ರಾಯಚೂರು:ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಿರವಾರ ನಿಲಯದ ಆಹಾರ ಮತ್ತು ಸಾಮಾಗ್ರಿಗಳನ್ನು ಕಳ್ಳಸಾಗಾಣಿಕೆ ಮಾಡಿ ಜಕ್ಕಲದಿನ್ನಿ ಗ್ರಾಮದ ಮನೆಯೊಂದರಲ್ಲಿ ಸಾಮಗ್ರಿಗಳನ್ನು ಇಟ್ಟು ಸಾಗಿಸಲು ಪ್ರಯತ್ನಿಸುತ್ತಿರುವ ನಿಲಯದ ಮೇಲ್ವಿಚಾರಕಿ ಗಾಯತ್ರಿ ಅವರನ್ನು ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಕೂಡಿದ ವಸತಿ ನಿಲಯವನ್ನು ವಿದ್ಯಾರ್ಥಿಗಳ ಶಾಲೆಗಳ ಹತ್ತಿರ ಇರುವ ಸುರಕ್ಷಿತ ಸ್ಥಳಕ್ಕೆ ನಿಲಯವನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಿರವಾರ ತಾಲೂಕು ಸಮಿತಿ ವತಿಯಿಂದ ಮಾನ್ಯ ತಹಶಿಲ್ದಾರರ ಸಿರವಾರ ಇವರ ಮುಖಾಂತರ ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಚಂದ್ರಶೇಖರ ಎಲ್ಲೇರಿ DYFI ಸಂಘಟನೆಯ ಮುಖಂಡರು ಹಾಗೂ ಚಿದಾನಂದ ಕರೆಗೂಳಿ ಎಸ್ ಎಫ್ ಐ ಸಂಘಟನೆಯ ತಾಲೂಕು ಅಧ್ಯಕ್ಷರು ಪ್ರತಾಪ್ ಸಂಘಟನೆಯ,ಮುಖಂಡರು ನಾಗರಾಜ್ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.