ಬಾಗಲಕೋಟೆ ಜಿಲ್ಲೆಯಲ್ಲಿ ಮೊಟ್ಟ ಮೊದಲ ನಗರಸಭೆ ಎಂಬ ಹೆಗ್ಗಳಿಕೆಯ ಪಾತ್ರವಾದ ರಬಕವಿ ಬನಹಟ್ಟಿ ನಗರಸಭೆ ಈ ನಗರ ಸಭೆಯಾಗಿ ಕಳೆದ 20 ವರ್ಷಗಳ ಕಳೆದರೂ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದೆ ನಗರದ ಪ್ರತಿಷ್ಠಿತ ಬಿಲಾಲ ಮಜೀದ್ ಬಡಾವಣೆ ಈ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಅತಿ ಹೆಚ್ಚು ಮತದಾರರ ಸಂಖ್ಯೆ ಹಾಗೂ ಸರ್ಕಾರಿ ಉರ್ದು ಮಾದರಿ ಶಾಲೆ ನಂಬರ್ 2 ಇರುವುದರಿಂದ ನಗರಸಭೆಯು ನೀರು,ರಸ್ತೆ ಚರಂಡಿ ಕಸ ವಿಲೇವಾರಿ ಮುಖ್ಯ ಸೌಲಭ್ಯಗಳನ್ನು ಒದಗಿಸಲು ನಗರಸಭೆ ನಿರ್ಲಕ್ಷ ವಹಿಸುತ್ತಿದೆ.
ಬಿಲಾಲ್ ಮಜೀದ್ ಬಡಾವಣೆಗೆ ಹೋಗಲು ಒಂದು ವ್ಯವಸ್ಥೆತವಾದ ಸರಿಯಾದ ರಸ್ತೆ ಮಾರ್ಗ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಬಡಾ ವಣೆಗೆ ಹೋಗಲು ಬಸ್ ನಿಲ್ದಾಣದ ಹತ್ತಿರ ಸಾಯಿ ಬಾರ್ ದಿಂದ ಡಾಂಬಾರು ಹಾಗೂ ಸಿಸಿ ರಸ್ತೆ ಮಾಡಿ ಕಳೆದ 15 ವರ್ಷಕ್ಕಿಂತ ಹೆಚ್ಚು ಕಳೆದರೂ ಕೂಡಾ ಇನ್ನೂವರೆಗೆ ರಿಪೇರಿ ಯಾಗದ ರಸ್ತೆ ಅಲ್ಲಲ್ಲಿ ತೆಗ್ಗುಗಳಿಂದ ಕೂಡಿದೆ. ಯಾವುದೋ ಒಂದು ಕಾರ್ಯಕ್ರಮವಾಗಲಿ, ಒಂದು ಹೆಣ್ಣಿನ ಹೆರಿಗೆ ತೆಗೆದುಕೊಂಡು ಹೋಗಬೇಕಾದರೆ ಬಾರಿ ಕಷ್ಟ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನೀರಿನ ಸಮಸ್ಯೆ ಅಂತ ಕೇಳುವರು ಯಾರು ಇಲ್ಲ ನಗರಸಭೆ ಸದಸ್ಯ ಇದ್ದು ಇಲ್ಲದಂತಿರುವುದು ವಿಪರ್ಯಾಸದ ಸಂಗತಿ ಕಳೆದ ಮೂರು ತಿಂಗಳಿನಿಂದ ಒಂದು ಬೋರ್ವೆಲ್ ಬಂದು ಬಿದ್ದು ಕಾರಣ ವಾರ್ಡ್ ಸದಸ್ಯರ ನಿರ್ಲಕ್ಷ ಅಥವಾ ಸಂಬಂಧಪಟ್ಟ ಅಧಿಕಾರಿಗಳ್ ನಿರ್ಲಕ್ಷ ಅನ್ನುವುದು ಸಾರ್ವಜನಿಕರಿಗೆ ಪ್ರಶ್ನೆ ಕಾಡ್ತಾ ಇದೆ.
ಎಲ್ಲಿ ನೋಡಿದರೂ ಕಸವೊ ಕಸ
ಈ ಬಡಾವಣೆಯ ಪಕ್ಕ ಹಿಂದೂ ಸ್ಮಶಾನ ಇದೆ ಈ ಸ್ಮಶಾನ ಹತ್ತಿರ ಒಂದು ವಾರಗಟ್ಟಲೆ ಕಸದ ರಾಶಿಗಳ ಬಿದ್ದಿರುತ್ತವೆ ಈ ಬಡಾವಣೆಯಲ್ಲಿ ಕಸವನ್ನು ಹೊಡೆಯುವವರು ಬಂದರೆ ಅಪರೂಪ ದೊಡ್ಡ ಹಬ್ಬಗಳು ಬಂದರೂ ಜಾತ್ರೆ ದಿನಮಾನಗಳಲ್ಲಿ ಕೂಡ ಸ್ವಚ್ಛತೆಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಮಸೀದಿಯ ಅವರಣ ಮುಂದೆ ನೋಡುವುದಂತೂ ಇಲ್ಲ ಇದು ಮೊದಲೇ ಕೊಳಚೆ ಪ್ರದೇಶ ಎಂದು ಹೆಸರುವಾಸಿಯಾಗಿದೆ. ಸ್ಥಳೀಯ ಆರೋಗ್ಯ ಅಧಿಕಾರಿಗಳು ಈ ಕೊಳಚೆ ಪ್ರದೇಶಕ್ಕೆ ಮೊದಲು ಅದ್ಯತೆಯನ್ನು ಕೊಡುವುದನ್ನು ಬಿಟ್ಟು ಬೇರೆ ಕಡೆ ಡೆಂಗೋ ಹರಡುತ್ತಾ ಇದೆ ಎಂದು ಹೇಳಿದರೆ ಹೇಗೆ ? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿ:ಮಹಿಬೂಬ್ ಎಂ ಬಾರಿಗಡ್ಡಿ