ಕಲಬುರಗಿ ಜಿಲ್ಲೆಯ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಸಂಘಟನೆ ವತಿಯಿಂದ ದಿನಾಂಕ 03-08-2024 ರಂದು ಜಿಲ್ಲಾ ಪತ್ರಿಕಾ ಭವನದಲ್ಲಿ ಪರಿಸರ ನಮ್ಮೆಲ್ಲರ ಆಸ್ತಿ ರೂಪ ಎಂದು ಕಾರ್ಯಕ್ರಮ ಸಸಿ ನೆಡುವುದರ ಮುಖೇನ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ವಿಶೇಷ ಗೌರವ ಸನ್ಮಾನದೊಂದಿಗೆ ಕಾರ್ಯಕ್ರಮದ ಚಟುವಟಿಕೆಗಳು ಮೂಡಿಬಂದಿವೆ ಮತ್ತು ಕರ್ನಾಟಕ ಕಾರ್ಯ ನಿರತ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಪತ್ರಿಕೆ ದಿನಾಚರಣೆ ಮತ್ತು ಸಾಧಕರ ಗಣನೀಯ ಕೆಲಸ ಹಾಗೂ ಸಾಧನೆಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಮಸ್ಯೆಗಳು ಮತ್ತು ಬೇಡಿಕೆಗಳಾದ ಉಚಿತ ಬಸ್ ಪಾಸ್, ಪಿಂಚಣಿ,ಪತ್ರಿಕಾ ಕಾಯ್ದೆ,ಮಾಶಾಸನ ಹತ್ತು ಹಲವಾರು ಬೇಡಿಕೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಕೇಳಿದ್ದು ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ ಬರುವವರೆಗೂ ನಮ್ಮ ಹೋರಾಟ ನಿರಂತರವಾಗಿ ಇದ್ದೆ ಇರುತ್ತೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಜಿಲ್ಲಾ ಕಾ.ನಿ.ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆಯವರು ನಾವೆಲ್ಲರೂ ಜೊತೆಗೂಡಿ ಬಸವಣ್ಣನವರ ಕಾಯಕ ತತ್ವದ ಆಧಾರ ಮೇಲೆ ಉತ್ತಮವಾದ ಕೆಲಸ ಮಾಡೋಣ ಹಾಗೂ ರಾಜ್ಯಾಧ್ಯಕ್ಷರ ಸನ್ಮಾರ್ಗದಲ್ಲಿ ನಡೆಯುತ್ತ ನಮ್ಮೆಲ್ಲರ ಕರ್ತವ್ಯ ನಿರಂರವಾಗಿರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ,ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳು,ಖಜಾಂಚಿಗಳು ಸಾಧಕರು, ಪದಾಧಿಕಾರಿಗಳು ಹಾಗೂ ಇತರರಿದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್