ಪಾವಗಡ ಮತ್ತು ಚಳ್ಳಕೆರೆ ಗಡಿ ಭಾಗದ ಕೆಂಚಮ್ಮನಹಳ್ಳಿ ಗೇಟ್ ಬಳಿ ನಿರ್ಮಾಣವಾಗಿರುವ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಪಂಪ್ ಹೌಸ್ ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕಾಮಗಾರಿಯ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡುತ್ತಾ ಬಹಳಷ್ಟು ಬರಪೀಡಿತ ಪ್ರದೇಶವಾದ ಈ ಭಾಗಕ್ಕೆ ಹಲವು ವರ್ಷಗಳ ಹೋರಾಟದ ಫಲವಾಗಿ ತುಂಗಭದ್ರ ಕುಡಿಯುವ ನೀರು ತಾಲೂಕಿಗೆ ಹರಿಸುತ್ತಿದ್ದು ತುಂಬಾ ಸಂತೋಷವನ್ನು ತಂದ ವಿಚಾರ
ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ವಿಚಾರವಾಗಿ ವಿಧಾನಸಭೆಯಲ್ಲಿ ಅನೇಕ ಬಾರಿ ಹೋರಾಟ ಮಾಡಿದ ನಿದರ್ಶನಗಳು ಸಹ ಇವೆ. ಅದೇ ರೀತಿ ಪಾವಗಡ ತಾಲೂಕಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಾಯಕರು ಹಾಗೂ ಸಂಘ ಸಂಸ್ಥೆಗಳು ಸೇರಿ ಪಾದಯಾತ್ರೆಯನ್ನು ಮಾಡಿ ಸರ್ಕಾರಕ್ಕೆ ಒತ್ತಡವನ್ನು ತಂದಿದ್ದೆವು ಆಗಿನ ಘನ ಸರ್ಕಾರ ಎಲ್ಲರ ಬೇಡಿಕೆಯನ್ನು ಈಡೇರಿಸುವ ವಿಚಾರವನ್ನು ಮುಂದಿಟ್ಟುಕೊಂಡು ಸಮಸ್ಯೆಯನ್ನು ಅರಿತು ನಮ್ಮ ತಾಲೂಕಿಗೆ ಫ್ಲೋರೈಡ್ ಮುಕ್ತ ನೀರನ್ನು ಕೊಡಲು 2350 ಕೋಟಿಗಳ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಿತ್ತು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ನಮ್ಮ ತಾಲೂಕಿನ ಸರ್ವಪಕ್ಷದ ನಿಯೋಗವನ್ನು ಕೊಂಡೊಯ್ದು ತಾಂತ್ರಿಕ ವರದಿಯಲ್ಲಿ ಪಾವಗಡ ತಾಲೂಕನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಲು ಒತ್ತಾಯ ತಂದಿದ್ದರಿಂದ ಇಂದು ಭದ್ರಾ ಮೇಲ್ದಂಡೆ ಯೋಜನೆಯು ಸಹ ಅನುಷ್ಠಾನವಾಗಲಿದೆ. ಇದು ಯಾರೊಬ್ಬರ ಶ್ರಮವಲ್ಲ ತಾಲೂಕಿನ ಜನತೆಯ ಹೋರಾಟದ ಫಲ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್ ಸಿ ಅಂಜನಪ್ಪ ಮಾತನಾಡುತ್ತಾ ತಾಲ್ಲೂಕಿನ ಜನತೆ 20 ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ ಅಂದಿನ ಶಾಸಕರಾದ ಕೆ ಎಂ ತಿಮ್ಮರಾಯಪ್ಪನವರು ಬೆಳಗಾವಿ ಅಧಿವೇಶನದಲ್ಲಿ ಪಾವಗಡ ತಾಲೂಕಿನ ಜನತೆಗೆ ಫ್ಲೋರೈಡ್ ಮುಕ್ತ ನೀರನ್ನು ಕುಡಿಸುವ ಸಲುವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದಿದ್ದರು, ಅದೇ ರೀತಿ ನ್ಯಾಯಾಲಯದಿಂದಲೂ ಸಹ ಈ ತಾಲೂಕಿನಲ್ಲಿ ಫ್ಲೋರ್ಡ್ ಅಂಶ ವಾಗಿರ್ತಕ್ಕಂತ ನೀರು ವಿಷದ ಸಮಾನ ಎಂದು ಸೂಚನೆ ನೀಡಿತ್ತು ಈ ಎಲ್ಲರ ಪ್ರತಿಫಲದಿಂದ ಇಂದು ಪಾವಗಡ ತಾಲೂಕಿಗೆ ಕುಡಿಯೋ ನೀರು ಬರಲಿದೆ ಆದ ಕಾರಣ ಗಂಗೆ ಮಾತೆಯನ್ನು ಇಂದು ನಾವು ಸ್ವಾಗತಿಸಲು ಬಂದಿದ್ದೇವೆ ಎಂದು ತಿಳಿಸಿದರು.
ನಂತರ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಈರಣ್ಣನವರು ಮಾತನಾಡುತ್ತಾ ತಾಲೂಕಿನ ಜನತೆ ವಿಷ ಯುಕ್ತ ನೀರನ್ನು ಕುಡಿಯುತ್ತಿದ್ದ ಸಂದರ್ಭದಲ್ಲಿ ತುಂಗಭದ್ರಾ ಡ್ಯಾಮಿನ ನೀರನ್ನು ಪೈಪ್ ಲೈನ್ ಮುಖಾಂತರ ನಮ್ಮ ಪಾವಗಡ ತಾಲೂಕಿಗೆ ಸರಬರಾಜು ಆಗುತ್ತಿದೆ ತಾಲೂಕಿನ ಜನತೆಯ ಸಂಘಟಿತ ಹೋರಾಟದ ಪ್ರತಿಫಲವಾಗಿದೆ. ಅದೇ ರೀತಿ ಅಪ್ಪರ್ ಭದ್ರ ನೀರಿನ ಯೋಜನೆಯಿಂದ ಕೆರೆಗೆ ನೀರು ಹರಸುವ ಯೋಜನೆ ಸಹ ತ್ವರಿತವಾಗಿ ಪೂರ್ಣವಾದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ , ನಿಕಟ ಪೂರ್ವ ಅಧ್ಯಕ್ಷ ಫಲರಾಮ ರೆಡ್ಡಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚೆನ್ನಮಲ್ಲಯ್ಯ ಕೋಟಗುಡ್ಡ ಅಂಜನಪ್ಪ ಕಾರ್ಯದರ್ಶಿ ಗೋವಿಂದ ಬಾಬು ಗೌರವಾಧ್ಯಕ್ಷ ರಾಜಶೇಖರಪ್ಪ ವಿನಾಯಕ ಪ್ರಿಂಟರ್ಸ್ ಶಿವಕುಮಾರ್, ನಲ್ಲಪ್ಪ ಪ್ರಭಾಕರೆಡ್ಡಿ ಸಣ್ಣ ರೆಡ್ಡಿ, ಎನ್ ತಿಮ್ಮಾರೆಡ್ಡಿ, ಎಲ್ಎಸ್ ರೆಡ್ಡಿ
ಹಾಗೂ ಕಾರ್ಯಕರ್ತರು ಇದ್ದರು.