ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಅಜ್ಜನ ಜಾತ್ರೆ ವಿಶೇಷವಾಗಿ ಜರುಗಿತು. ಅಜ್ಜನ ಪಲ್ಲಕ್ಕಿ ಅಂಬಾರಿ ಮೆರವಣಿಗೆಗೆ ಸಿದ್ದಲಿಂಗ ದೇವರು ಚಾಲನೆ ನೀಡಿದರು ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಅಜ್ಜನ ಅಂಬಾರಿಗೆ ಮನೆ ಮುಂದಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಅಜ್ಜನ ಅಂಬಾರಿಗೆ ಸ್ವಾಗತ ಕೋರಿದರು ಕತ್ರಿಬಾಜರ್ ಬಸವೇಶ್ವರ ಸರ್ಕಲ್ ಅಂಬೇಡ್ಕರ್ ಸರ್ಕಲ್ ಬಸ್ ನಿಲ್ದಾಣ ಅಜ್ಜನ ಪಲ್ಲಕಿ ಅಂಬಾರಿ ಮೆರವಣಿಗೆ ಮಾಡಿ 19 /7/2024ರಂದು /5-30ಘಂಟೆಗೆ ರಥೋತ್ಸವಕ್ಕೆ ಸಿದ್ದಲಿಂಗ ದೇವ್ರು ಚಾಲನೆ ನೀಡಿದರು ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥೋತ್ಸವ ಜರುಗಿತು ಅಜ್ಜನ ಜಾತ್ರೆ ಅಂದರೆ ಜಾತಿ ಭೇದ ಇರಲಾರದ ಜಾತ್ರೆ ಅಂತ ಪ್ರತೀತಿ ಇದೆ ಹಿಂದೂ ಮುಸ್ಲಿಮರು ಒಂದಾಗಿ ಆಚರಿಸುವ ಜಾತ್ರೆ ಇದು ತಾಳಿಕೋಟೆ ಖಾಸ್ಗತಪ್ಪನ್ ಜಾತ್ರೆ ಅಂತಲೇ ಹೆಸರುವಾಸಿಯಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.