ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಗಾಂಧಿ ಚೌಕ್ ಹತ್ತಿರ ಇರುವ ಡಾ. ಎಪಿಜೆ ಅಬ್ದುಲ್ ಕಲಾಂ ಸಹಕಾರಿ ಸಂಘ ನಿಯಮಿತ ಬ್ಯಾಂಕ್, ಇದು ಇದೇ ವರ್ಷ 2024 ಜನವರಿ 19ನೇ ತಾರೀಕಿಗೆ ರಂದು ಪ್ರಾರಂಭಗೊಂಡು, ಮಾರ್ಚ್ ತಿಂಗಳ ನಂತರ ಹಣಕಾಸಿನ ವ್ಯವಹಾರ ಪ್ರಾರಂಭ ಮಾಡಿದ್ದು ಮುಧೋಳ್ ,ಜಮಖಂಡಿ, ರಬಕವಿ-ಬನಹಟ್ಟಿ ಮಹಾಲಿಂಗಪುರ,ತೇರದಾಳ ಈ ನಗರಗಳ ಷೇರು ಬಂಡವಾಳ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಐದು ತಿಂಗಳುಗಳಲ್ಲಿ ಒಂದು ಕೋಟಿ 50 ಲಕ್ಷ ರೂಪಾಯಿ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡಿ ಅವಳಿ ನಗರಗಳ ಹೆಮ್ಮೆಯ ಬ್ಯಾಂಕ್ ಎನಿಸಿಕೊಂಡಿದೆ.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವಂತ ಸಲಹಾ ಸಮಿತಿ ಸದಸ್ಯರುಗಳಿಗೆ ಸನ್ಮಾನ ಮಾಡಿ ನಂತರ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಬ್ಯಾಂಕ್ ಆಡಳಿತ ನಿರ್ದೇಶಕರ ಮಂಡಳಿಯ ಅಧ್ಯಕ್ಷ ರಫೀಕ್ ಬಾರಿಗಡ್ಡಿ , ಬ್ಯಾಂಕಿನ ಆಡಳಿತ ನಿರ್ದೇಶಕರ ಮಂಡಳಿ ಮತ್ತು ಸಿಬ್ಬಂದಿ ವರ್ಗವು ಅತಿ ಹೆಚ್ಚಿನ ಪ್ರಯತ್ನದಿಂದ ನಾವು ಅತ್ಯಂತ ಕಡಿಮೆ ಅವಧಿಯಲ್ಲಿ ಒಂದೂವರೆ ಕೋಟಿಗಿಂತ ಹೆಚ್ಚು ಹಣಕಾಸು ಹೊಂದಲು ಕಾರಣವಾಗಿದ್ದೇವೆ. ಆದ್ದರಿಂದ ಇನ್ನಷ್ಟು ಹೆಚ್ಚಿನ ಹಣಕಾಸು ಅಭಿವೃದ್ಧಿ ಹೊಂದಲು ಸಲಹಾ ಸಮಿತಿಯ 11 ಸದಸ್ಯರುಗಳನ್ನು ನೇಮಕ ಮಾಡಿಕೊಂಡಿದ್ದೇವೆ. ನಮ್ಮ ಬ್ಯಾಂಕಿನ ಆಡಳಿತ ನಿರ್ದೇಶಕರ ಮಂಡಳಿಯ ಹಾಗೂ ಸಲಹಾ ಸಮಿತಿ ಮಂಡಳಿಯ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗ ಎಲ್ಲರ ಸಹಕಾರ ಸಹಾಯ ಮತ್ತು ಒಂದೇ ನಿಯತ್ತಿನಿಂದ ಒಟ್ಟಿಗೆ ದುಡಿದರೆ ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂಪಾಯಿಗಳ ಹಣಕಾಸು ಹೊಂದಲು ಸಹಾಯವಾಗುತ್ತದೆ ಮತ್ತು ನನ್ನ ಗುರಿ ಕೂಡಾ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಡಳಿತ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರಾದ ದಸ್ತಗಿರ್ ಸಾಬ ಬಾರಿಗಡ್ಡಿ,ಆಡಳಿತ ಮಂಡಳಿ ನಿರ್ದೇಶಕರಾದ ಫಾರೂಕ್ ಪಕಾಲಿ, ಮಹಿಬೂಬ್ ಬಿಸ್ತಿ,ಸಿರಾಜ್ ಮಳಲಿ, ಸಯ್ಯದ್ ಬಾರಿಗಡ್ಡಿ ನೂರ್ ಸಾಬ್ ಲೆಂಗ್ರೆ, ಹನುಮಂತ್ ಬಂಡಿವಡ್ಡರ್, ಕಮಾಲ್ ಸಾಬ್ ಬಾರಿಗಡ್ಡಿ,ಉಸ್ಮಾನ್ ಸಾಬ್ ಬಾರಿಗಡ್ಡಿ,ಹಜರಾಬಿ ಬಾರಿಗಡ್ಡಿ,ಬತುಲ್ಲಾಬಿ ಗದ್ಯಾಳ ಹಾಗೂ ನೂತನ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ ಮಹಿಬೂಬ್ ಎಂ ಬಾರಿಗಡ್ಡಿ