ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ಗುಂಡಿಗಳಿಗೆ ಹಾಕಲಾಗುತ್ತಿರುವ ತೇಪೆ ಕಾಮಗಾರಿಯನ್ನು ಶಾಸಕ ಎಂ.ಆರ್.ಮಂಜುನಾಥ್ ಪರಿಶೀಲಿಸಿದರು.
ಗುಂಡಿ ಬಿದ್ದಿರುವ ರಸ್ತೆಗೆ ತೇಪೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪರಿಶೀಲನೆ ನಡೆಸಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ,ಮುಖಂಡರುಗಳಾದ ಚಿನ್ನ ವೆಂಕಟ,ಮಂಜೇಶ್ ಗೌಡ, ವಿಜಯ್ ಕುಮಾರ್,ಜೇಸಿಮ್ ಪಾಷಾ ,ಶಿವು, ಜಯರಾಮ್ , ಗೋಪಾಲ್ ನಾಯ್ಕ, ಎಸ್,ಆರ್ ಮಹಾದೇವ್,ಗೋವಿಂದ, ತಸ್ಲಿಮ್, ನಿಂಗರಾಜು ಹಾಗೂ ಇನ್ನಿತರ ಮುಖಂಡರುಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್