ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಮಣ್ಣು ದಂಧೆ, ರೇಷನ್ ಕಾರ್ಡ್ ಡಿಲೀಟ್ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

ಪಾವಗಡ: ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು ಪೂಜಾರಪ್ಪ ರವರು ಮಾತನಾಡಿ ಇದೇ ಪಾವಗಡ ತಾಲ್ಲೂಕು ಕಣಿವೇನಹಳ್ಳಿ ಗ್ರಾಮದ ಸ.ನಂ 114 ರ ಬಾಬು ನಲ್ಲಿ 37-00 ಎಕರೆ ಕರಿಬೆಟ್ಟದ ಕೆಳಗಡೆ ಬುಡದಲ್ಲಿ ಗುತ್ತಿಗೆದಾರರು ಹಾಗೂ ರೀಯಲ್ ಎಸ್ಟೇಟ್ ರವರು ಲೇಔಟ್ ಮಾಡಲು ಮಣ್ಣು ಅಗೆದು ಹೊಡೆಯುತ್ತಿದ್ದಾರೆ ಈ ಮಣ್ಣು ದಂದೆ ಈಗ್ಗೆ ಸುಮಾರು ದಿನಗಳಿಂದ ನಡೆಯುತ್ತಿದೆ. ತಕ್ಷಣವೇ ಈ ಬೆಟ್ಟದ ಬುಡದಲ್ಲಿ ನಡೆಯುವ ಮಣ್ಣು ಹೊಡೆಯುವ ಬಗ್ಗೆ ಸೂಕ್ತ ಕ್ರಮ ಜರುಗಿಸಿ ನಿಲ್ಲಿಸಬೇಕು ಇದರಿಂದ ಬೆಟ್ಟ ಕುಸಿದು ಇಲ್ಲಿ ಅಲ್ಪ ಸಂಖ್ಯಾತ ಮಹಿಳಾ ವಸತಿ ಶಾಲೆಯಿದ್ದು ಬೆಟ್ಟ ಕುಸಿದು ತುಂಬಾ ಅಪಾಯವಾಗುವ ಸಂಭವವಿದೆ ಹಾಗಾಗಿ ತಕ್ಷಣ ನಿಲ್ಲಿಸಬೇಕೆಂದು ಜಿಲ್ಲಾಧ್ಯಕ್ಷ ಪೂಜಾರಪ್ಪ ಆಗ್ರಹಿಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಗುಂಡ್ಲಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿಯೂ ಸಹ ಪಟ್ಟಭದ್ರ ಹಿತಾಸಕ್ತಿಯವರು ಅಕ್ಕ-ಪಕ್ಕದ ಗ್ರಾಮಸ್ಥರು ದೊಡ್ಡ ದೊಡ್ಡ ಗುಣಿ ಇಟ್ಟು ಮಣ್ಣು ದಂದೆ ನಡೆಸುತ್ತಿದ್ದಾರೆ ನಾಗಲಮಡಿಕೆ ಹೋಬಳಿ, ಪೆಂಡ್ಲಿಜೀವಿ ಕೆರೆ ಮಳೆನೀರಿನಿಂದ ಹೊಡೆದು ಶಿಥಿಲವಾಗಿರುತ್ತದೆ, ಹಾಗೂ ಅವಶ್ಯಕತೆ ಇರುವ ರೈತರು ಹೊಲಗಳಿಗೆ ಹೊಡೆದಕೊಳ್ಳಲು 3 ಅಡಿಗಳು ಹೊಡೆದುಕೊಳ್ಳಲು ಅವಕಾಶ ಮಾಡಿಕೊಳ್ಳಲು ಹುಳುಮಣ್ಣು ಹೊಡೆದುಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಇದೇ ರೀತಿ ಹಲವು ಕೆರೆಗಳಲ್ಲಿ ಮಣ್ಣು ದಂದೆ ನಡೆಯುತ್ತಿದೆ ತಕ್ಷಣವೇ ಸೂಕ್ತ ಕ್ರಮ ಜರುಗಿಸಿ ನಿಲ್ಲಿಸಬೇಕು.
ತಾಲ್ಲೂಕಿನಲ್ಲಿ 38 ದೊಡ್ಡ ಕೆರೆಗಳು ಇದ್ದು ಇವುಗಳಲ್ಲಿ ಕೆಲವು ಕೆರೆಗಳು ಅಪಾಯ ಮಟ್ಟದಲ್ಲಿದ್ದು ಕೆಲವು ಕಟ್ಟೆಗಳು ಹಾಗೂ ಕೋಡಿಗಳು ಶಿಥಿಲವಾಗಿದ್ದು ನೀರು ತುಂಬಿದಾಗ ಕೆರಗಳು ಹೊಡೆದು ಹಾಳಾಗುವ ಸಂಭವವಿದೆ ತಕ್ಷಣವೇ ಇಂತಹ ಕೆರೆಗಳನ್ನು ಗುರ್ತಿಸಿ ರಿಪೇರಿ ಮಾಡಿಸಬೇಕು.
ಎಲ್ಲಾ ಕೆರಗಳಲ್ಲಿ ಗಿಡಗಳು ಮರಗಳು ಕುರುಚಲು ಗಿಡಗಳು ಬೆಳೆದು ಕೆರೆಗಳಿಗೆ ಭದ್ರ ಮೇಲ್ದಂಡೆ ನೀರು ಬಿಡಲು ಸಮೀಪವಾಗಿದ್ದು ಕೆರೆ ತುಂಬಿಸಿದಾಗ ಗಿಡಮರಗಳು ಕೊಳೆತು ಕಲ್ಮಶವಾಗಿ ಧನ, ಕುರಿ, ಮೇಕೆ, ನವಿಲುಗಳು, ಜಿಂಕೆಗಳು ಎಲ್ಲಾ ಕಾಡು ಪ್ರಾಣಿಗಳು ಕಲ್ಮಶವಾದ ನೀರು ಕುಡಿದು ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ಇದೆ, ಕೆರೆಗಳಿಗೆ ನೀರು ಬಂದಾಗ ಮೀನು ಬಿಟ್ಟಾಗ ನೀರು ಕೃಶವಾಗಿರುವುದರಿಂದ ಲಕ್ಷಾಂತರ ಮೀನುಗಳು ಸಾವನ್ನಪ್ಪುವ ಸಂಭವವಿದೆ.

ಪಾವಗಡ ತಾಲ್ಲೂಕು ಈಗ್ಗೆ ಸುಮಾರು 25 ವರ್ಷಗಳಿಂದ ಮಳೆ ಇಲ್ಲದೆ ಬರ ಪೀಡಿತ ಪ್ರದೇಶ ಎಂದು ಘನ ಕರ್ನಾಟಕ ರಾಜ್ಯ ಸರ್ಕಾರ ಪಾವಗಡ ತಾಲ್ಲೂಕಿನಲ್ಲಿ ರೇಷನ್ ಕಾರ್ಡ್ ಡಿಲೀಟ್ ಮಾಡುತ್ತೇವೆಂದು ಹೇಳುತ್ತಿರುವುದು ತುಂಬಾ ದುಃಖಕರ ಸಂಗತಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪಾವಗಡ ತಾಲ್ಲೂಕಿನಲ್ಲಿ ರೇಷನ್ ಕಾರ್ಡ್ ಡಿಲೀಟ್ ಮಾಡಕೂಡದು, ಪ್ರತೀ ಕುಟುಂಬದ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಮತ್ತು ಸರ್ಕಾರಿ ಸೌಲಭ್ಯ ಪಡೆಯುವ ನಿರ್ಗತಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸದೇ ಇದ್ದ ಪಕ್ಷದಲ್ಲಿ ಪಾವಗಡ ತಾಲ್ಲೂಕಿನ ರೈತ ಸಂಘ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳಿಂದ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ರಾಮಾಂಜಿ,ಪೂಜಾರ್ ಚಿತ್ತಯ್ಯ, ಹನುಮಂತರಾಯಪ್ಪ, ಚಿತ್ತಯ್ಯ, ಈ ಸಿದ್ದಪ್ಪ, ಗುಂಡ್ಲಹಳ್ಳಿ ರಮೇಶ್, ನಾರಾಯಣಪ್ಪ, ಯುವ ಘಟಕ ಶಿವು ಬ್ಯಾಡನೂರು, ಅಂಜಿನಪ್ಪ ಇನ್ನಿತರೆ ರೈತರು ಹಾಗೂ ಸಂಘದ ಪದಾಧಿಕಾರಿಗಳಿದ್ದರು.

ವರದಿ:ಕೆ.ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ