ರಾಯಚೂರು:ನಿನ್ನೆ ಸಿರವಾರ ಪಟ್ಟಣ ಪಂಚಾಯತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವಂತೆ ಕರ್ನಾಟಕ ರಕ್ಷಣೆ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸಿರವಾರ ತಾಲೂಕ ಘಟಕ ಪಟ್ಟಣ ಪಂಚಾಯತಿಯಲ್ಲಿ ಜನರಿಗೆ ಅನುಕೂಲವಾಗಲೆಂದು ಇರುತ್ತದೆ,ಆದರೆ ಜನರಿಗೆ ಮಾರಕವಾಗಿದ್ದು ಜನರು ದಿನಾಲೂ ಪಟ್ಟಣ ಪಂಚಾಯತಿಗೆ ಅಲೆದಾಡುವ ಅಂತಹ ಪರಿಸ್ಥಿತಿ ಉಂಟಾಗಿದೆ ಜನರು ಬೇಸತ್ತು ಹೋಗಿದ್ದಾರೆ ವರ್ಷಾನುಗಟ್ಟಲೆ ಆದರೂ ಜನರಿಗೆ ಯಾವುದೇ ಕಾಗದ ಪ್ರಮಾಣ ಪತ್ರಗಳು ಸಿಗುತ್ತಿಲ್ಲ ನಾಳೆ ಬಾ ನಾಡಿದ್ದ ಮುಂದಿನ ವಾರ ಬಾ ನಾಡಿದ್ದು ಬಾ ಅಂತ ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ..ಜನನ ಮರಣ ಪತ್ರಕ್ಕಾಗಿ ಖಾತಾಕ್ಕಾಗಿ ತಿರುಗಾಡಿಸುತ್ತಿದ್ದಾರೆ. ಸಿರವಾರದಲ್ಲಿ ಅಭಿವೃದ್ಧಿ ಶೂನ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುತ್ತಾ ಇಲ್ಲ ಅವರ ಇಚ್ಛೆಯಂತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಪಟ್ಟಣ ಪಂಚಾಯತಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲದಂತ ಪರಿಸ್ಥಿತಿ ಉಂಟಾಗಿದೆ ಎಂದು ಮುಂದಿನ ದಿನಗಳು ಹೀಗೆ ಮುಂದುವರೆದರೆ ಪಂಚಾಯತಿಯನ್ನು ಮುತ್ತಿಗೆ ಹಾಕುತ್ತೇವೆ ಎಂದು ಕರವೇ ರಕ್ಷಣಾ ವೇದಿಕೆ ಸಂಘಟನೆಯವರು ಎಚ್ಚರಿಕೆಯನ್ನು ನೀಡಿದರು. ಸಿರವಾರ ತಾಲೂಕು ಆಡಳಿತ ಅಧಿಕಾರಿಗಳಿಗೆ ತಹಸಿಲ್ದಾರ್ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ.ಕೆ ರಾಘವೇಂದ್ರ ಖಾಜಾನ ಗೌಡ ಹನುಮಂತ ಅಲಂ ಪಾಷಾ ಆಂಜನೇಯ ಹನುಮಂತ ಶೇಕರಾಯಸ್ವಾಮಿ ಗುರುದೇವ ರಮೇಶ್ ಬಸವರಾಜ್ ಹನುಮಂತ ಮಹಮ್ಮದ್ ಗೌಸ್ ಸುರೇಶ್ ಸ್ವಾಮಿ ಮಹೇಶ್ ಗುರುಬಸವ ವೆಂಕಟೇಶ್ ಶಂಕ್ರಿ ನಾಗೇಶ್ ಭೀಮೇಶ್ ತಿರುಪತಿ ಶರಣಬಸವ ಇನ್ನೂ ಮುಂತಾದವರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ