ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪದವಿಪೂರ್ವ ಕಾಲೇಜಿನಲ್ಲಿ ಪುನಃಶ್ಚೇತನ ಕಾರ್ಯಕ್ರಮ

ತುಮಕೂರು:ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ
ಶೇಷಾದ್ರಿಪುರಂ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಬೆಂಗಳೂರಿನ ಯಲಹಂಕ ಉಪನಗರದಲ್ಲಿರುವ
ಪದವಿಪೂರ್ವ ಕಾಲೇಜಿನಲ್ಲಿ ಪುನಃಶ್ಚೇತನ ಕಾರ್ಯಕ್ರಮ ಜರುಗಿತು.
ಇಂದು ಮೇಲ್ಕಂಡ ಆಶ್ರಯದಲ್ಲಿ ಸುಮಾರು 1500 ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪುನಃಶ್ಚೇತನಾ ಕಾರ್ಯಕ್ರಮ ಹಾಗೂ ಉತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಹಾಗೂ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪರಮ ಪೂಜ್ಯ ಶ್ರೀಮದ್ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಕಾಲೇಜಿನ ಮಹಾದ್ವಾರದಿಂದಲೇ ಪೂರ್ಣಕುಂಭದ ಸ್ವಾಗತ ದೊರೆಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಶೇಷಾದ್ರಿಪುರಂ ವಿದ್ಯಾಸಂಸ್ಥೆಗಳ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೆ ಪಿ ಕೃಷ್ಣರವರು ಉಪಸ್ಥಿತರಿದ್ದರು. ಕಾರ್ಯಕಮದ ಉದ್ಘಾಟನೆಯನ್ನು ಜ್ಯೋತಿ ಬೆಳಗುವುದರ ಮೂಲಕ ಪೂಜ್ಯ ಸ್ವಾಮೀಜಿಯವರಿಂದ ನೆರವೇರಿತು.
ಮುಖ್ಯ ಭಾಷಣಕಾರರಾಗಿ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಅಮೋಘವಾದ ಉಪನ್ಯಾಸವಿತ್ತರು. 1500ಕ್ಕೂ ಮಿಗಿಲಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಪೋಷಕರು ಮತ್ತು ಬೋಧಕ ವರ್ಗದ ಸದಸ್ಯರೆಲ್ಲರೂ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವನ್ನು ರೂಪಿಸುವ ಅತ್ಯುತ್ತಮವಾದ ಅವಕಾಶ ಇದಾಗಿದೆ ಎಂದು ಬಣ್ಣಿಸಿದ ಪೂಜ್ಯ ಸ್ವಾಮೀಜಿಯವರು ಪಂಚ ಸೂತ್ರಗಳನ್ನು ವಿವರಿಸಿದರು. ಆ ಪಂಚಸೂತ್ರಗಳೇ ಭಾರತೀಯ ಸನಾತನ ಧರ್ಮದ ಮೂಲ ಅಡಿಪಾಯ ಎಂದೇ ವಿವರಿಸಿದರು. ಪಂಚಸೂತ್ರಗಳಲ್ಲಿ ಮೊದಲನೆಯದಾಗಿ ಮಾತಾ ಪಿತೃಗಳನ್ನು ಗೌರವದಿಂದ, ಪ್ರೀತಿಯಿಂದ ಹಾಗೂ ಆಪ್ಯಾಯತೆಯಿಂದ ಕಂಡು ಅವರು ನಿಮಗಾಗಿ ಅಹರ್ನಿಷಿ ಶ್ರಮಿಸುತ್ತಾ ನಿಮ್ಮ ಶಿಕ್ಷಣಕ್ಕಾಗಿ ಎಂತಹ ಕಷ್ಟಗಳನ್ನು ಎದುರಿಸುತ್ತಾ ನಿಮಗೆ ಅತ್ಯುತ್ತಮವಾದ ಶಿಕ್ಷಣ ದೊರೆಯುವಂತೆ ಮಾಡಿರುವ ನಿಮ್ಮ ಮಾತಾಪಿತೃಗಳೇ ನಿಮಗೆ ದೇವರು ಎಂದು ಬಣ್ಣಿಸಿದರು. ಸನಾತನ ಸಂಸ್ಕೃತಿಯಲ್ಲಿ ಉಪನಿಷತ್ತು ಅದರಲ್ಲಿಯೂ ತೈತ್ತರೀಯ ಉಪನಿಷತ್ತಿನ ಭಾಗವನ್ನು ವಿವರಿಸಿದರು. ತದನಂತರ ಗುರುವರ್ಯರಿಗೆ, ಆಚಾರ್ಯರುಗಳಿಗೆ, ಹಿರಿಯರಿಗೆ ಗೌರವ ಸಲ್ಲಿಸುವುದು, ವಿಧೇಯರಾಗಿ ನಡೆದುಕೊಳ್ಳುವುದು ಮತ್ತೆಲ್ಲದಕ್ಕಿಂತ ಮಿಗಿಲಾಗಿ ಶಿಕ್ಷಣ ನೀಡುತ್ತಿರುವ ಆಚಾರ್ಯರುಗಳಿಗೆ ದೇವರ ಸಮಾನವಾಗಿ ಕಂಡು ಗೌರವಿಸುವುದು ಭಾರತೀಯ ಸಂಸ್ಕೃತಿಯ ವಿದ್ಯಾರ್ಥಿಗಳ ಆದಮ್ಯ ಕರ್ತವ್ಯ ಎಂದು ತಿಳಿಸಿದರು. ಮೂರನೆಯ ಅಂಶವಾದ ಮೌಲ್ಯಾಧಾರಿತ ಜೀವನವನ್ನು ನಡೆಸುವುದು ಪ್ರತಿಯೊಬ್ಬರ ಮುಖ್ಯ ಉದ್ದೇಶ. ಜೀವನದಲ್ಲಿ ಗುರಿಯನ್ನು ಹೊಂದಿದ್ದು ಆ ಗುರಿಯನ್ನು ಮುಟ್ಟುವ ತನಕ ನಿಲ್ಲದೆ ಅತ್ಯುತ್ತಮ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳುವುದೇ ಜೀವನದ ಮುಖ್ಯ ಗುರಿಯಾಗಬೇಕು ಎಂದು ಅನೇಕ ಉದಾಹರಣೆಗಳನ್ನು ಅದರಲ್ಲಿಯೂ ಸ್ವಾಮಿ ವಿವೇಕಾನಂದ, ರಾಮತೀರ್ಥ, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್, ಮುಂತಾದವರ ಜೀವನವನ್ನು ಸ್ಫೂರ್ತಿದಾಯಕವಾಗುವಂತೆ ಈ ಮಹಾತ್ಮರು ನೀಡಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿದಾಗಲೇ ನವಭಾರತ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು. ತದನಂತರ ಸಮಾಜ ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ತರವಾದ ಛಾಪನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಮಾಜದಲ್ಲಿನ ದೀನರು, ದುಃಖಿಗಳು ಹಾಗೂ ಸಂಕಷ್ಟದಲ್ಲಿರುವವರನ್ನು ನಮ್ಮವರಂತೆಯೇ ಕಂಡು ಅವರಿಗೆ ಸೇವೆ ಸಲ್ಲಿಸುವುದು ಹಾಗೂ ಈ ಸಮಾಜದಲ್ಲಿ ಯಾರೊಬ್ಬರೂ, ಯಾವುದೇ ಪಶುಪ್ರಾಣಿಗಳು ನೋವಿನಿಂದ ಬಳಲಬಾರದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಲೋಕ ಕಲ್ಯಾಣದ ಕಾರ್ಯಗಳನ್ನು ಮಾಡುವುದಾದರೆ ನಿಜವಾದ ಅರ್ಥದಲ್ಲಿ ನಾಗರಿಕ ಎನಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ಕೊನೆಯಲ್ಲಿ ಐದನೇ ಹಾಗೂ ಅತ್ಯಂತ ಮುಖ್ಯವಾದ ಅಂಶವಾದ ದೇಶಪ್ರೇಮ, ದೇಶಾಭಿಮಾನ ಹಾಗೂ ಸಹಸ್ರ ಸಹಸ್ರ ವರುಷಗಳಿಂದ ಭಾರತ ದೇಶಕ್ಕೆ ಒಲಿದು ಬಂದಿರುವ ಮಹಾನ್ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವಂತಹ ದೇಶಪ್ರೇಮಿಯಾಗಿ ಜೀವಿಸಬೇಕು. ನನ್ನಿಂದ ಈ ದೇಶಕ್ಕೆ ಏನು ಕೊಡುಗೆ ಎಂಬುದನ್ನು ಸಿಂಹಾವಲೋಕನ ಮಾಡಿಕೊಂಡಾಗ ಅರಿವಾಗುತ್ತದೆ, ಎಷ್ಟು ಅಲ್ಪ ಮತಿಯುಳ್ಳವರು ನಾವು ಎಂದು ಬಣ್ಣಿಸಿದರು. ಒಟ್ಟಿನಲ್ಲಿ 1500ಕ್ಕೂ ಹೆಚ್ಚಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಹಾಗೂ ಪೋಷಕರ ಹೃದಯದಲ್ಲಿ ಒಂದು ರೀತಿಯ ಚಿಂತನ-ಮಂಥನವನ್ನೇ ತಮ್ಮ ಅದ್ಭುತ ವಾಗ್ಝರಿಯಿಂದ ಸೃಷ್ಟಿ ಮಾಡಿ ಸ್ಫೂರ್ತಿ ನೀಡಿದರು ಎಂದರೆ ತಪ್ಪಾಗಲಾರದು. ತದನಂತರ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವೂಡೆ ಪಿ ಕೃಷ್ಣ ರವರು ತಮಗೂ ಸ್ವಾಮಿ ಜಪಾನಂದಜೀ ರವರಿಗೂ ಕಳೆದ ಐವತ್ತು ವರ್ಷಗಳಿಂದ ಒಂದು ಸಂಬಂಧ ಇರುವುದನ್ನು ವಿವರಿಸಿ 1975ನೇ ಇಸವಿಯಲ್ಲಿ ತಾನು ಶ್ರೀ ರಾಮಕೃಷ್ಣ ವಿದ್ಯಾಶಾಲೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಿಂದಲೂ ಪೂಜ್ಯ ಸ್ವಾಮೀಜಿಯವರನ್ನು ಕಂಡಿದ್ದು ಅವರ ಅಪ್ರತಿಮ ಮೇಧಾಶಕ್ತಿ, ಕ್ರಿಯಾಶಕ್ತಿ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಸ್ವತಃ ಕಂಡಿರುವ ತಮಗೆ ಸ್ವಾಮೀಜಿಯವರನ್ನು ಕಂಡಾಗ ಅತ್ಯಂತ ಹೆಮ್ಮೆಯಾಗುತ್ತದೆ ಎಂದು ವಿವರಿಸಿದರು. ಜೊತೆಯಲ್ಲಿಯೇ ಇತರರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ಕೇವಲ ಪ್ರಚಾರಕ್ಕಾಗಿ ಉಪಯೋಗಿಸುತ್ತಾರೆಯೇ ವಿನಃ ಪೂಜ್ಯ ಸ್ವಾಮಿ ಜಪಾನಂದಜೀ ರವರಂತೆ ಅನುಷ್ಠಾನಕ್ಕಾಗಿ ಶ್ರಮಿಸುವವರು ತೀವ್ರ ವಿರಳ ಎಂದು ಪೂಜ್ಯ ಸ್ವಾಮೀಜಿಯವರನ್ನು ಮುಕ್ತ ಕಂಠದಿಂದ ಸಭೆಗೆ ಪರಿಚಯಿಸಿದರು. ನಂತರ ಶೇಷಾದ್ರಿಪುರಂ ವಿದ್ಯಾಸಂಸ್ಥೆಗಳ ಪರವಾಗಿ ಪೂಜ್ಯ ಸ್ವಾಮೀಜಿಯವರಿಗೆ ಗೌರವವನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ||ದೊಡ್ಡೇಗೌಡ ಹಾಗೂ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾದ ಶ್ರೀ ಬಿ.ಸಿ.ಲೋಕನಾಥ್ ಮತ್ತು ಎಲ್ಲ ಬೋಧಕ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ