ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೊಳಕೂರ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ನಿರ್ಲಕ್ಷ್ಯದಿಂದ ಅನೇಕ ಇಲಾಖೆಯ ಅಧಿಕಾರಿಗಳು ಗೈರು ಆಗಿದ್ದಾರೆಂದು ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕ ಘಟಕ ಅಧ್ಯಕ್ಷರಾದ ಚಂದ್ರಕಾಂತ್ ನಾಟಿಕರ್ ಗಂಭೀರ ಆರೋಪ ಮಾಡಿದ್ದಾರೆ ಯಾಕೆಂದರೆ ತಾಲೂಕಿನ ಆಡಳಿತದ ಮೇಲೆ ಶಾಸಕರ ಹಿಡಿತ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ ಇಲ್ಲಿ ಸ್ಥಳೀಯವಾಗಿ ಯಾವುದೇ ಒಬ್ಬರ ಕೆಲಸ ಕಾರ್ಯಗಳು ಬಗೆ ಹರಿದಿಲ್ಲ ಇದೊಂದು ಕಾಟಾಚಾರದ ಜನಸ್ಪಂದನ ಕಾರ್ಯಕ್ರಮವಾಗಿದೆ.ಇಲ್ಲಿ ಅಧಿಕಾರಿಗಳು ಸರಕಾರದ ಒಂದು ದಿನದ ಕಚೇರಿ ಕೆಲಸ ಕಾರ್ಯಗಳು ಹಾಳಾಗಿವೆ ಉಳಿದ ಎಲ್ಲಾ ಇಲಾಖೆಯ ಅಧಿಕಾರಿಗಳ ಗೈರು ಎದ್ದು ಕಾಣುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಕೊಳಕೂರ ಜಿಲ್ಲಾ ಪಂಚಾಯತ್ ಕೇಂದ್ರ ಸ್ಥಾನದಲ್ಲಿ ಒಂದು ಬ್ಯಾಂಕ್ ಇಲ್ಲ,ಪಿಯುಸಿ ಕಾಲೇಜು ಇಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ,ಹಿಂದುಳಿದ ಸಮುದಾಯದ ವಾರ್ಡ್ನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ ಹಾಗೂ ಕೆಲವು ವಾರ್ಡ್ಗಳಲ್ಲಿ ಸರಿಯಾದ ಸಿಸಿ ರಸ್ತೆ ಇಲ್ಲ ಮತ್ತು ಗೌನಳ್ಳಿ ಗ್ರಾಮದ ರಸ್ತೆ ನೆನಗುದಿಗೆ ಬಿದ್ದಿದೆ ಶಾಲೆಗಳಲ್ಲಿ ಶೌಚಾಲಯಗಳಿಲ್ಲ,ಶೌಚಾಲಯವಿದ್ದರೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲ ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ ಎಂದು ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕ ಘಟಕ ಅಧ್ಯಕ್ಷರಾದ ಚಂದ್ರಕಾಂತ ನಾಟಿಕಾರ ಕೊಳಕೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
