ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ
ಇಂದು ಡಾ. ಬಿ.ಆರ್ ಅಂಬೇಡ್ಕರ್ ಶಿಕ್ಷಣ ಅಭಿವೃದ್ಧಿ ಟ್ರಸ್ಟ್ ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ ಪತ್ರಿಕೆ ಆಶ್ರಯದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗಿತು.
ಈ ಕಾರ್ಯಕ್ರಮದಲ್ಲಿ ಹಲವಾರು ಜಿಲ್ಲೆಯಿಂದ ಆಗಮಿಸಿದ ಸಾಧಕರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಕುರುಡುಗಿ ಗ್ರಾಮದ ಶರಣಪ್ಪ ಗವಾರಿ ಇವರಿಗೆ ಇವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು,ಪತ್ರಕರ್ತರು,ಸ್ಥಳೀಯರು ಮತ್ತು ಗವಾರಿಯರ ಅಭಿಮಾನಿ ಬಳಗ ಭಾಗಿಯಾಗಿದ್ದರು.
ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಸಾಧಕರು,ಸನ್ಮಾನಿತರು ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
