ಅಚ್ಚು ಮೆಚ್ಚಿನ ಹವ್ಯಾಸ ನಂದು
ಹೊಂದಾಣಿಕೆಯ ಗುಣ ಅರಿವದು
ದಿನವು ಸೂರ್ಯನ ಬೆಳಕು ಅಂದ
ಭೂಮಿಗೆ ಚಂದ್ರನ ಕಳೆವು ನೋಡು
ಷಡ್ಯಂತ್ರ ಮಾಡಬೇಡ ನರಭಕ್ಷಕ
ಸತ್ತಾಗ ಯಾರು ಬರೋದಿಲ್ಲ ಮೂರ್ಖ
ಹೂವಿನ ಅಲಂಕಾರವು ನೋಡು ಭಕ್ಷಕ
ಹಾಳ ಮಾಡಬೇಡ ಸುಂದರ ವನ ಬಕಾಸುರ
ಸಾಕಷ್ಟು ಸಮಯದ ಶ್ರಮ ಸಾರ್ಥಕ
ಸಾಹಸ ಮಾಡಲು ಸಾಧ್ಯವಿದೆ ಜೀವನಕ್ಕೆ
ನಿರ್ದೇಶನ ನೀಡಿದೆ ಮನಸಿನ ಮೂಲಕ
ತನವಿನ ಮನೆಗೆ ತೆರಳಿದೆ ಆತ್ಮವು
ಪರಸ್ಪರ ಇರಲಿ ನಂಬಿಕೆಯ ದಾರಿ
ಮೌನದ ಮಾತು ಬೆಳೆದು ನಿಂತಿದ ದಾರಿ
ಪ್ರೇಮವು ಹುಡುಕಿದೆ ಹೂಂದಾಣಿಕೆ ಗುರಿ
ಖುದ್ದು ಖುಷಿಪಡುವುದು ಒಳ್ಳೆಯದೆಕ್ಕೆ ಸರಿ
ಬೆಳಗಾದರೆ ನೆಮ್ಮದಿಯು ಹುಡುಕು
ಸಂಜೆಯ ಶತ್ರುತನ ಮರೆತುಬಿಡು
ಸಾಕು ರೋಷದ ಬುತ್ತಿ ಬಿಚ್ಚಿಬಿಡು
ನೆಮ್ಮದಿ ಸ್ವಲ್ಪ ಮಟ್ಟಿಗೆ ಖುಷಿ ಪಡು
-ಮಹಾಂತೇಶ ಖೈನೂರ,ಸಾ//ಯಾತನೂರ