ಬೆಳಗಾವಿ:ದಿನಾಂಕ 18/6/ 2024 ರಂದು ಚಿಂಚನಿ ಗ್ರಾಮದಲ್ಲಿ ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಚಿಕ್ಕೋಡಿ ಅವರ ನೇತೃತ್ವದ ಎನ್ಎಸ್ಎಸ್ ಶಿಬಿರದಲ್ಲಿ ರಾಷ್ಟ್ರ ಸೇವೆಯಲ್ಲಿ ಯುವಕರ ಪಾತ್ರ ಕುರಿತು ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಚಿಂಚನಿ ಗ್ರಾಮದ ನಿವೃತ್ತ ಸೈನಿಕರು,ಶಿಕ್ಷಕರು,ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ವಕೀಲರು ಅವರಿಗೆ ಶ್ರೀ ಮ.ನಿ.ಪ್ರ ಸಂಪಾದನಾ ಮಹಾಸ್ವಾಮಿಗಳು ಸಂಪಾದನಾ ಚರಮೂರ್ತಿ ಮಠ ಚಿಕ್ಕೋಡಿ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಡಾ.ಅರುಣ್ ಯ ಕಾಂಬಳೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಎಮ್ ಬಿ ಪಾಟೀಲ್ ನ್ಯಾಯವಾದಿಗಳು, ಮಂಜುನಾಥ ದೊಡಬಂಗಿ , ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಬಸವರಾಜ್ ಪಾಟೀಲ್,ನಾಗರಾಜ ಪಾಟಿಲ್ ,ಮತ್ತು ಎನ್ ಎಸ್ ಎಸ್ ಯೋಜನಾ ಅಧಿಕಾರಿಗಳು ಪ್ರೊ ಪೀ ಎಂ ಕಮತೆ ಹಾಗೂ ಏನ್ ಎಸ್ ಎಸ್ ಕಾರ್ಯದರ್ಶಿಗಳಾದ ಪ್ರದೀಪ ಗುಮಚಿ ಹಾಗು ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವಿದ್ಯರ್ಥಿಗಳು ಮತ್ತು ಚಿಂಚಣಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
