ತುಮಕೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರು ಯುವಕರು ದುರಂತ ಸಾವೀಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪಾವಗಡ ತಾಲ್ಲೂಕಿನ ಟಿ.ಎನ್.ಬೆಟ್ಟದ ಹೊರವಲಯದ ಸರ್ವೇ ನಂಬರ್ 293 ರ ಜಮೀನಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಇದಾಗಿದೆ.
29 ವರ್ಷದ ಅನಿಲ್ ಕುಮಾರ್
ತಂದೆ ಹನುಮಂತರಾಯಪ್ಪ ಮತ್ತು ಸುಮಾರು 35 ವರ್ಷದ ಪುಟ್ಟರಾಜು, ತಂದೆ ರಾಮರಾಜಪ್ಪ ಅವಘಡಕ್ಕೆ ತುತ್ತಾಗಿ ಉಸಿರು ಚೆಲ್ಲಿರುವ ದುರ್ವೈವಿಗಳಾಗಿದ್ದಾರೆ.
ಇವರು ಬೋವಿ ಸಮಾಜಕ್ಕೆ ಸೇರಿದ ಒಂದೇ ಕುಟುಂಬದವರಾಗಿದ್ದು. ರೈತಾಪಿವರ್ಗದವರಾಗಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಭಿತ್ತನೆ ಮಾಡಿದ್ದ ರಾಮರಾಜಪ್ಪನ ಕುಟುಂಬಸ್ಥರು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ ಹೊಲಕ್ಕೆ ಬರುತ್ತಿದ್ದರು. ನೀರು ಹಾಯಿಸುತ್ತಿದ್ದರು.. ಎಂದಿನಂತೆ ಶುಕ್ರವಾರ ರಾತ್ರಿಯೂ ಈ ನತದೃಷ್ಟ ಪುಟ್ಟರಾಜು ವಿನೊಂದಿಗೆ ಪಾಪ ಅನಿಲ್ ಕುಮಾರ್ ನಿಗೆ ಒಂದು ಕೈ ಇರಲಿಲ್ಲ…ಇತನು ಬಂದಿದ್ದಾನೆ…ರಾತ್ರಿ ವಿಪರೀತ ಮಳೆ ಕೂಡ ಇತ್ತು… ಕಾಡುಪ್ರಾಣಿಗಳ ರಕ್ಷಣೆಗೆಂದು ತಂತಿಬೇಲಿ ಹಾಕಿದ್ದರು ಆದರೆ ವಿದ್ಯುತ್ ಸಂಪರ್ಕ ಕೊಟ್ಟಿರಲಿಲ್ಲ ..ಆದರೂ ಈ ಹುಡುಗರು ನಮಗೆ ಗೊತ್ತಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರೇನೋ ಗೊತ್ತಿಲ್ಲ…ಎಂದು ಅವಘಡಕ್ಕೆ ತುತ್ತಾದವರ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು…
ಅನಿಲ್ ಕುಮಾರ್ ತಾಯಿ ಅಲವತ್ತುಕೊಂಡಿದ್ದು ಹೀಗೆ…
ಮಾಹಿತಿ ತಿಳಿದ ಕೂಡಲೇ ಪಾವಗಡ ಅರಸೀಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತ ದೇಹ ಸಾಗಿಸುವ ತಯಾರಿ ನಡೆಸಿದ್ದಾರೆ.
ಇನ್ನು ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಸಿಬ್ಬಂಧಿಗಳು ಧಾವಿಸಿ ಅನಾಹುತದ ಮಾಹಿತಿ ಪಡೆದಿದ್ದಾರೆ… ನಿಜಕ್ಕೂ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಅನಿಲ…ವಿವಾಹವಾಗಿ ಬದುಕು ಕಟ್ಟಿಕೊಳ್ಳಬೇಕಾಗಿತ್ತು …
ಮದುವೆಯಾಗಿದ್ದ ಇನ್ನೋರ್ವ ಬದುಕಿನ ವಿಧಿಯಾಟ ಈಗೆ ನಿಂತಿದ್ದು ಮಾತ್ರ ಕಣ್ಣಲ್ಲಿ ಕಣ್ಣೀರು ತರಿಸುತ್ತದೆ…
ರೈತರೇ ಹೊಲಗಳಲ್ಲಿ ವಿದ್ಯುತ್ ಸಂಪರ್ಕದ ಕಡೆ ಗಮನವಿರಲಿ,ಅದರಲ್ಲೂ ಮಳೆಗಾಲದಂತೂ ಎಷ್ಟೇ ಎಚ್ವರವಾಗಿದ್ದರೂ ಕಡಿಮೆನೇ ಸದಾ ಜಾಗೃತರಾಗಬೇಕಿದೆ.. ಮೃತ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸವಾಗ ಬೇಕಿದೆ…ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಿ ನೊಂದವರಿಗೆ ಸಾಂತ್ವಾನ ತಿಳಿಸಬೇಕಿದೆ.
ವರದಿ: ಕೆ.ಮಾರುತಿ ಮುರಳಿ