ಬೆಂಗಳೂರು: ಬಿ ಎಸ್ ಎಫ್ (ಬಾರ್ಡರ್ ಸೆಕ್ಯುರಿಟಿ ಪೋರ್ಸ್) ಕಾರಹಳ್ಳಿ ಕ್ಯಾಂಪಸ್ ನಲ್ಲಿ ೫೦೦ ಗಿಡ ನೆಡುವ ಕಾರ್ಯಕ್ರಮ
ಬಿ ಎಸ್ ಎಫ್ (ಬಾರ್ಡರ್ ಸೆಕ್ಯುರಿಟಿ ಪೋರ್ಸ್)ಕಾರಹಳ್ಳಿ ಕ್ಯಾಂಪಸ್ ನಲ್ಲಿ ಜೀವನ ಮುಕ್ತಿ ಪೌಂಡೇಶನ್, ಹೆಚ್ ಎಸ್ ಆರ್ ಸಿಟಿಜ಼ನ್ ಪೋರಮ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದೊಂದಿಗೆ ‘ಏಕ್ ಪೇಡ್ ಮಾ ಕಾ ನಾಮ್’ ಅಭಿಯಾನದಡಿಯಲ್ಲಿ ೫೦೦ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಬಿ ಎಸ್ ಎಫ್ ನ ಇನ್ಸ್ಪೆಕ್ಟ ರ್ ಜನರಲ್ (ಐಜಿ) ಯವರು ಚಾಲನೆ ನೀಡಿದರು.ಇದರಲ್ಲಿ ಸುಮಾರು ೪೦ ವಿವಿಧ ಬಗೆಯ ಹಲಸಿನ ಹಣ್ಣಿನ ಗಿಡಗಳೂ ಸೇರಿದ್ದವು.
ಈ ಸಂದರ್ಭದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಶ್ರೀ ಪಾರ್ಥಸಾರಥಿ ನಾಯ್ಡು, ಹೆಚ್ ಎಸ್ ಆರ್ ಸಿಟಿಜನ್ ಫೋರಂ ಮುಖ್ಯ ಪದಾಧಿಕಾರಿ ಶ್ರೀ ಬಿ ಎನ್ ಎಸ್ ರತ್ನಾಕರ್ ಮತ್ತು ಜೀವನ್ ಮುಕ್ತಿ ಪೌಂಡೇಶನ್ ನ ಮುಖ್ಯಸ್ಥೆ ಶ್ರೀಮತಿ ರೂಪಾ ರವರು ಭಾಗವಹಿಸಿದ್ದರು.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ.