ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಹಗಲೊತ್ತಿನಲ್ಲೆ ಉಸುಗಿನ ಗಾಡಿಗಳ ಓಡಾಟವನ್ನು ನೋಡಿ ಕೈ ಕಟ್ಟಿ ಕುಳಿತಿರುವುದು ಯಾಕೆ?ಗಾಢ ನಿದ್ರೆಯಲ್ಲಿ ಜಾರಿದ್ದಾರೆಯೇ?ಇದಕ್ಕೆ ಕಡಿವಾಣ ಇಲ್ಲದಂತಾಗಿದೆ ಹಾಗಾದರೇ ಈ ಸಮಸ್ಯೆ ಯಾವಾಗ ಕೊನೆಗೊಳ್ಳುತ್ತದೆಯೋ ಇಲ್ಲವೋ ಎಂದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ? ಇದಕ್ಕೆ ಪ್ರಮುಖ ಕಾರಣ ಪೊಲೀಸ್ ಅಧಿಕಾರಿಗಳ ನಿರ್ಲಕ್ಷವೇ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಈ ವಾಹನಗಳ ಓಡಾಟವನ್ನು ನೋಡಿಯೂ ಕುರುಡರಾಗಿಯೋ ಅಥವಾ ಯಾರದೋ ಮಾತಿಗೆ ತಲೆ ತಗ್ಗಿಸಿ ನಿಂತಿದ್ದಾರೆಯೇ ಎನ್ನುವುದು ತಿಳಿಯದಾಗಿದೆ,ಮುಂದಿನ ದಿನಗಳಲ್ಲಿ ಉಸಕಿನ ವಾಹನಗಳ ಓಡಾಟ ನಿಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಿ ಸರ್ಕಾರ ಮತ್ತು ಅಧಿಕಾರಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ಗಂಟೆಯನ್ನು ಬಾರಿಸಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)