ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅವೈಜ್ಞಾನಿಕ,ಅಪೂರ್ಣ ಕಾಮಗಾರಿಯಿಂದಾಗಿ ಹೆಚ್ಚಾದ ಸಾವು-ನೋವು

ಉತ್ತರ ಕನ್ನಡ/ಅಂಕೋಲಾ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ, ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದ್ದು, ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿದೆ.ಘಟನೆಯಲ್ಲಿ ಹಲವರು ಮಣ್ಣಿನಡಿ 7 ಮಂದಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಖಾತ್ರಿಯಾಗಿದೆ ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಗುಡ್ಡ ಕುಸಿತ ರಬಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ,ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾರಿ ಮತ್ತಿತರ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ ಒಮ್ಮೆಲೆ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಆಚೆ ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದ್ದು,ಹೆದ್ದಾರಿ ಅಂಚಿಗಿರುವ ಟೀ ಸ್ಟಾಲ್ ,ವಾಹನಗಳಲ್ಲಿ ಎಷ್ಟು ಜನರಿದ್ದರು?ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆಯೇ ? ಗುಡ್ಡ ಕುಸಿತದ ವೇಳೆ ನಾಲ್ಕು ಜನ ಬಂಡೆ ಕೆಳಗೆ ಸ್ನಾನ ಮಾಡುತ್ತಿದ್ದರು ಎನ್ನುತ್ತಾರೆ ಸ್ಥಳೀಯರು.

ಪೊಲೀಸ್ ಅಗ್ನಿ ಶಾಮಕ,ಎನ್‌ಹೆಚ್ ಎಐ ಸುರಕ್ಷತಾ ಅಂಬುಲೆನ್ಸ್ ಮತ್ತಿತರ ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ವಿಷಯ ತಿಳಿದು,ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ,ಮಧ್ಯಾಹ್ನದೊಳಗೆ ಅಂಕೋಲಾಕ್ಕೆ ಬರುವುದಾಗಿ ತಿಳಿಸಿ, ಮತ್ತಷ್ಟು ಗುಡ್ಡ ಕುಸಿವ ಭೀತಿ ಇರುವುದರಿಂದ,ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ,ಸ್ಥಳೀಯರ ಹಾಗೂ ಹೆದ್ದಾರಿ ಸಂಚರಿಗಳ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು,ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಮಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ