ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಲಿಂ.ಬಸವಪ್ರಿಯ ಅಪ್ಪಣ್ಣನವರ 16 ನೇ ವರ್ಷದ ಪುಣ್ಯಸ್ಮರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಜೀವನ ಮೌಲ್ಯ ಪರಿಪಾಲಿಸಿ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ:ಕಂಬಳೇಶ್ವರ ಶ್ರೀ
ಬಹು ಜನ್ಮದ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ.ಧರ್ಮ ದರ್ಶನಗಳ ಅರಿವು ಆಚರಣೆ ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ.
ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮವೆಂದು ಲಿಂ.ಬಸವಪ್ರಿಯ ಅಪ್ಪಣ್ಣನವರ ಸ್ಮರಣೆ ಚಿತ್ತಾಪುರದ ಪರಮ ಪೂಜ್ಯ ಶ್ರೀ ಷ.ಬ್ರ.ಶ್ರೀ ಸೋಮಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಜರುಗಿದ ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಲಿಂ.ಬಸವಪ್ರೀಯ ಅಪ್ಪಣ ಶ್ರೀಗಳವರ 16ನೇ ವರ್ಷದ ಪುಣ್ಯಸ್ಮರಣೆಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು ಇದ್ದ ಹಾಗೆ ದೇಶ ಉಳಿದು ಬೆಳೆದರೆ ಸಂಸ್ಕೃತಿ ಸಭ್ಯತೆ ಬೆಳೆದು ಬರಲು ಸಾಧ್ಯ ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿ ಕಲುಷಿತಗೊಳ್ಳಬಾರದು. ಸಾತ್ವಿಕ ಚಿಂತನೆಗಳನ್ನು ಬೆಳೆಸುವುದೇ ಧರ್ಮದ ಗುರಿಯಾಗಿದೆ.ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ಹಡಪದ ಅಪ್ಪಣ್ಣ ಸಮಾಜವು ಆದರ್ಶ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ ಜಾತಿ ಮತ ಪಂಥ ಮೀರಿ ಭಾವೈಕ್ಯತೆಯ ಸಂದೇಶವನ್ನು ಬೋಧಿಸಿದರು, ಶ್ರೀ ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ದಂಡಗುಂಡ ಶ್ರೀಗಳು ದಿವ್ಯ ನೇತೃತ್ವ ವಹಿಸಿ- ಸಮಾಜದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ.ಲಿಂಗಾಯತ ಧರ್ಮದಲ್ಲಿ ಶ್ರೀ ಗುರುವಿಗೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು ಶ್ರೀ ಗುರುವಿನಿಂದಲೇ ಸಂಸ್ಕಾರ ಸಂಸ್ಕೃತಿಗಳ ಅರಿವು ಪ್ರಾಪ್ತವಾಗುತ್ತವೆ. ಗುರು ಕರುಣೆಯಿಂದ ಜೀವನ ವಿಕಾಸಗೊಳ್ಳುತ್ತದೆ ಎಂದು ಹೇಳಿದರು.
ಸಂಗಮೇಶ್ವರ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಮಠ ಯರಗೋಳ ಪೂಜ್ಯರು-ಲಿಂ.ಶ್ರೀ ಬಸವಪ್ರೀಯ ಅಪ್ಪಣ್ಣ ಸ್ವಾಮಿಗಳು ಆದರ್ಶ ಗುರು ಪರಂಪರೆಗೆ ಮೆರಗು ತಂದವರು.ಸಮಾಜದ ಬಸವ ತತ್ವದ ಜ್ಞಾನ ನಿಧಿಯಾದ ಶ್ರೀಗಳು ಉತ್ತಮ ಬರಹಗಾರರು ಆಗಿದ್ದರೆಂಬುದನ್ನು ಮರೆಯುವಂತಿಲ್ಲ.ಇಂದಿನ ಪಟ್ಟಾಧ್ಯಕ್ಷರಾದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳವರು ಲಿಂ.ಬಸವಪ್ರಿಯ ಅಪ್ಪಣ್ಣ ಮಹಾ ಸ್ವಾಮಿಗಳ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸಿ ಶ್ರೀ ಮಠವನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತೋಷದ ಸಂಗತಿ ಎಂದರು.ನೇತೃತ್ವ ವಹಿಸಿದ ಶ್ರೀ ಸಂಗನ ಬಸವ ಶಿವಾಚಾರ್ಯರು ಶ್ರೀಗಳು ಮಾತನಾಡಿ ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ ಇವೆರಡೂ ಸಮನ್ವಯದಿಂದ ನಡೆದರೆ ಜನರ ಕಲ್ಯಾಣವಾಗುತ್ತದೆ.ವ್ಯಕ್ತಿತ್ವ ವಿಕಾಸಕ್ಕೆ ವೀರಶೈವ ಲಿಂಗಾಯತ ಧರ್ಮ ಕೊಟ್ಟ ಕೊಡುಗೆ ಅಪಾರ.ಅಂತರಂಗ ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟ ವೀರಶೈವ ಲಿಂಗಾಯತ ಧರ್ಮ ಎಲ್ಲರ ಅಭ್ಯುದಯ ಮಾಡುತ್ತಾ ಬಂದಿದೆ ಎಂದರು.
ಶ್ರೀ ಕೊತಲಪ್ಪ ಮುತ್ಯಾ ತೋನಸನಹಳ್ಳಿ ಶ್ರೀಗಳು ಲಿಂ.ಬಸವ ಪ್ರಿಯ ಶ್ರೀಗಳ ಸದಿಚ್ಛೆಯಂತೆ ಶ್ರೀ ಅನ್ನದಾನಿ ಭಾರತಿ ಅಪ್ಪಣ ಸ್ವಾಮಿಗಳವರ ಆಶೀರ್ವಾದದಿಂದ ಶ್ರೀ ಮಠವನ್ನು ಬೆಳೆಸುತ್ತಿದ್ದಾರೆ ಎಂದರು ಸಮಾರಂಭವನ್ನು ಎಲ್ಲಾ ಪೂಜ್ಯರ ಸಮ್ಮುಖದಲ್ಲಿ ಜ್ಯೋತಿ ಉದ್ಘಾಟಿಸಿದರು. ಶಹಾಬಾದ ನಗರ ಸಭೆಯ ಸದಸ್ಯರು ಶ್ರೀ ಸೂರ್ಯಕಾಂತ ಕೋಬಾಳ ಮಾತನಾಡಿ ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭದಲ್ಲಿ ಶಿಥಿಲಗೊಳ್ಳಬಹುದು ಆದರೆ ಗುರು ಶಿಷ್ಯರ ಸಂಬಂಧ ಯಾವಾಗಲೂ ನಿರಂತರ ನಿತ್ಯ ನೂತನವಾದುದು. ಮಾನವ ಧರ್ಮ ಹಿರಿಮೆ ಬೋಧಿಸಿದ ಶ್ರೀ ಷ.ಬ್ರ.ಶ್ರೀ ಸೋಮಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಕಂಬಳೇಶ್ವರ ಮಠದ ಪೂಜ್ಯರು ನಾಡಿನೆಲ್ಲೆಡೆ ಸಾಮರಸ್ಯ ಸದ್ಭಾವನೆ ಬೆಳೆಸಲು ಶ್ರಮಿಸುತ್ತಿದ್ದಾರೆ. ಲಿಂ.ಬಸವಪ್ರೀಯ ಅಪ್ಪಣ್ಣ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಕೂಡಲಸಂಗಮ ನದಿಯ ಪಕ್ಕದಲ್ಲಿರುವ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಪೀಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅನ್ನದಾನಿ ಭಾರತಿ ಅಪ್ಪಣ ಮಹಾಸ್ವಾಮಿಗಳು ಶ್ರೀ ಮಠ ಮುನ್ನಡೆಯುತ್ತಿರುವುದು ಭಕ್ತರಿಗೆ ಸಂತೋಷ ಉಂಟು ಮಾಡುತ್ತದೆ ಎಂದರು.ಇದೇ ಸಂಧರ್ಭದಲ್ಲಿ ಈ ವೇದಿಕೆಯ ನೇತೃತ್ವದಲ್ಲಿ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿಗಳು ಹಡಪದ ಅಪ್ಪಣ್ಣ ದೇವಸ್ಥಾನ ಶಹಾಬಾದ ಅವರು ಮಾತನಾಡಿ ಈ ಹಡಪದ ಅಪ್ಪಣ್ಣ ಸಮಾಜಕ್ಕೆ ರಾಜ್ಯ ಸರ್ಕಾರವು ಆರ್ಥಿಕವಾಗಿ ರಾಜಕೀಯವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿ ತೀರಾ ಹಿಂದುಳಿದ ಸಮಾಜ ಈ ಸಮಾಜವನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕೆಂದು ಈ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸಮರ್ಪಕವಾಗಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು ಈ ಸಮುದಾಯದ ಜನತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸಲಿ ಎಂದು ಹೇಳಿದರು.ಪ್ರಾಸ್ತಾವಿಕ ನುಡಿ -ಕಲಬುರಗಿ ಜಿಲ್ಲಾಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ ಅವರು ಮಾತನಾಡಿ ಬಸವ ಬೆಳಗಿದ ನಾಡಿನಲ್ಲಿ ಅನೇಕ ಜ್ಯೋತಿ ಯಾತ್ರೆಯ ಮೂಲಕ ಕರ್ನಾಟಕ,ಆಂಧ್ರ,ಮಹಾರಾಷ್ಟ್ರ,ಗೋವಾ ರಾಜ್ಯಾದ್ಯಂತ ಸಂಚಾರ ಮಾಡಿ ಹಡಪದ ಸಮಾಜವನ್ನು ಸಂಘಟಿಸಿದರು ಮತ್ತು ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಜಗದ್ಗುರುಗಳು, ಜ್ಞಾನಿಗಳು,ಕಾಯಕ ಮತ್ತು ದಾಸೋಹಕ್ಕೆ ಕೈಗನ್ನಡಿಯಾಗಿದ್ದ ಲಿಂಗೈಕ್ಯ ಶ್ರೀ ಬಸವಪ್ರೀಯ ಅಪ್ಪಣ್ಣ ಮಹಾಸ್ವಾಮಿಗಳು 16ನೇ ವರ್ಷದ ಪುಣ್ಯಸ್ಮರಣೆಯ ಭಕ್ತಿ ಪೂರ್ವಕ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹಡಪದ ಕೆಂಭಾವಿ ದೇವಿ ಆರಾಧಕರು ಹಾಗೂ ಮಾಜಿ ರಾಜ್ಯಾಧ್ಯಕ್ಷ ಅಣ್ಣಾರಾವ್ ನರಿಬೋಳ,ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ,ಜಿಲ್ಲಾ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್. ನಿರೂಪಣೆ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ ಮಾಡಿದರು.
ಸ್ವಾಗತ ಭಾಷಣ ಜಿಲ್ಲೆಯ ಕಾರ್ಯದರ್ಶಿ ರಮೇಶ್ ನೀಲೂರ ಮಾಡಿದರು ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ ಬಟಗೇರಾ,ಮಲ್ಲಿಕಾರ್ಜುನ ಹಡಪದ ಪರಹತ್ಬಾದ್,ಮಹಾಂತೇಶ ಇಸ್ಲಾಂಪೂರೆ,ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಮತ್ತು ಆನಂದ ಖೇಳಗಿ,ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ರಾವೂರ,ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ-ಸಂತೋಷ ಬಗದುರಿ, ಮತ್ತು ಸಮಾಜದ ಹಿರಿಯರು ಶಿವಶರಣಪ್ಪ ಯಳವಂತಗಿ,ಮಾಜಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಹಾಗರಗಿ,ನೌಕರ ಸಂಘದ ಜಿಲ್ಲಾಧ್ಯಕ್ಷ ಕುಂಪೇದ್ರ ಲಾಡಂತಿ,ಶಾಂತಪ್ಪ ಕಟ್ಟಿಮನಿ,ಸುಭಾಸ್ ಕರಾರಿ, ಯಾದಗಿರ ಜಿಲ್ಲಾಧ್ಯಕ್ಷ ಭಾಗಣ್ಣ ಇಟಗಿ,ಕಲಬುರಗಿ ನಗರಾಧ್ಯಕ್ಷ-ಮಲ್ಲಿಕಾರ್ಜುನ ಸಾವಳಗಿ,ಕಲಬುರಗಿ ಮಾಜಿ ನಗರಾಧ್ಯಕ್ಷ ಸುನೀಲ್ ಕುಮಾರ್ ಭಾಗಹಿಪ್ಪರರ್ಗಾ,ಕಲಬುರಗಿ ತಾಲೂಕಾಧ್ಯಕ್ಷ -ಚಂದ್ರಶೇಖರ ತೋನಸನಹಳ್ಳಿ,ಪ್ರ.ಕಾರ್ಯದರ್ಶಿ ವಿನೋಧ ಅಂಬಲಗಾ,ಚಿತ್ತಾಪುರ ತಾಲೂಕಾಧ್ಯಕ್ಷ ಭೀಮರಾವ್ ಮಾಸ್ತರ,ಕಾರ್ಯಾಧ್ಯಕ್ಷ ನಾಗರಾಜ ಸಾತನೂರ,ಸೇಡಂ ತಾಲೂಕಾಧ್ಯಕ್ಷ-ನಂದಕುಮಾರ ನಿಡಗುಂದಿ,ಶಹಾಬಾದ ತಾಲೂಕು ಅಧ್ಯಕ್ಷ ಅನೀಲ ಹಳೇ ಶಹಾಬಾದ,ಪ್ರ.ಕಾರ್ಯದರ್ಶಿ ಸಿದ್ರಾಮ ಯಾಗಾಪೂರ,ಉಪಾಧ್ಯಕ್ಷರ-ಶಿವಲಿಂಗ ಸುಗೂರ, ಭಾಗಣ್ಣ ಮುತ್ತಕೋಡ್,ಶಿವಕುಮಾರ್ ಮಾರಡಗಿ, ತಾ.ಕಾರ್ಯಾಧ್ಯಕ್ಷ ಅನಿಲ ಮಾರಡಗಿ,ಸಂಘಟನಾ ಕಾರ್ಯದರ್ಶಿ-ತೋಟೇಂದ್ರ ಚನ್ನೂರ,ಸಮಾಜದ ಹಿರಿಯರ ಮುಖಂಡರು ನಾಗಣ್ಣ ಮುತ್ತಕೋಡ್,ರೇವಣಸಿದ್ದಪ್ಪ ಶಹಾಬಾದ,ಬಾಗಣ್ಣ ದಂಡಗುಂಡ,ಪ್ರಕಾಶ ಮಲಕೋಡ್,ದೂಳಪ್ಪ ಹಡಪದ ಹಳೇ ಶಹಾಬಾದ,ಬಸವರಾಜ ನಂದೆಳ್ಳಿ,ಮಹಾದೇವ ಹಡಪದ ವಡಗೇರಿ,ನೀಲಕಂಠ ಹಡಪದ ಹಳೇ ಶಹಾಬಾದ,ರಾಜು ಹಡಪದ,ಸುರೇಶ ಹಡಪದ ರಾವೂರ,ರಾಜಕುಮಾರ ಹಡಪದ ಹಳೇ ಶಹಾಬಾದ, ಹಾಗೂ ಶ್ರೀಮತಿ ಪ್ರಮೀಳಾ ಹಡಪದ ಚನ್ನೂರ, ದೇವಕಿ ಹಡಪದ ರಾವೂರ,ಶ್ರೀಮತಿ ಲಿಂಗಮ್ಮ ಹಡಪದ ವಾಡಿ,ಶ್ರೀಮತಿ ನಿರ್ಮಲಾ ಹಡಪದ ಸುಗೂರ ಎನ್,ಶ್ರೀಮತಿ ಮಲ್ಲಮ್ಮ ಹಡಪದ ಶಹಾಬಾದ,ಶ್ರೀಮತಿ ಕಮಲಮ್ಮ ಹಡಪದ ರಾವೂರ, ಶ್ರೀಮತಿ ಗೀತಾ ಹಡಪದ ರಾವೂರ ಸೇರಿದಂತೆ ಅನೇಕ ಸಮಾಜದ ಹಿರಿಯರು ಯುವಕರು ಮಹಿಳಾ ತಾಯಂದಿರು,ಮಕ್ಕಳು ಈ ಪುಣ್ಯಸ್ಮರಣೆ ಕಾರ್ಯಕ್ರಮ ನೂರಾರು ಸಮಾಜದ ಬಂಧುಗಳು ಭಾಗವಹಿಸಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.