ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರ ಬರುವುದು ತುಂಬಾನೇ ಕಷ್ಟಕರವಾಗಿದೆ ಇದನ್ನು ಸೇವಿಸುವುದು ಮತ್ತು ಮಾರಾಟ ಮಾಡುವುದು ದೊಡ್ಡ ಅಪರಾಧವಾಗಿದೆ ಒಂದು ವೇಳೆ ಮಾರಾಟ ಮಾಡುವುದು ಕಂಡು ಬಂದಿದ್ದೆ ಆದರೆ ಅಂತವರ ವಿರುದ್ಧ ಪೋಲಿಸ್ ಇಲಾಖೆ ನಿರ್ಧಾಕ್ಷಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ರವರು ತಿಳಿಸಿದರು.
ಪಟ್ಟಣದ ಇಂದು ಕಾಲೇಜ್ ಮತ್ತು ಕೊಟ್ಟೂರೇಶ್ವರ ಮಹಾವಿದ್ಯಾಲಯ ಕಾಲೇಜ್ ನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕುರಿತು ಮಾತನಾಡಿದರು.
ನಗರ ಪ್ರದೇಶದಲ್ಲಿರುವ ಶಾಲಾ ಕಾಲೇಜುಗಳ ಬಳಿಯೇ ಮಾದಕ ವಸ್ತುಗಳಾದ ಗಾಂಜಾ ಆಫೀಮು ಅಂತಹ ಅಪಾಯಕಾರಿ ವಸ್ತುಗಳು ಮಾರಾಟ ಮಾಡಲಾಗುತ್ತಿದ್ದು ಇದರಿಂದ ಅಪ್ರಾಪ್ತ ವಯಸ್ಸಿನವರು ದಾರಿ ತಪ್ಪಿ ಡ್ರಗ್ಸ್ ಮತ್ತಿನಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ನಮ್ಮ ಜೀವನವನ್ನು ಹಾಳು ಮಾಡಿಕೊಂಡು ಸಮಾಜದಲ್ಲಿ ಕಂಟಕವಾಗಿ ಪರಿಗಣಿಸಿದ್ದಾರೆ.ಆದ್ದರಿಂದಾಗಿ ಈಗಿನ ಯುವಕರು ಎಚ್ಚರವಹಿಸಿಕೊಂಡು ಮಾದಕ ವಸ್ತುಗಳಿಗೆ ದಾಸರಾಗದೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಯಾವರಾದರೂ ಇಂತಹ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವುದು ಸೇವನೆ ಮಾಡುವುದು ಕಂಡುಬಂದರೆ ಸೂಕ್ಷ್ಮವಾಗಿ ಮಾಹಿತಿ ಕೊಡಿ ಅಂತವರ ವಿರುದ್ಧ ನಿರ್ದಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಂಡು ಸೂಕ್ತ ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ಮಾಹಿತಿ ಕೊಟ್ಟವರ ಹೆಸರನ್ನು ಗುಪ್ತವಾಗಿ ಇರಿಸಲಾಗುವುದು ಎಂದು ಹೇಳಿದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು