ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಗ್ರಾ. ಪಂ ಕಾರ್ಯಾಲಯದ ಆವರಣದಲ್ಲಿ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಏರ್ಪಡಿಸಲಾಗಿತ್ತು.
ಇದೇ ವೇಳೆ ಸಾಮಾಜಿಕ ಲೆಕ್ಕ ಪರಿಶೋಧನಾ ನೋಡಲ್ ಅಧಿಕಾರಿ ನಾರಾಯಣ್ ಮಾತನಾಡಿ ನರೇಗಾ ಅಡಿಯಲ್ಲಿ ಪ್ರತಿ ಕುಟುಂಬಕ್ಕೂ 100 ದಿನಗಳ ಕೆಲಸ ನೀಡಬೇಕು ಪ್ರತಿ ದಿನಕ್ಕೆ 349 ರೂ ನೀಡಲಾಗುತ್ತದೆ.
ರಾಮಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 209 ಕಾಮಗಾರಿಗಳು ನಡೆದಿದೆ.ಗ್ರಾ.ಪಂ. ವತಿಯಿಂದ 206 ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ 03 ಕಾಮಗಾರಿ ನಡೆದಿದ್ದು, ಕೂಲಿ ಮೊತ್ತ =1,15,00,824 ಹಾಗೂ ಸಾಮಗ್ರಿ ಮೊತ್ತ 39,66,490ರೂ ಒಟ್ಟು 1,54,67,314 ರೂ ಖರ್ಚಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಪಿಡಿಒ ಪುಷ್ಪಲತಾ ಅವರು ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ಮಾಣ ಮಾಡಲು ಇಚ್ಛಿಸುವವರು ತಮ್ಮ ಮೂಲ ದಾಖಲೆಯೊಂದಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಸಂಪರ್ಕಿಸಬೇಕು, ನರೇಗಾ ಯೋಜನೆ ಅಡಿಯಲ್ಲಿ ಜಮೀನು ಮಟ್ಟ, ಕಲ್ಪಿಚಿಂಗ್, ಒಕ್ಕಣೆಕಳ, ಕೃಷಿ ಹೋಂಡ, ಸಮುದಾಯ ಶೌಚಾಲಯ, ಸಿಸಿ ರಸ್ತೆ, ಚರಂಡಿ ನಿರ್ಮಾಣ, ದನದ ಕೊಟ್ಟಿಗೆ, ಇನ್ನಿತರೆ ಕಾಮಗಾರಿಗಳಿದ್ದು, ಸಾರ್ವಜನಿಕರು ಹಾಗೂ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಮಲ್ಲು, ಗ್ರಾ. ಪಂ ಅಧ್ಯಕ್ಷ ರವಿ, ಪಿ ಡಿ ಓ ಪುಷ್ಪಲತಾ, ಬಿಲ್ ಕಲೆಕ್ಟರ್ ಹನುಮಂತ ಗ್ರಾ.ಪಂ ಸದಸ್ಯರುಗಳು, ಗ್ರಾ.ಪಂ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್