ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ವಾಲ್ಮೀಕಿ ನಾಯಕ ಸಮಾಜ ಸಂಘಟನೆಗಳು,ದಲಿತ ಪರ ಸಂಘಟನೆಗಳು,ರೈತಪರ ಸಂಘಟನೆಗಳು,ಕನ್ನಡ ಪರ ಸಂಘಟನೆಗಳು ಸೇರಿ ತಹಸಿಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ತಾಲೂಕು ವಾಲ್ಮೀಕಿ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪಾಳೇಗಾರ್ ಲೋಕೇಶ್ ಅವರು ಮಾತನಾಡಿ ತಾಲ್ಲೂಕಿನ ಕಣಿವೆನಹಳ್ಳಿ ಗ್ರಾಮದ ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿ ಮಲ್ಲಿಕಾರ್ಜುನ ಎಂಬುವ ವಿದ್ಯಾರ್ಥಿ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧನಾರ್ಥಿಯಾಗಿ ಪಿ.ಎಚ್.ಡಿ ಮಾಡುತ್ತಿರುವಾಗ ಸುಳ್ಳು ಆರೋಪ ಮಾಡಿ ಒಬ್ಬ ಹೆಣ್ಣು ಮಗಳನ್ನು ಲೈಂಗಿಕ ದೌರ್ಜನ್ಯ ಮಾಡಿ ಅವಳನ್ನು ಗರ್ಭಧಾರಣೆಯಗಲು ಮಲ್ಲಿಕಾರ್ಜುನ ನೀನೇ ಕಾರಣ ಎಂದು ಸುಳ್ಳು ಆಪಾಧನೆ ಮಾಡಿ ಇಲ್ಲ ಸಲ್ಲದ ಆರೋಪ ಮಾಡುವ ಜೊತೆಗೆ ಜಾತಿ ನಿಂದನೆ ಮಾಡಿ ಅದೇ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ಮಾಡುತ್ತಿರುವ ನಿತ್ಯಾನಂದ ಬಿ. ಶೆಟ್ಟಿ ಎಂಬಾತಾನಿಂದ ಮಲ್ಲಿಕಾರ್ಜುನ ರವರಿಗೆ ಬೆದರಿಕೆ ಮಾಡಿದ್ದಲ್ಲದೆ ಅವನ ಮೇಲೆ ಪೋಕ್ಸೋ ಕೇಸು ದಾಖಲು ಮಾಡಿಸುವಂತೆ ಮಾಡಿದ್ದಾರೆ ನ್ಯಾಯ ಪಂಚಾಯಿತಿ ಸಹ ನಿತ್ಯಾನಂದ ಶೆಟ್ಟಿ ರವರೆ ಮಾಡುತ್ತಾರೆ ರಾಜಿ ಸಂಧಾನಗಳ ನಾಟಕ ಮಾಡುತ್ತಾರೆ ಪೊಲೀಸ್ ಠಾಣೆಗೆ ದೂರು ಕೊಡಿಸಿ ಪರಿಚಯ ಇಲ್ಲದ ಹೆಣ್ಣು ಮಗಳನ್ನು ಕರೆತಂದು ಮಲ್ಲಿಕಾರ್ಜುನ ನೀನೇ ಇವಳ ಗರ್ಭಧಾರಣೆಗೆ ಕಾರಣ ಅಂತ ಆಪಾದನೆ ಮಾಡಿ ಮಲ್ಲಿಕಾರ್ಜುನ ಮಾಡುತ್ತಿರುವ ಪಿ.ಎಚ್.ಡಿ. ಸಂಶೋಧನಾ ವಿಷಯಕ್ಕೆ ವಿಷಯದ ಅರ್ಜಿಯನ್ನು ವಜಾ ಮಾಡಲು ಮಲ್ಲಿಕಾರ್ಜುನ್ ವಿದ್ಯಾರ್ಥಿಯಿಂದ ಬಲವಂತವಾಗಿ ಮುಚ್ಚಳಿಕೆ ಪತ್ರ ಬೆದರಿಸಿ ಜಾತಿ ನಿಂದನೆ ಮಾಡಿ ಲೈಂಗಿಕ ಆರೋಪವರಿಸಿ ಬರೆಸಿರುತ್ತಾರೆ ಅಲ್ಲಿ ನೆಡೆಯುವ ಎಲ್ಲಾದಕ್ಕೂ ಮೂಲ ಕಾರಣಿ ನಿತ್ಯಾನಂದ ಶೆಟ್ಟಿ ಮಾಡುವ ಪಿತೂರಿ ಆಗಿರುತ್ತದೆ ಮಲ್ಲಿಕಾರ್ಜುನ ಬರೆದು ಕೊಟ್ಟ ಪತ್ರ ಹಾಗೂ ಆ ಹೆಣ್ಣನ್ನು ನೀನೇ ಮದುವೆ ಆಗಬೇಕು ಎಂದು ಪ್ರಾಣ ಬೆದರಿಕೆ ಹಾಕುತ್ತಾನೆ ಪತ್ರ ಬರೆದ ನಂತರ ಅದನ್ನು ಮೂರು ನಾಲ್ಕು ಜನ ಪ್ರಧ್ಯಾಪಕರ ಸಮ್ಮುಖದಲ್ಲಿ ನೀನೇ ಜೋರಾಗಿ ಓದು ಎಂದು ಹೇಳಿ ಅದನ್ನು ಫೋಟೋ ವಿಡಿಯೋ ರೆಕಾರ್ಡ್ ಸಮೇತ ಮಾಡಲು ನಾಲ್ಕೈದು ಜನರಿಂದ ರೌಡಿ ಹುಡುಗರು ಬೆದರಿಸಿ ಓದಿಸುತ್ತಾರೆ ಅದನ್ನು ರೆಕಾರ್ಡ್ ಸಹ ಮಾಡಿಕೊಳ್ಳುತ್ತಾರೆ 19.12 2022 ರಂದು ತುಮಕೂರು ಮಹಿಳಾ ಠಾಣೆಯಲ್ಲಿ ಮಲ್ಲಿಕಾರ್ಜುನ ಎಂಬ ವಿದ್ಯಾರ್ಥಿ ವಿರುದ್ಧ ಪೋಕ್ಸ್ ಕಾಯಿದೆಯಡಿ ಕೇಸು ದಾಖಲು ಆಗುತ್ತದೆ ಜೈಲಿಗೂ ಕಳಿಸುತ್ತಾರೆ ನಂತರವಾದ ವಿವಾದ ಕಾನೂನು ಸಮಾಕ್ಷಮದಲ್ಲಿ ನೆಡೆದು 27.01.2024 ರಂದು ಮಲ್ಲಿಕಾರ್ಜುನ ಎಂಬ ವಿದ್ಯಾರ್ಥಿ ಹೆಣ್ಣು ಮಗಳ ಡಿ. ಎನ್. ಎ. ಪರೀಕ್ಷೆ ಎಸ್. ಎಪ್.ಎಲ್ ವರದಿಯಲ್ಲಿ ಹೆಣ್ಣು ಮಗಳು ಗರ್ಭಿಣಿಯಗಲು ಮಲ್ಲಿಕಾರ್ಜುನ ಕಾರಣನಲ್ಲ ಎಂದು ಆರೋಪ ಮುಕ್ತನೆಂದು ನ್ಯಾಯಾಲಯ ಆದೇಶ ಮಾಡಿರುತ್ತದೆ ಆರೋಪ ಮುಕ್ತನಾದ ಮಲ್ಲಿಕಾರ್ಜುನನಿಗೆ ತೇಜೋವದೆ ಮಾಡಿ ಜಾತಿ ನಿಂದನೆ ಮಾಡಿ ಅವನ ಭವಿಷ್ಯ ಹಾಳು ಮಾಡಿದ ತುಮಕೂರು ವಿಶ್ವ ವಿದ್ಯಾನಿಲಯದ ನಿತ್ಯಾನಂದ ಶೆಟ್ಟಿ ಎಂಬಾತನನ್ನು ಕರ್ತವ್ಯದಿಂದ ವಜಾ ಮಾಡಬೇಕು ಅವನ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲು ತುಮಕೂರು ಜಿಲ್ಲಾಧಿಕಾರಿಗಳು ಕುಲಪತಿಗಳು ರಾಜ್ಯಪಾಲರು ತನಿಖೆಯನ್ನು ಮಾಡಿಸಿ ಪ್ರತಿಭಾವಂತ ವಿದ್ಯಾರ್ಥಿ ಮಲ್ಲಿಕಾರ್ಜುನ ರವರ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಜೊತೆಗೆ ಜಾತಿ ನಿಂದನೆಯಡಿಯಲ್ಲಿ ನಿತ್ಯಾನಂದ ಶೆಟ್ಟಿ ರವರ ಮೇಲೆ ಕಾನೂನು ಪ್ರಕಾರ ಕ್ರಮ ಜರಿಗಿಸಬೇಕು ಇಲ್ಲಾವಾದರೆ ಮುಂದಿನ ದಿನಗಳಲ್ಲಿ ಹೋರಾಟ ಕರ್ನಾಟಕ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲು ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಮಯದಲ್ಲಿ ಪಾವಗಡ ತಹಸಿಲ್ದಾರ್ ಮುಖಾಂತರ ಮಾನ್ಯ ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗಳಿಗೆ,ಉಪಕುಲಪತಿಗಳಿಗೆ ಕಳಿಸಲು ಮನವಿ ಸಲ್ಲಿಸಲಾಯಿತು.
ಪಾವಗಡ ಪಟ್ಟಣದ ಪಟ್ಟಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಪತ್ರ ನೀಡಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಘ ಸಂಸ್ಥೆಗಳ ಮುಖಂಡರು ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ್ ರೈತ ಸಂಫದ ಅಧ್ಯಕ್ಷ ಪೂಜಾರಪ್ಪ ಕ.ರ.ವೇ. ಅಧ್ಯಕ್ಷ ಲಕ್ಷ್ಮೀನಾರಾಯಣ,ದಲಿತ ಸಂಘಟನೆಯ ಮುಖಂಡರಾದ ಡಿ.ಎಸ್.ಎಸ್. ಸಂಚಾಲಕರಾದ ನರಸಿಂಹಪ್ಪ,ದಲಿತ ಸಂಘಟನೆ ಮುಖಂಡ ಕಡಪಲ ಕೆರೆ ಹನುಮಂತ ರಾಯಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್,ಭಾಸ್ಕರ್ ನಾಯಕ,ಓಂಕಾರ್ ನಾಯಕ,ಹರ್ಷ ಆಸ್ಪತ್ರೆ ಈರಣ್ಣ,ಹನುಮಂತ ರಾಯ, ಕನ್ನಮೆಡಿ ಸುರೇಶ, ಟೈಲರ್ ನಾರಾಯಣಪ್ಪ,ಗುಂಡ್ಲಹಳ್ಳಿ ರಮೇಶ್, ಸುಮನ್ ಶ್ರೀರಾಮಪ್ಪ,ಪ್ರಗತಿ ರಾಮಂಜಿ ಅಂಜಿ,ಬೆಳ್ಳಿ ಬಟ್ಲು ಬಲರಾಮ್,ಈಶ್ವರ್, ಮಣಿ ಪಿ ಎಲ್,ಸತ್ತಿ ಆಟೋ,ನಾಗೇಂದ್ರ ಅಘೋರ,ನರಸಿಂಹ ನಾಯಕ, ನಾಗರಾಜು ರಾಜುವಂತಿ ಅಶ್ವತ್ ಹಾಗೂ ನೂರಾರು ಯುವಕರು ಇದ್ದರು.