ವಿಜಯಪುರ:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು ತಾಲೂಕ ಘಟಕ ತಾಳಿಕೋಟಿ ತಾ.ತಾಳಿಕೋಟಿ ಜಿಲ್ಲಾ ವಿಜಯಪುರ ಇವರಿಂದ “ಬಹುದಿನಗಳ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳನ್ನು ತನ್ಮೂಲಕ ಸರ್ಕಾರಕ್ಕೆ ಸಲ್ಲಿಸಲು ಕೋರಿ ಸನ್ಮಾನ್ಯ ಶ್ರೀ ಸಿ.ಎಸ್.ನಾಡಗೌಡ (ಅಪ್ಪಾಜಿ) ಶಾಸಕರು ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ನಿಗಮ ಮಂಡಳಿ ಅಧ್ಯಕ್ಷರು ಬೆಂಗಳೂರು ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ
ಇವರಿಗೆ ನೀಡಲಾಯಿತು.
ಪ್ರಮುಖ ಬೇಡಿಕೆಗಳು:
1)2017 ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016 ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಾಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು
2)ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಗೆ 2016 ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ
3)ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು
NCTE ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಪಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರದ ಸಂಖ್ಯೆ 434 ದಿನಾಂಕ;20-05-2017 ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5 ಕ್ಕೆ 1,12,467, ಹಾಗೂ ಪದವೀಧರ ಶಾಲಾ ಶಿಕ್ಷಕರು 6ರಿಂದ 8 ಕ್ಕೆ51,781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ.
ತತ್ಪರಿಣಾಮವಾಗಿ2016ಕ್ಕೆ ಮೊದಲು 1ರಿಂದ 7,1ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5 ಎಂದು ಪರಿಗಣಿಸಿದ್ದು ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ. ಇದೆ ರೀತಿಯಾಗಿ ಹತ್ತು ಹಲವು ತೊಂದರೆ ಯಾಗಿದೆ ಎಂದು ಎಲ್ಲಾ ಶಿಕ್ಷಕರು ಕೂಡಿಕೊಂಡು ದಿನಾಂಕ 05-08-2024.ಬೆಳಗ್ಗೆ 11ಘಂಟೆಗೆ ತಾಳಿಕೋಟಿ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಮುಂದೆ ತಹಶಿಲ್ದಾರರ ಅವರು ಅನುಪಸ್ಥಿತಿಯಲ್ಲಿ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀ ಎಮ್.ಎಮ್.ಅತ್ತಾರ. ಹಿರಿಯ ಚುನಾವಣಾ ಆಯುಕ್ತರಿಗೆ ಈ ಕೆಳಕಂಡ ಶಿಕ್ಷಕರುಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಶ್ರೀ ಬಿ.ಟಿ.ವಜ್ಜಲ್ ಅಧ್ಯಕ್ಷರು ಕ.ರಾ.ಪ್ರಾ.ಶಿಕ್ಷಕರ ಸಂಘ ತಾಳಿಕೋಟಿ ತಾಲೂಕು
ಟಿ.ಎಸ್.ಲಮಾಣಿ. ಈ ಮೇಲಿನ ಸಂಘದ ಉಪಾಧ್ಯಕ್ಷರು,ಎಸ್.ಬಿ.ಬೀರಗೊಂಡ ಕಾರ್ಯದರ್ಶಿಗಳು,ಎಮ್.ಎಲ್.ಚೌದ್ರಿ, ಸಹ ಕಾರ್ಯದರ್ಶಿ, ಶ್ರೀ ಮತಿ ಆರ್ ಬಿ ಆಲೂರ,ಜಿಲ್ಲಾ ಕಾರ್ಯದರ್ಶಿನಿ,ಶ್ರೀ ಮತಿ ಅಂಬಿಕಾ ಅ ಗೋಗಿ ಸಹ ಕಾರ್ಯದರ್ಶಿನಿ ಎ.ಆರ್.ಹಜೇರಿ ಉಪ ಸಹ,ಎಸ್.ಎಸ್.ತಿರ್ಥ.,ಸಿ.ಎಸ್.ಯರಗಲ್ ಸದಸ್ಯರುಗಳು ಹಾಗೂ ಶ್ರೀ ಮತಿ ಎಸ್.ಬಿ.ಹೂಗಾರ ಅಧ್ಯಕ್ಷರು ಸಾವಿತ್ರಿಬಾಯಿ ಪುಲೆ ಸಂಘ ತಾಳಿಕೋಟಿ..ಶ್ರೀ ಜಿ.ಕೆ.ಪತ್ತಾರ.ನಾಮ ನಿರ್ದೇಶಕರು.ಜಿ.ಉ.ಅಧ್ಯಕ್ಷ, ಅರ್.ಎಸ್.ಹಿಪ್ಪರಗಿ. ಅಧ್ಯಕ್ಷರು ಶಿಕ್ಷಕರ ಸೋಸಾಯಿಟಿ ತಾಳಿಕೋಟಿ, ನಿಂಗನಗೌಡ ದೊಡಮನಿ ಎನ್.ಜಿ.ಒ.ಅದ್ಯಕರು,ಶಿವರಾಜ ಚೌದ್ರಿ ಎನ್.ಜಿ.ಒ.ಕಾರ್ಯದರ್ಶಿ. ಸಹ ಶಿಕ್ಷಕರು ಎಸ್.ಆರ್.ವಾಲಿಕಾರ,ಎಸ್.ಎಮ್,ಪಾಲ್ಕಿ,.ಬಿ.ಎ.ವಿಜಾಪುರ, ಕೆ.ಎ.ವಿಜಯಪುರ, ಕೆ.ಬಿ.ವಿಜಯಪುರ ಹಾಗೂ ಶ್ರೀ ಮತಿಗಳಾದ ಎಸ್.ವಿ.ಬನ್ನೇಟ್ಟಿ,ಯು.ಎಮ್.ಸಾಲಂಕಿ,ಎಸ್.ಕೆ.ಮಣೂರ.ಎಸ್.ವ್ಯಾ.ಜಾಲವಾದಿ ಶಿಕ್ಷಕ-ಶಿಕ್ಷಕಿಯರುಗಳು ಕೂಡಿಕೊಂಡು ಮನವಿ ಪತ್ರ ಸಲ್ಲಿಸಿದರು.
ವರದಿ-ಸಂಗಮೇಶ.ಸಿ.ಚೌದ್ರಿ