ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಒಂದು ಮೇಕೆ ಮತ್ತು ಒಂದು ಕುರಿಮರಿಯನ್ನೂ ಬಲಿ ಪಡೆದ ಚಿರತೆ ಕುರಿಮರಿಯನ್ನು ಹೊತ್ತೊಯ್ದಿರುವ ಘಟನೆ ತಾಲೂಕಿನ ಚಿಕ್ಕಿಂದುವಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಚಿಕ್ಕಿಂದುವಾಡಿ ಗ್ರಾಮದ ಕುಳ್ಳೆಗೌಡ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಹಸು ಮೇಕೆ ಕುರಿಗಳನ್ನು ಕಟ್ಟಿಹಾಕಿದ್ದರು. ನಿನ್ನೆ ತಡರಾತ್ರಿ ಚಿರತೆ ದಾಳಿ ನಡೆಸಿ ಮೇಕೆಯೊಂದನ್ನು ಕಚ್ಚಿ ಸಾಯಿಸಿದೆ. ಮೆಕ್ಕೆಗೆ ಕಟ್ಟಿದ್ದ ಹಗ್ಗ ಗಟ್ಟಿಯಾಗಿದ್ದರಿಂದ ಅದನ್ನು ಎಳೆಯಲು ಸಾಧ್ಯವಾಗದಿದ್ದಾಗ ಪಕ್ಕದಲ್ಲಿ ಕಟ್ಟಿದ್ದ ಕುರಿಯನ್ನು (ಟಗರು)ಬಲಿಪಡೆ ಎಳೆದುಕೊಂಡು ಹೋಗಿದೆ.
ವಾರದ ಹಿಂದೆ ಕರಿಯನಪುರ ಗ್ರಾಮದ ಚಿಕ್ಕಸಿದ್ದಯ್ಯ ಎಂಬುವರು ಕುರಿ ಮೇಯಿಸುತ್ತಿದ್ದ ಸಮಯದಲ್ಲೆ ಕುರಿಯೊಂದನ್ನು ಕಚ್ಚಿಕೊಂಡು ಹೋಗಿತ್ತು. ಈ ಘಟನೆ ಮಾಡುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸುಮಾರು ಎರಡು ತಿಂಗಳಿನಿಂದಲೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗುತ್ತಿದೆ. ಗ್ರಾಮದ ರಾಮರಾವ್ ಎಂಬುವರ ತೋಟದ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಹಾಗೂ ಅಕ್ಕ ಪಕ್ಕದ ಜಮೀನಿನ ರೈತರಿಗೂ ಕಾಣಿಸಿಕೊಂಡಿರುವ ಬಗ್ಗೆ ಈಗಾಗಲೇ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೂ ಸಹ ಚಿರತೆ ಸೆರೆಹಿಡಿಯುವಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ವರದಿ:ಉಸ್ಮಾನ್ ಖಾನ್