ಯಲಬುರ್ಗಾ:ಕರ್ನಾಟಕದಲ್ಲಿ ಖಾಸಗಿ,ಅರೆಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿ ಸ್ಥಳೀಯ ಕನ್ನಡಿಗರಿಗೆ ಶೇ.೭೫ ರಷ್ಟು ಉದ್ಯೋಗ ಮೀಸಲಾತಿ ಕಾಯ್ದೆ ಜಾರಿ ಮಾಡಬೇಕು,ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ, ಕಾನೂನು ತರಬೇಕು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇಧಿಕೆ ಯಲಬುರ್ಗಾ ಘಟಕ ಸರ್ಕಾರವನ್ನು ಒತ್ತಾಯಿಸಿ,ಯಲಬುರ್ಗಾ ಕರವೇ ಘಟಕವು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.ಈ ವೇಳೆ ಕರವೇ ಅಧ್ಯಕ್ಷ ಶಿವಕುಮಾರ್ ನಾಗನಗೌಡ, ಸಂಘಟನೆಯ ಪದಾಧಿಕಾರಿಗಳಾದ ಶಿವಕುಮಾರ ನಿಡಗುಂದಿ, ಭೀಮೇಶ್ ಬಂಡಿವಡ್ಡರ, ರಾಮನಗೌಡ ಪಾಟೀಲ್, ಮಂಜುನಾಥ್ ಕಮ್ಮಾರ್, ಶ್ರೀಧರ್ ಸುರಕೋಡ, ಘನವಂತೇಶ್ ಚನ್ನಾದಾಸರ, ವಿರೇಶ್ ಬಳಗೇರಿ, ಚೆನ್ನಬಸಯ್ಯ,ವಿಜಯಕುಮಾರ,ಬಸವರಾಜ ಮಾಳಗಿ,ಕಾರ್ತಿಕ ಹೂಗಾರ,ಪ್ರಕಾಶ ಗಾಳಿ,ಶ್ರೀಕಾಂತ ಬಣಕಾರ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.