ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಒಬ್ಬ ಉರಗ ಪ್ರೇಮಿ ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಯ ಸಮಯದಲ್ಲಿ ಹೊನ್ನಾಳಿಯಿಂದ ಸುಮಾರು ಎರಡು ಕೀಲೋಮೀಟರ್ ದೂರ ಇರುವ ದಿಡಗೂರಿನ ಮಾರುತಿ ನಗರದಲ್ಲಿ ಗುರುಮೂರ್ತಿ ಇವರ ಮನೆ ಯಲ್ಲಿ ಹಾವು ಕಾಣಿಸಿಕೊಳ್ಳುತ್ತದೆ,ನಂತರ ಉರಗ ಪ್ರೇಮಿ ವಸಂತ ಕುಮಾರ್ ಹೊನ್ನಾಳಿ ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ
ನಾನು ಬರುವವರೆಗೆ ಹಾವಿಗೆ ಹೊಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದರು
ತಕ್ಷಣವೇ ಅಲ್ಲಿಗೆ ಬಂದು ಹಾವನ್ನು ಹಿಡಿದು ಅರಣ್ಯದಲ್ಲಿ ಬಿಟ್ಟರು ಹಾವುಗಳನ್ನು ಕಂಡರೆ ಜನ ಭಯದಿಂದ ಅವುಗಳನ್ನು ಬೆನ್ನಟ್ಟಿ ಹೋಗಿ ಕೊಲ್ಲುವ ಕೆಲಸ ಮಾಡುತ್ತಾರೆ ಅವುಗಳ ಬಗ್ಗೆ ಭಯ ಬೇಡ ನಾವಾಗಿಯೇ ಅವುಗಳಿಗೆ ತೊಂದರೆ ಮಾಡದೆ ಹೊರತು ಅವುಗಳು ನಮಗೆ ತೊಂದರೆ ಮಾಡುವುದಿಲ್ಲ ಎಂದು ಹೇಳಿದರು.
ವಸಂತ್ ಕುಮಾರ್ ಇವರು ಸುಮಾರು 5,000 ಸಾವಿರ ವಿವಿಧ ಜಾತಿಯ ಹಾವುಗಳನ್ನು ಹಿಡಿದು ಅರಣ್ಯದಲ್ಲಿ ಬಿಟ್ಟಿದ್ದಾರೆ ಇವರು ಇವರ ಜೀವನೋಪಾಯಕ್ಕೆ ಪೈಂಟಿಂಗ್ ಮತ್ತು ಆಟೋ ಚಾಲನೆ ಮಾಡುತ್ತಾರೆ
ಇಂತಹ ಉರಗ ಪ್ರೇಮಿಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಮೂಲಕ ಸಹಾಯ ಮಾಡಬೇಕು.
ವರದಿ ಪ್ರಭಾಕರ್ ಡಿ ಎಂ ಹೊನ್ನಾಳಿ