ತುಮಕೂರು:ಭಾರತೀಯ ವಿದ್ಯಾರ್ಥಿ ಸಂಘ-ಬಿ.ವಿ.ಎಸ್ ತುಮಕೂರು ಜಿಲ್ಲೆ ವತಿಯಿಂದ
ಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಜೊತೆಗೆ ಕಲಿಕಾ ಸಾಮಗ್ರಿಗಳಾದ ಪೆನ್ಸಿಲ್, ಅಳಿಸುವ ರಬ್ಬರ್, ಮೆಂಡರ್, ಸ್ಕೇಲ್, ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ನರಸಿಂಹಮೂರ್ತಿ ಸರ್ ಹಾಗೂ ಸಹ ಶಿಕ್ಷಕರಾದ ದೇವರಾಜ್, ನಾಗಮಣಿ, ಹಾಗೂ ತುಮಕೂರು ಬಿ.ವಿ.ಎಸ್ ಜಿಲ್ಲಾ ಸಂಯೋಜಕರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್ ಕೆಂಚರಾಯ, ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪೂಲಪ್ಪ ರವರು, ನಮ್ಮ ಚಳುವಳಿಗೆ ಸದಾ ಬೆಂಬಲವಾಗಿರುವ ರಾಜಕುಮಾರ್ ರವರು, ಹಾಗೂ ಸ್ನೇಹಿತ ನಾಗೇಶ್ ರವರು,ಜೆ.ಸಿ.ಬಿ ಓಬಳೇಶ್ ರವರು ಉಪಸ್ಥಿತರಿದ್ದರು.
ವಿಶೇಷವಾಗಿ ಈ ಕಲಿಕಾ ಸಾಮಗ್ರಿಗಳನ್ನು ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಬಿ.ವಿ.ಎಸ್ ನ ರಾಘವೇಂದ್ರ ರವರು ಸಣ್ಣ ಕೊಡುಗೆಯಾಗಿ ನೀಡಿದರು, ಇವರಿಗೆ ಬಿ.ವಿ.ಎಸ್ ಹಾಗೂ ಪಾವಗಡ ತಾಲೂಕಿನ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.