ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಮಡಿಕೆ ಗುರುಕುಲಂ ಶಾಲೆಯಲ್ಲಿ ಏರ್ಪಡಿಸಿದ್ದ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಅರೋಗ್ಯ ಜೊತೆಗೆ,ಕಣ್ಣಿನ ದೃಷ್ಟಿ ಬಗ್ಗೆ ಕಾಳಜಿ ವಹಿಸಿ ಕ್ರೀಯಾಶೀಲವಾದ ಅರೋಗ್ಯ ಜೀವನ ನಡೆಸುವಂತೆ ವೀದ್ಯಾಸಾಗರ್ ಕರೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆ, ಸುರಪನೇನಿ ವಿದ್ಯಾಸಾಗರ್ ಫೌಂಡೇಶನ್ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದರು.
ನಂತರ ಆರೋಗ್ಯ ಒಂದಿದ್ದರೆ ಎಲ್ಲವೂ ಇದ್ದಂತೆ ಹಾಗಾಗಿ ನಮ್ಮಲ್ಲಿರುವ ರೋಗಗಳನ್ನು ಮೊದಲು ಪತ್ತೆ ಹಚ್ಚಲು ಇಂತಹ ಶಿಬಿರಗಳು ಅನುಕೂಲವಾಗುತ್ತವೆ. ಇಂತಹ ಶಿಬಿರಗಳನ್ನು ಉಪಯೋಗಿಸಿಕೊಂಡು ಗ್ರಾಮೀಣ ಭಾಗದಲ್ಲಿನ ರೈತರಿಗೆ ಮಹಿಳೆಯರಿಗೆ ತುಮಕೂರು, ಬೆಂಗಳೂರಿನಂತಹ ಪ್ರದೇಶಕ್ಕೆ ಹೋಗಲು ಕಷ್ಟ ಆಗಬಹೂದು ಆದರೆ ಇಂದು ಆಯ್ಕೆಯಾದವರಿಗೆ ಶಂಕರ ಕಣ್ಣಿನ ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿ ನಿಮ್ಮನ್ನು ಇಲ್ಲಿಯೇ ಬಿಡುವಂತಹ ಕಾರ್ಯ ಇದಾಗಿದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಣ್ಣಿನ ಪರೀಕ್ಷೆ ನಡೆಸಿ ಚಿಕೆತ್ಸೆಗೆ ಅರ್ಹರಾದವರನ್ನು ಶಸ್ತ್ರ ಚಿಕಿತ್ಸೆ ಮಾಡಿಸುವಂತ ಕಾರ್ಯಕ್ರಮಗಳು ತಾಲ್ಲೂಕಿನ ಎಲ್ಲಾ ಗಡಿ ಗ್ರಾಮಗಳಲ್ಲಿ ನಡೆಸುವ ಅಭಿಲಾಶೆಯನ್ನು ವ್ಯಕ್ತಪಡಿಸಿದರು.
ಸುರಪನೇನಿ ವಿದ್ಯಾಸಾಗರ್ ಫೌಂಡೇಶನ್, ಶಂಕರ ಕಣ್ಣಿನ ಆಸ್ಪತ್ರೆ, ಹೆಲ್ಪ್ ಸೊಸಟಿ ಆರ್ಯವೈಶ್ಯ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ
ಉಚಿತ ನೇತ್ರ ತಪಾಸಣಾ ಈ ಶಿಬಿರದಲ್ಲಿ 120 ಕ್ಕೂ ಹೆಚ್ಚು ಜನ ನೇತ್ರ ಪರೀಕ್ಷೆಗೆ ಒಳಪಟ್ಟಿದ್ದು.24 ಜನ ನೇತ್ರ ಶಸ್ತ್ರ ಚಿಕೆತ್ಸೆಗೆ ಆಯ್ಕೆಯಾಗಿದ್ದಾರೆ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಧ್ಯ ಮಾನಂ ಶಶಿಕಿರಣ್, ಡಾ.ಯಮುನಾ,ಡಾ. ಪ್ರಣಯ್,ಶಂಕರ ಕಣ್ಣಿನ ಆಸ್ಪತ್ರೆಯ ಮನೋಜ್ ಹಾಗೂ ಹೆಲ್ಪ ಸೊಸೈಟಿ ಅಧ್ಯಕ್ಣ ಮಾನಂ ಶಶಿಕಿರಣ್, ಆರ್ಯವೈಶ್ಯ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಜರಿದ್ದರು.
ವರದಿ:ಕೆ.ಮಾರುತಿ ಮುರಳಿ