ತುಮಕೂರು/ಪಾವಗಡ:
ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿ ಒಬ್ಬರಿಗೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಸುಖಜೀವನ ನಡೆಸುವುದನ್ನು ಬಿಟ್ಟು ಕ್ಷುಲ್ಲಕ ಕಾರಣಕ್ಕೆ ದೂರವಾಗಿ ಬಹಳ ವರ್ಷಗಳಿಂದ ಬೇರೆ ಬೇರೆ ಯಾಗಿ ಜೀವಿಸುತ್ತಾ ಹಿರಿಯರು ಹಿತವಚನ ಗಳಿಗೆ,ರಾಜಿ ಪಂಚಾಯಿತಿಗಳಿಗೆ ಅವರಿಬ್ಬರೂ ಒಂದಾಗಲಿಲ್ಲ.ಕೊನೆಗೆ ಇಬ್ಬರೂ ಕೋರ್ಟು ಮೆಟ್ಟಲೇರಿದ ಹಿನ್ನೆಲೆ ಯಲ್ಲಿಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾದೇಶ ರವರ ಸಮ್ಮುಖದಲ್ಲಿ ಕೌನ್ಸೆಲಿಂಗ್ ಮಾಡಿದಾಗ ಗಂಡಹೆಂಡತಿ ಇಬ್ಬರೂ ಮತ್ತೊಮ್ಮೆ ಕೂಡಿ ಬಾಳಲು ನಿರ್ಧಾರಮಾಡಿ ನ್ಯಾಯಾಲಯದಲ್ಲಿ ಹೂವಿನಹಾರ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ನಾಂದಿ ಹಾಡಿದರು.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 101 ಪೈಕಿ 33ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುಧೀರ್ ರವರು 435ಪೈಕಿ 408ಪ್ರಕರಣಗಳನ್ನು,ಅಧಿಕ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಬಿ.ಪ್ರಿಯಾಂಕರವರು 407ಪೈಕಿ381ಪ್ರಕರಣಗಳನ್ನು ಇತ್ಯರ್ಥ ಗೊಳಿಸಿದರು.ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು ಒಂದುಕೋಟಿ ಐವತ್ತೇಳು ಲಕ್ಷ ನಲವತ್ತೇಳುಸಾವಿರದ ಐನೂರು ಅರವತ್ತೈದು ರೂಪಾಯಿಗಳಿಗೆ ರಾಜೀ ಮಾಡಲಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.