ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಶ್ವ ಮೆದುಳು ದಿನ ಆಚರಣೆ ಹಾಗೂ ಆರೋಗ್ಯ ಮೇಳ ಕಾರ್ಯಕ್ರಮ

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಪ್ರಾ.ಆ.ಕೇಂದದ ವ್ಯಾಪ್ತಿಯಲ್ಲಿ ಬರುವ ಗೋಗಿಕೋನ ಗ್ರಾಮದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಡೆಂಗೀ ವಿರೋಧಿ ಮಾಸಾಚರಣೆ, ವಿಶ್ವ ಮೆದುಳು ದಿನ ಆಚರಣೆ ಹಾಗೂ ಆರೋಗ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾ.ಆ. ಕೇಂದ್ರ ಗೋಗಿ ಸಹಯೋಗದಲ್ಲಿ ಗೋಗಿಕೋನ ಗ್ರಾಮದಲ್ಲಿ ಆರೋಗ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶ್ರೀಮತಿ.ಸಹನಾ ರಾಜಶೇಖರ ಅಧ್ಯಕ್ಷರು ಗ್ರಾ.ಪಂ ಗೋಗಿ (ಪಿ), ಶ್ರೀಮತಿ ಸಾಬಮ್ಮ ಮೋನಪ್ಪ ಹೊಸಮನಿ ಅಧ್ಯಕ್ಷರು ಗ್ರಾ.ಪಂ ಗೋಗಿ(ಕೆ) ಅವರು ಇತ್ತೀಚಿನ ಕಾರ್ಯಕ್ರಮ ಉದ್ಘಾಟಿಸಿದರು.
ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರು ಮಾತನಾಡಿ, ತಾಲೂಕಿನ ಗೋಗಿ ಪ್ರಾ.ಆ.ಕೇಂದದ ವ್ಯಾಪ್ತಿಯಲ್ಲಿ ಬರುವ ಗೋಗಿಕೋನ ಗ್ರಾಮದ ಸರಕಾರಿ ಪ್ರೌಢ ಶಾಲೆ ಹಾಗೂ ಹಿ.ಪ್ರಾ.ಶಾಲೆ (ಉರ್ದು) ಆವರಣದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಮೇಳದಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದುಕೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕು.
ಮೇಳದಲ್ಲಿ ಮಾಹಿತಿ, ತಪಾಸಣೆ, ಪರೀಕ್ಷೆ, ಚಿಕಿತ್ಸೆ, ರಾಷ್ಟ್ರೀಯ ಆರೋಗ್ಯ ದಿನಗಳ ಮಾಹಿತಿ ನೀಡಲಾಗುತ್ತದೆ. ಪೌಷ್ಠಿಕ ಆಹಾರ ಸೇವನೆಯಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದಾಗಿದೆ ಮತ್ತು ಸಧೃಡ ಆರೋಗ್ಯವನ್ನು ಪಡೆಯಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ರೋಗಗಳು ಬರುವ ಸಂಭವ ಕಡಿಮೆ ಇರುತ್ತದೆ. ಸಾಂಕ್ರಾಮಿಕ ಅಸಾಂಕ್ರಾಮಿಕ ರೋಗಗಳು ಬಾರದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು. ಆರೋಗ್ಯ ಮೇಳದ ಪ್ರಯೋಜ ಪಡೆದುಕೊಂಡು ಉತ್ತಮ ಆರೋಗ್ಯ ಹೊಂದಬೇಕೆಂದು ತಿಳಿಸಿದರು.
ಶಹಾಪೂರ ತಾಲೂಕ ಆರೋಗ್ಯ ಅಧಿಕಾರಿಗಳು ಡಾ.ರಮೇಶ ಗುತ್ತೇದಾರ ಅವರು ಮಾತನಾಡಿದ, ಪ್ರಸ್ತಾವಿಕವಾಗಿ ಮಾತನಾಡಿ ಆರೋಗ್ಯ ಮೇಳದಲ್ಲಿ ಉಚಿತವಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ತಪಾಸಣೆ ಪರೀಕ್ಷೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಸದರಿ ಮೇಳದ ಉಪಯೋಗ ಪಡೆದುಕೊಂಡು ಇತರರಿಗು ತಿಳಿಸಬೇಕೆಂದು ಸಲಹೆ ನೀಡಿದರು.

ಯಾದಗಿರಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಸಾಜೀದ ಅವರು ಮಾತನಾಡಿ, ಜುಲೈ ತಿಂಗಳಲ್ಲಿ ಡೆಂಗ್ಯೂ ಮಾಸಾಚರಣೆ ಕಾರ್ಯಕ್ರಮ ಮಳೆಗಾಲ ಆರಂಭವಾಗಿರುವುದರಿಂದ ಸ್ವಚ್ಚವಾದ ನೀರಿನಲ್ಲಿ ಡೆಂಗ್ಯೂ ರೋಗದ ಈಡಿಸ್ ಇಜಿಪ್ತೆ ಜಾತಿಯ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ ಹಾಗೂ ಸೊಂಕಿತ ಸೊಳ್ಳೆಗಳ ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಡಿಕೊಳ್ಳುವಂತೆ, ನೀರು ನಿಲ್ಲದಂತೆ, ಲಾರ್ವಾಗಳು ಉತ್ಪತ್ತಿ ಆಗದಂತೆ, ಘನತ್ಯಾಜ್ಯಗಳನ್ನು ವಿಲೇವಾರಿ ಮಾಡುಕೊಳ್ಳುವಂತೆ, ವಿಶ್ರಾಂತಿ ಪಡೆಯುವಾಗ ತಪ್ಪದೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋದಕಗಳನ್ನು ಬಳಸುವಂತೆ ತಿಳಿಸಿದರು.
ಯಾದಗಿರಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ಡಾ.ಸಂಜೀವಕುಮಾರ ಮಾತನಾಡಿ, ಕ್ಷಯರೋಗವು ಸಾಂಕ್ರಮಿಕವಾಗಿದ್ದು, ಇದರ ಲಕ್ಷಣಗಳು ಎರಡು ವಾರಕ್ಕಿಂತ ಮೇಲ್ಪಟ್ಟು ಕೆಮ್ಮು ಇದ್ದರೆ, ರಾತ್ರಿವೇಳೆ ಜ್ವರ ಬರುತ್ತಿದ್ದರೆ, ರಕ್ತ ಮಿಶ್ರಿತ ಕಫ ಬೀಳುತ್ತಿದ್ದರೆ, ಏಕಾಏಕಿ ತೂಕ ಕಡಿಮೆ ಆಗುತ್ತಿದ್ದರೆ ಇವುಗಳು ಕ್ಷಯರೋಗದ ಲಕ್ಷಣಗಳಾಗಿದ್ದು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಜ್ಯೋತಿ ಕಟ್ಟಿಮನಿ ಮಾತನಾಡಿ, ಇದು ವಿಶ್ವ ಜನಸಂಖ್ಯಾ ದಿನಾಚರಣೆ, ತಾಲೂಕ ವತಿಯಿಂದ ಹಮ್ಮಿಕೊಂಡಿದ್ದು, ಭಾರತವು ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ಇದು ದೇಶದ ಬೆಳವಣಿಗೆಗೆ ಮಾರಕವಾಗಲಿದ್ದು, ಜನಸಂಖ್ಯಾ ನಿಯಂತ್ರಿಸುವುದು ಅಗತ್ಯವಾಗಿದ್ದು, ಆದುದರಿಂದ ದಂಪತಿಗಳು ಒಂದು ಅಥವಾ ಎರಡು ಮಕ್ಕಳು ಸಾಕು, ಆರೋಗ್ಯ ಇಲಾಖೆಯಲ್ಲಿ ಸಿಗುವ ಶಾಶ್ವತ ಹಾಗೂ ತಾತ್ಕಾಲಿಕ ವಿಧಾನಗಳನ್ನು ಬಳಸಿಕೊಂಡು ಕುಟುಂಬ ನಿಯಂತ್ರಿಸುವುದು ಮತ್ತು ಬಾಲ್ಯವಿವಾಹ ತಡೆಗಟ್ಟುವುದು, ಹೆಣ್ಣು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಮುಟ್ಟಿನ ಸ್ವಚ್ಚತೆ ಕಡೆ ಗಮನಹರಿಸಬೇಕೆಂದು ತಿಳಿಸಿದರು.
ಮನೋವೈದ್ಯರು ಡಾ.ಅಮೀತ್ ಅವರು ಮಾತನಾಡಿ, ವಿಶ್ವ ಮೆದುಳು ದಿನದ ಕುರಿತು ಮನುಷ್ಯನ ಎಲ್ಲಾ ಆಂತರೀಕ ಮತ್ತು ಬಾಹ್ಯ ಕ್ರಿಯೆಗಳು ಮೆದುಳಿನ ಸಂದೇಶದೊಂದಿಗೆ ನಡೆಯುತ್ತಿದ್ದು ಮೆದುಳಿನ ಆರೋಗ್ಯದ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಗೋಗಿ ಅಂಗನವಾಡಿ ಮೇಲ್ವಿಚಾರಕಿ ವಲಯ ಶ್ರೀಮತಿ.ವಿದ್ಯಾಶ್ರೀ ಅವರು ಮಾತನಾಡಿ, ಗ್ರಾಮದಲ್ಲಿ ಆರೋಗ್ಯ ಮೇಳ ಹಮ್ಮಿಕೊಂಡಿದ್ದು ಸಂತಸದ ವಿಷಯವಾಗಿದ್ದು, ಸದರಿ ಮೇಳದ ಪ್ರಯೋಜನವನ್ನು ಪ್ರಾ.ಆ.ಕೇಂದ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ತುಳಸಿರಾಮ ನಿರೂಪಿಸಿದರು. ಪ್ರಾರ್ಥನೆ ಗೀತೆ ಪ್ರಾ.ಆ.ಸು ಅಧಿಕಾರಿ ಶೀಮತಿ.ನೀಲಮ್ಮ ಹಾಡಿದರು, ಡಾ.ದೇವಿಪ್ರಸಾದ ಚಿಕ್ಕಮಠ ಅವರು ಸ್ವಾಗತ ಕೋರಿದರು, ಸ.ಆ.ಅಧಿಕಾರಿಶ್ರಿ. ಶಂಕರಲಿಂಗ ವಂದನಾರ್ಪಣೆ ನೇರವೆರಿಸಿದರು.
ಈ ಸಂದರ್ಭದಲ್ಲಿ ಹೆಚ್.ಎಸ್ ಶಾಂತಿಲಾಲ. ಬಿ.ಹೆಚ್.ಇ.ಓ ಬಸವರಾಜ, ಶ್ರೀಮತಿ ಮಹಾಲಕ್ಷ್ಮಿ, ಸುದರ್ಶನ, ಶಾಲಾ ಮುಖ್ಯಗುರುಗಳಾದ ಈರಣ್ಣ ಹೊಸಮನಿ, ಶರಣಪ್ಪ ತಳವಾರ, ಸಹ ಶಿಕ್ಷಕರಾದ ಕಲ್ಯಾಣ ಶೆಟ್ಟಿ, ಪರಮೇಶ್ವರ, ಮಲ್ಲಪ್ಪ ಕಾಂಬ್ಳೆ, ಸಂಗಣ್ಣ ನುಚ್ಚಿನ, ಮರೆಪ್ಪ ಹಿ.ಆ.ನಿರೀಕ್ಷಣಾಧಿಕಾರಿಗಳು, ಡಾ.ವಿ.ಎಮ್ ಪಾಟೀಲ್, ಬಸವರಾಜ ಅವಟಿ, ಅಮರದೀಪ, ಲಕ್ಷ್ಮಿಕಾಂತ, ಫುರಖಾನ್ ಸಿ.ಹೆಚ್.ಓ, ವೀರಯ್ಯ ಸ್ವಾಮಿ, ಶ್ರೀ.ಸಿದ್ದಲಿಂಗೇಶ, ಮಂಜು ರಾಠೋಡ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ಶಿವರಾಜ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ