ಪಾವಗಡ :ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ತಿಳಿಸಿದರು.
ಶನಿವಾರ ತಾಲ್ಲೂಕಿನ ಬ್ಯಾಡನೂರು ಗ್ರಾ.ಪಂ ವ್ಯಾಪ್ತಿಯಲ್ಲಿನ ಗುಂಡಾರ್ಲಹಳ್ಳಿ,ಬ್ಯಾಡನೂರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡೆಂಗ್ಯೂ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ವೈರಾಣು ಇದು ರಾಜ್ಯ ವ್ಯಾಪಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸಿದೆ.
ದಿಢೀರನೆ ಜ್ವರ,ತಲೆನೋವು, ಕಾಲು ಕೈ ನೋವು, ವಾಂತಿ ಬರುವುದು ವಾಕರಿಕೆ ಆಗುವುದೇ ಡೆಂಗ್ಯೂ ಕಾಯಿಲೆಯ ಲಕ್ಷಣಗಳು. ಕಂಡು ಬಂದರೆ ಕೂಡಲೇ ರಕ್ತಪರೀಕ್ಷೆ ಮಾಡಿಸಬೇಕು ಎಂದರು.
ನಿಮ್ಮ ಮನೆಗಳಲ್ಲಿನ ನೀರಿನ ತೊಟ್ಟಿ, ಡ್ರಮ್,ಸಿಂಟೆಕ್ಸ್ ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಸ್ವಚ್ವ ಮಾಡಿ ನಂತರ ನೀರು ತುಂಬಿಸಬೇಕು. ಮನೆಯ ನೆರೆಹೊರೆಯಲ್ಲಿ ಸ್ವಚ್ಚತೆ ಕಾಪಾಡಬೇಕು,ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಬೇಕು ಎಂದು ಆರೋಗ್ಯ ಸುರಕ್ಷತೆ ಕುರಿತಾಗಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬ್ಯಾಡನೂರು ಪಂ ಅಧ್ಯಕ್ಷರು ಶೃತಿ ಜಿ ಕೃಷ್ಣ ,ಪಿಡಿಒ ಮಂಜುನಾಥ್, ಪಂ ಸದಸ್ಯರಾದ ಕೃಷ್ಣಮೂರ್ತಿ,ಸರೋಜಮ್ಮ ಗಂಗಾಧರಪ್ಪ, ಸಾವಿತ್ರಮ್ಮ ಶಿವಕುಮಾರ್, ಮಾಜಿ ಅಧ್ಯಕ್ಷರು ತ್ರಿವೇಣಿ ಗೋವಿಂದರಾಜು, ಮುಖಂಡರಾದ ಕೃಷ್ಣ ಜಿ.ಆಡಿಟರ್,
ಬ್ಯಾಡನೂರು ಶಿವು, ಸಿಬ್ಬಂದಿಗಳಾದ ಮಹೇಶ್, ಪ್ರಕಾಶ್ ,ಶಿಕ್ಷಕರಾದ ಚೆನ್ನಕೇಶವ, ಶಿವಣ್ಣ ಮಂಜುನಾಥ್, ನಾಗರಾಜುನಾಯ್ಕ, ಗಂಗಾಧರಪ್ಪ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ವರದಿ: ಕೆ.ಮಾರುತಿ ಮುರಳಿ