ಮಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ಹಾಗು ಬೆಂಗಳೂರು ನಗರಗಳನ್ನು ಸಂಪರ್ಕಿಸುವ ಘಾಟ್ಸ್ ರಸ್ತೆಗಳಲ್ಲಿ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ನಿಟ್ಟಿನಲ್ಲಿ ಮಂಗಳೂರು ಹಾಗು ಬೆಂಗಳೂರು ನಡುವೆ ವಿಶೇಷ ರೈಲು ಸೇವೆ ಒದಗಿಸಲು ನೈರುತ್ಯ ರೈಲ್ವೆ ವಲಯಕ್ಕೆ ಇಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸನ್ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮನವಿ ಮಾಡಿದ್ದರು. ಸನ್ಮಾನ್ಯ ಸಂಸದರ ಮನವಿಗೆ ತಕ್ಷಣ ಸ್ಪಂದಿಸಿದ ನೈರುತ್ಯ ರೈಲ್ವೆ ವಲಯವು ಜುಲೈ 19ರಿಂದ 22ರ ತನಕ ವಿಶೇಷ ರೈಲುಗಳನ್ನು ಓಡಿಸಲಿದೆ.
ರೈಲು ಸಂಖ್ಯೆ 06547 ಕ್ರಾ.ಸಂ.ರಾ ಬೆಂಗಳೂರು-ಮಂಗಳೂರು ಜಂಕ್ಷನ್ ವಿಶೇಷ ರೈಲು ಕ್ರಾ.ಸಂ.ರಾ ಬೆಂಗಳೂರು ರೈಲು ನಿಲ್ದಾಣದಿಂದ ದಿನಾಂಕ 19ರಂದು ರಾತ್ರಿ 11 ಗಂಟೆಗೆ ಹೊರಟು ಸರ್. ಎಂ ವಿಶ್ವೇಶ್ವರಯ್ಯ ಟರ್ಮಿನಲ್,ಚಿಕ್ಕ ಬಾಣಾವರ ಜಂಕ್ಷನ್,ಕುಣಿಗಲ್ ಮಾರ್ಗವಾಗಿ ದಿನಾಂಕ 20ರಂದು ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ದಿನ ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಮಧ್ಯಾಹ್ನ 1:40ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಹೊರಟು ಕುಣಿಗಲ್ ಮಾರ್ಗವಾಗಿ ರಾತ್ರಿ 11:15ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
ಈ ರೈಲಿಗೆ ಕ್ರಾ.ಸಂ.ರಾ ಬೆಂಗಳೂರು ಹೊರತುಪಡಿಸಿ(ಮಂಗಳೂರಿಗೆ ಹೋಗುವಾಗ ಮಾತ್ರ), ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್(ಮಂಗಳೂರಿಗೆ ಹೋಗುವಾಗ ಮಾತ್ರ),ಚಿಕ್ಕ ಬಾಣಾವರ ಜಂಕ್ಷನ್,ನೆಲಮಂಗಲ,ಕುಣಿಗಲ್,ಚನ್ನರಾಯಪಟ್ಟಣ,ಹಾಸನ ಜಂಕ್ಷನ್,ಸಕಲೇಶಪುರ,ಸುಬ್ರಹ್ಮಣ್ಯ ರೋಡ್,ಕಬಕ ಪುತ್ತೂರು,ಬಂಟ್ವಾಳ,ಮಂಗಳೂರು ಜಂಕ್ಷನ್,ಯಶವಂತಪುರ ಜಂಕ್ಷನ್(ಬೆಂಗಳೂರಿಗೆ ಹೋಗುವಾಗ ಮಾತ್ರ) ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ರೈಲು ಸಂಖ್ಯೆ 06549 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಕ್ರಾ.ಸಂ.ರಾ ಬೆಂಗಳೂರು ರೈಲು ನಿಲ್ದಾಣದಿಂದ ದಿನಾಂಕ 21 ಹಾಗು 22ರಂದು ರಾತ್ರಿ 11 ಗಂಟೆಗೆ ಹೊರಟು ಚಿಕ್ಕ ಬಾಣಾವರ ಜಂಕ್ಷನ್,ಕುಣಿಗಲ್ ಮಾರ್ಗವಾಗಿ ದಿನಾಂಕ 23 ಹಾಗು 24ರಂದು ಬೆಳಗ್ಗೆ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ದಿನ ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ವಿಶೇಷ ರೈಲು ಮಧ್ಯಾಹ್ನ 1:40ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಹೊರಟು ಕುಣಿಗಲ್ ಮಾರ್ಗವಾಗಿ ರಾತ್ರಿ 11:15ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
ಈ ರೈಲಿಗೆ ಯಶವಂತಪುರ ಜಂಕ್ಷನ್ ಹೊರತುಪಡಿಸಿ ಚಿಕ್ಕ ಬಾಣಾವರ ಜಂಕ್ಷನ್,ನೆಲಮಂಗಲ,ಕುಣಿಗಲ್,ಚನ್ನರಾಯಪಟ್ಟಣ,ಹಾಸನ ಜಂಕ್ಷನ್,ಸಕಲೇಶಪುರ,ಸುಬ್ರಹ್ಮಣ್ಯ ರೋಡ್,ಕಬಕ ಪುತ್ತೂರು,ಬಂಟ್ವಾಳ,ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಮಂಗಳೂರು ಹಾಗು ಬೆಂಗಳೂರು ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಉಂಟಾಗದಂತೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮಕೈಗೊಂಡ ಸನ್ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ನಮ್ಮ ಸಮಿತಿ ಹಾಗು ರೈಲು ಬಳಕೆದಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.
ಸಂಸದರ ಮನವಿಗೆ ತಕ್ಷಣ ಸ್ಪಂದಿಸಿ ವಿಶೇಷ ರೈಲು ಸೇವೆಯನ್ನು ಒದಗಿಸಲು ಕ್ರಮಕೈಗೊಂಡ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೂ ಧನ್ಯವಾದಗಳು.
ಪ್ರಯಾಣಿಕರು ಈ ವಿಶೇಷ ರೈಲು ಸೇವೆಗಳನ್ನು ಬಳಸಿ ಸುರಕ್ಷಿತವಾಗಿ ಪ್ರಯಾಣವನ್ನು ಮಾಡಬೇಕೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.