ಪಾವಗಡ ತಾಲ್ಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಸೇರಿದಂತೆ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರ್ಯಗಾರದಲ್ಲಿ ಮಾತನಾಡುತ್ತಾ ಗ್ರಾ.ಪಂಗಳು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು, ಮಹಾತ್ಮ ಗಾಂಧಿ ಹೇಳಿದ ಹಾಗೆ ಗ್ರಾಮ ಸ್ವರಾಜ್ ಕನಸು ನನಸಾಗಬೇಕಾದರೆ ಗ್ರಾಮಗಳು ಸಕಲ ಸೌಲಭ್ಯಗಳಿಂದ ಅಭಿವೃದ್ಧಿ ಆದಾಗ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯವೆಂದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಾನಕೀರಾಮ್ ಮಾತನಾಡಿ ಗ್ರಾ.ಪಂ ಮಟ್ಟದ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಾದ ಆಧ್ಯಕ್ಷ, ಉಪಾಧ್ಯಕ್ಷರು ಗ್ರಾಮಗಳಲ್ಲಿ ಸ್ವಚ್ಚತೆ ಮತ್ತು ಮೂಲಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಹೆಚ್ಚಿನ ಆಧ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವರದರಾಜು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಂಜಿನಿಯರ್ ಹನುಮಂತಪ್ಪ, ಸುರೇಶ್, ಪಶು ಇಲಾಖೆ ಅಧಿಕಾರಿ ವರಕೇರಪ್ಪ, ಸಿ,ಡಿ,ಪಿ,ಒ ಸುನಿತಾ, ಎನ್,ಆರ್,ಎಲ್,ಎಂ ಸಿಬ್ಬಂದಿ ರಮೇಶ ರಾಥೋಡ್,ವಿಜಯ್ ಕೃಷ್ಣ, ತಾ.ಪಂ ಸಿಬ್ಬಂಧಿ ಶ್ರೀಕಾಂತ್, ನಲಿಗಾನಹಳ್ಳಿ ಗ್ರಾ.ಪಂ ಅಧ್ಯಕ್ಷ ವೈ.ವೆಂಕಟೇಶ್ವರಲು, ರ್ಯಾಪ್ಟೆ ಗ್ರಾ.ಪಂ ಅಧ್ಯತೆ ಕಳಾಬಾಯಿ ತಾಲ್ಲೂಕಿನ ಗ್ರಾ.ಪಂ ಅಧ್ಯಕ್ರು,ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.
ವರದಿ:ಕೆ.ಮಾರುತಿ ಮುರಳಿ