ಬೀದರ್ ನ ಹೊರ ವಲಯದಲ್ಲಿರುವ ಡಾನ್ ಬೋಸ್ಕೋ ಹಾಗೂ ಅಜೀಂ ಪ್ರೇಮ್ ಜೀ ಇವರ ಸಂಯುಕ್ತಾಶ್ರಯದಲ್ಲಿ ಬೀದರ್ ತಾಲ್ಲೂಕಿನ ಜನವಾಡ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಲಾಯಿತು.ಸಮಿತಿ ಮಾಡುವ ಉದ್ದೇಶ ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಗ್ರಾಮ ಪಂಚಾಯಿತಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ಅಥವಾ ಮಕ್ಕಳ ಕಾವಲು ಸಮಿತಿ ರಚಿಸಿರಬೇಕು, ಇದರಿಂದ ಮಕ್ಕಳಿಗೆ ರಕ್ಷಣೆ ನೀಡುವುದು ಅವರ ಹಕ್ಕುಗಳನ್ನು ಪೋಷಿಸುವುದು, ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದು, ಮಕ್ಕಳನ್ನು ಪರಿಸರ ಸ್ನೇಹನಾಗಿ ಮಾಡುವುದು, ಮಕ್ಕಳನ್ನು ಸಭೆ ಸಮಾರಂಭಗಳಲ್ಲಿ ಭಾಗವಹಿಸುವಂತೆ ಮಾಡುವುದು, ಒಟ್ಟಾರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಆಗುವುದಕ್ಕೋಸ್ಕರ ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದಕ್ಕೋಸ್ಕರ ಈ ಸಮಿತಿ ರಚನೆ ಮಾಡುವುದಾಗಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ
ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರು ಫಾದರ್ ಸ್ಟಿವನ್ ಲೋರೆನ್ಸ್,
ಜಿಲ್ಲಾ ಸಂಯೋಜಕರಾದ ಅಕ್ಷಯಕುಮಾರ ಅವರು ಹಾಗೂ ಜನವಡ ಗ್ರಾಮ ಪಂಚಾಯತ ಕಾರ್ಯದರ್ಶಿ ನಸುರುದ್ದೀನ್,
ಅಧ್ಯಕ್ಷರು ವಜಂತಾಬಾಯಿ ನಾಮದೇವರಾವ್, ಉಪಾಧ್ಯಕ್ಷರು ತುಕಾರಾಂ ತಂದೆ ನರ್ಸಿಂಗ್
ಮತ್ತು ಗ್ರಾಮ ಪಂಚಾಯತ್ ನ ಸದಸ್ಯರು,
ಆಶಾ,ಅಂಗನವಾಡಿ ಕಾರ್ಯಕರ್ತರು,ಆರೋಗ್ಯ ಇಲಾಖೆಯ ಶೀತಲ್ ಮೇಡಂ,
ಸರ್ಕಾರಿ ಶಾಲೆಯ ಮುಖ್ಯ ಗುರುಗಳು ಬಾಬುರಾವ್ ದಡ್ಡಪುರ್
ಕಿರಿಯ ಪ್ರಾಥಮಿಕ ಶಾಲೆಯ ಸೂರ್ಯಕಾಂತ್ ಸರ್ ಹಾಗೂ ಸಹ ಶಿಕ್ಷಕರು,ವಿದ್ಯಾರ್ಥಿಗಳು, ಪೋಷಕರು ಮತ್ತು ಸಮಾಜ ಸೇವಕರು ಮತ್ತು ಇನ್ನಿತರರು ಭಾಗಿಯಾಗಿದ್ದರು.
ವರದಿ:ರೋಹನ್ ವಾಘಮರೆ