, ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮಾಡಬೇಕು, ನುಗ್ಗೆ ಸೊಪ್ಪು, ನಿಂಬೆಹಣ್ಣು, ತರಕಾರಿಗಳನ್ನು ಬೆಳೆಯುವ, 50ಕಡೆಗಳಲ್ಲಿ ಮಕ್ಕಳಿಗೆ ಅನುಕೂಲ ವಾಗಲಿ ಎಂದರು.
ಗ್ರಾಮ ಪಂಚಾಯತ್ ಕಟ್ಟಡಗಳ ಟೆಂಡರ್ ನರೇಗಾ ಎನ್ ಎಂ ಆರ್ ಮೆಟಿರಿಯಲ್, ಅಂಗನವಾಡಿ ಕಟ್ಟಡ ದುರಸ್ಥಿ ಕಾಮಗಾರಿಗಳು ಅರ್ಥಕ್ಕೆ ನಿಂತಿವೆ, ನರೇಗಾ ಯೋಜನೆಯಡಿ ದುರಸ್ತಿ ಕಾಮಗಾರಿಗೆ 5ರಿಂದ 8ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ, ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ಣವಾಗುವ ಗಮನವ್ಹರಿಸಿ ಎಂದರು.
ಹೂಗ್ಯಂ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಯಲ್ಲಿ ಕೆಲಸ ನೀಡುತ್ತಿಲ್ಲ ಎಂದು ಜಾಬ್ ಕಾರ್ಡ್ ಹೊಂದಿರುವ ಮಹಿಳೆಯರು ಅಸಮಾಧಾನ ಹೊರ ಹಾಕಿದ್ದಾರೆ, ಈ ಬಗ್ಗೆ ಗಮನಕ್ಕೆ ಬಂದಿದ್ದು ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು. ಗ್ರಾಮದಲ್ಲಿ ಚರಂಡಿಗಳು ತೆಗೆಸಿ ಸ್ವಚ್ಛತೆ ಕಾಪಾಡಬೇಕು. ನೀರಿನ ಸಮಸ್ಯೆ ತಲೆದೋರಿದಂತೆ ನೋಡಿಕೊಳ್ಳಬೇಕು.
3ತಿಂಗಳ ಅವಧಿಯೊಳಗೆ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು, ಪ್ರತಿ ಮನೆಗೂ ಸೌಚಾಲಯ ನಿರ್ಮಾಣ ಅಗತ್ಯವಾಗಿದೆ.
ಬರಗಾಲಕುಡಿಯುವ ನೀರು ಸ್ವಚ್ಛತೆ ಬಗ್ಗೆ ಸಮಯ ಹೆಚ್ಚಿನ ಗಮಹರಿಸ ಬೇಕು, ಹೌಸಿಂಗ್ ಈ ಸ್ವತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ನರೇಗಾ ದಲ್ಲಿ 100ದಿನ, ಸಮಸ್ಯೆಯಾಗದಂತೆ 400ಜನ ಕೆಲಸ ಮಾಡಬೇಕು ಸಮಸ್ಯೆಗಳಿದ್ದರೆ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು, ಅರಣ್ಯ ಹಾಗೂ ರೇಷ್ಮ ಇಲಾಖೆ ಯಲ್ಲಿ ಹನೂರು ಮಾದರಿ ಯಾಗಬೇಕು ಎಂದು ಸಮಸ್ಯೆ ಗಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಮಸ್ಯೆ ಗಳಿದ್ದರೆ ಆದಷ್ಟು ಬೇಗ ಸಮಸ್ಯೆ ಗಳನ್ನು ಬಗೆಹರಿಸಬೇಕು.
ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ಅಧಿಕಾರಿಗಳೇ ಹೊಣೆ ಯಾಗಿರುತ್ತಾರೆ, ಓವರ್ ಹೆಡ್ ಟ್ಯಾಂಕ್ ನಿಂದ ಮಧುವನಹಳ್ಳಿ, ಗ್ರಾಮ ಪಂಚಾಯತಿ ಗಳಲ್ಲಿ ಪೈ ಲೈನ್ ಸ್ವಚ್ಛತೆ ಸೇರಿದಂತೆ ಮುಂಜಾಗೃತ ಕ್ರಮ ಗಳನ್ನು ಅನುಸರಿಸಿ, ತೊಂಬೆಗಳನ್ನು ಸೂಚಿ ಗೊಳಿಸಿ ಕಡ್ಡಾಯವಾಗಿ ಅಧಿಕಾರಿಗಳು ಗಮನಹರಿಸಬೇಕು,
ಬೆಳೆ ಸಮೀಕ್ಷೆಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಿಬೇಕು. ಸಮಸ್ಯೆ ಇದೆ ಆದ್ದರಿಂದ ಗ್ರಾಮ ಲೆಕ್ಕಧಿಕಾರಿಗಳು ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸಿ, ಮೂರು ತಿಂಗಳಲ್ಲಿ ಕಂದಾಯ ಇಲಾಖೆ ಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ಗ್ರಾಮ ಲೆಕ್ಕಾಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಲ್ಲುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದಿರುವಂತಹ ಅನುದಾನಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು,ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ, ಶಾಲಾ ಕಾಲೇಜು ಕಟ್ಟಡ ಸುಟ್ಟುಗೋಡೆ ಆಟದ ಮೈದಾನ, ಚೆಕ್ ಡ್ಯಾಮ್ ನಿರ್ಮಾಣ, ಹಿಂಗು ಗುಂಡಿ ನಿರ್ಮಾಣ ಹಾಗೂ ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಇಲಾಖೆವಾರು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಆನಂದ್ ಮೀನಾ, ಎಸಿಎಫ್ ಚಂದ್ರ ಶೇಖರ್ ಪಾಟೀಲ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ಹನೂರು ತಾಲೂಕು ಪಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್