ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪತ್ರಕರ್ತರು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬೇಕು ಶಾಸಕ ಎಂ. ಆರ್. ಮಂಜುನಾಥ್

ಹನೂರು:ಪತ್ರಕರ್ತರಾದವರು ನಮ್ಮ ಸುತ್ತಮುತ್ತಲಿನ ನಡೆಯುವ ಸಮಾಜ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕು ಸುದ್ದಿಗಳ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು ತಿಳಿಸಿದರು.
ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ದಿನಾಚರಣೆಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಂದು ಸುದ್ದಿಯು ಪ್ರಬುದ್ದತೆಯಿಂದ ಕೂಡಿರುವ ಹಾಗೆ ಮಾಡಬೇಕು ಯುವಕರು ಹೆಚ್ಚು ಪತ್ರಕರ್ತರಾಗಿದ್ದೀರಾ ಅಲ್ಲದೆ ನಿಮ್ಮ ಸಂಘದಿಂದ ಶಾಲಾ ಮಕ್ಕಳಿಗೆ ದಾನಿಗಳಿಂದ ಸಹಾಯ ಪಡೆದು ನೋಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯವಾದುದ್ದು ನಿಮ್ಮ ಸಂಘದವರು ಹೊಸತನವನ್ನು ಪ್ರಾರಂಭಿಸಿದ್ದಿರಾ ಅದು ನಿರಂತರವಾಗಿ ನೆಡಯಲಿ ಆರ್ಥಿಕವಾಗಿ ನೀವು ಸಬಲರಾಗಿ ನಿಮ್ಮ ಸಂಘದ ಜೊತೆಯಲ್ಲಿ ಸದಾಕಾಲವೂ ನಾನಿರುವೆ ಎಂದು ಪತ್ರಕರ್ತರಿಗೆ ಅಭಯ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ದ ಅಧ್ಯಕ್ಷರಾದ ಬಂಗಾರಪ್ಪ ಸಿ ರವರು ನಮ್ಮ ಸಂಘದ ಪ್ರಾರಂಭದಿಂದಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿರುವ ಶಾಸಕರ ಕಾರ್ಯವು ಶ್ಲಾಘನೀಯವಾದುದ್ದು ನಮ್ಮಲ್ಲಿರುವ ಪತ್ರಕರ್ತರು ವೃತ್ತಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸ್ವಂತ ಕೆಲಸ ಮಾಡುತ್ತಿದ್ದು ಪತ್ರಿಕೆ ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡುತ್ತಿದ್ದಾರೆ ನಮ್ಮ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಗಣ್ಯರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಧಕರುಗಳಾದ ಪ್ರಜಾ ಪಿತಾ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಬಿಂದು ಅಕ್ಕನವರು ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತರುಗಳಾದ
ಉಪ ವಲಯ ಅರಣ್ಯಾಧಿಕಾರಿ ಇಲಾಖೆ ಕೌದಳ್ಳಿ ಹಾಗೂ ಹನೂರಿನ ಶ್ರೀ ಅನಂತರಾಮು ಜಿ ಮತ್ತು ಪ್ರಸಾದ್ ಕೆ .ರವರು,ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ರಾಮಿ,ಯುವ ರೈತ ಮುಖಂಡರಾದ ಗಂಗನದೊಡ್ಡಿ ಲೋಕೇಶ್,2023-2024ನೇ ಸಾಲಿನ ಎಸ್ ಎಸ್ ಎಲ್ ಸಿ.ಯಲ್ಲಿ ತಾಲ್ಲೂಕು ಮಟ್ಟದಲ್ಲಿ ಗರಿಷ್ಟ ಅಂಕ ಗಳಿಸಿದ ಕ್ರಿಸ್ತರಾಜ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿ ಕು.ಸೃಜನ ಜೆ.ಸ್ವಾಮಿ ಯವರಿಗೆ ಉದ್ಯಮಿ ಜಿ ನಾಗೇಶ್ ರವರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಸಾಧಕರಿಗೆ ಸಂಘದ ವತಿಯಿಂದ ಸನ್ಮಾನಗಳನ್ನು ಮಾಡಲಾಯಿತು .
ಇದೇ ಸಂದರ್ಭದಲ್ಲಿ ಶ್ರೀ ಸಾಲೂರು ಮಠದ ಕಿರಿಯ ಶ್ರೀ ಗಳಾದ ಆಲಂಬಾಡಿ ಮಠದ ಪೊನ್ನಾಚಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ಇದೇ ಸಮಯದಲ್ಲಿ ರೈತ ಮುಖಂಡರುಗಳಾದ ಅಮ್ಜಾದ್ ಖಾನ್,ಚಂಗಡಿ ಕರಿಯಪ್ಪ,ಎಂ ಹರೀಶ್ ಪೊನ್ನಾಚಿ ರಂಗಸ್ವಾಮಿ,ಉದ್ಯಮಿ ನಾಗೇಶ್,ಡಾಕ್ಟರ್ ಪ್ರಕಾಶ್,ವಿಜಯ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ