ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಸುತ್ತಮುತ್ತಲ ಗುಡ್ಡಗಾಡು ಬಯಲು ಪ್ರದೇಶಗಳಲ್ಲಿ ಸಿಗುತ್ತಿದ್ದು ತಿನ್ನುವರ ಸಂಖ್ಯೆ ಹೆಚ್ಚಾಗಿದ್ದು ತುಂಬಾ ಬೇಡಿಕೆ ಯಾಗಿದೆ ಆದರೆ ಇದು ಮಾರ್ಕೆಟ್ ನಲ್ಲಿ ದೊರೆಯುವ ವಸ್ತು ಅಲ್ಲ ಹಾಗಾಗಿ ತುಂಬಾ ಬೇಡಿಕೆಯನ್ನು ಹೊಂದಿದೆ ಎನ್ನುತ್ತಾರೆ ಚಂದ್ರು ಹನುಮಸಾಗರ ವರ್ಷಕ್ಕೆ ಒಂದೇ ಬಾರಿ ದೊರೆಯುವ ರಾಮಬಾಣ ಸರ್ವ ರೋಗಕ್ಕೂ ಔಷಧಿಯ ಗುಣ ಹೊಂದಿದ ನೈಸರ್ಗಿಕ ಬೀಜವಿಲ್ಲದ ಪ್ರಕೃತಿಯ ವಿಸ್ಮಯ ಈ ಅಣಬೆ.ಪ್ರಸ್ತುತ ಜಪಾನ್ ಕ್ಯಾನ್ಸರ್ ಚಿಕಿತ್ಸೆಗಾಗಿ ಅನುಮೋದಿತ ಅಣಬೆ ಆಧಾರಿತ ಔಷಧಿಯನ್ನು ಹೊಂದಿದೆ
- ಅಣಬೆಯಲ್ಲಿನ ಸೆಲೆನಿಯಮ್ ಜೀವಕೋಶದ ಹಾನಿಯನ್ನು ತಡೆದು ದೇಹವು ಉತ್ಕರ್ಷಣ ನಿರೋಧಕಗಳನ್ನು ಮಾಡಲು ಸಹಾಯ ಮಾಡುತ್ತದೆ.
ಅಣಬೆಯಲ್ಲಿನ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿನ ದ್ರವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರಗಳು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ
ಬೀಟಾ ಗ್ಲುಕನ್ ಸೇರಿದಂತೆ ಅಣಬೆಗಳಲ್ಲಿನ ಸಂಯುಕ್ತಗಳು ಪ್ರಿ-ಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಯೋಜನಕಾರಿ ಕರುಳಿನ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಕರುಳು ನಮ್ಮ ರೋಗನಿರೋಧಕ ರಕ್ಷಣೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. - ಮಕ್ರೂಮ್ ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
- ಮಶೂಮ್‌ನಲ್ಲಿನ ವಿಟಮಿನ್ ಬಿ6 ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಅಣಬೆಯಲ್ಲಿನ ಸತು ಅಂಶವು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಶಿಶುಗಳು ಮತ್ತು ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
ಅಣಬೆ ಸೇವಿಸುವುದರಿಂದ ವಿಟಮಿನ್ ಡಿ2, ಒಂದು ರೀತಿಯ ವಿಟಮಿನ್ ಡಿ ದೊರೆತು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ವರದಿ ಪ್ರಭಾಕರ್ ಡಿ ಎಂ