ಕಲ್ಬುರ್ಗಿ ಸುದ್ದಿ:ಕೊಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಸ್ನಾತಕೋತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವುದು ಇಡೀ ಮಾನವ ಕುಲ ತಲೆತಗ್ಗಿಸುವಂತಹ ಕೃತ್ಯವಿದಾಗಿದ್ದು ಇಂತಹ ನೀಚ ಕೃತ್ಯವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಇಂತಹ ನೀಚ ಕೃತ್ಯಕ್ಕೆ ಉನ್ನತ ಮಟ್ಟದ ತನಿಖೆ ಆಗುವಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಸಮಾಜ ಸೇವ ರತ್ನ ಪುರಸ್ಕೃತರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಪರ ಚಿಂತಕರಾದ ಶಿವಶಂಕರ್ ಗುಂಡಗುರ್ತಿ ಬಳಬಟ್ಟಿಯವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಅದೇ ರೀತಿಯಾಗಿ ಇತ್ತೀಚಿನ ಘಟನೆಗಳನ್ನು ನೆನೆಸಿಕೊಂಡರೆ ಮಾನವೀಯತೆಯ ಮೌಲ್ಯಗಳು ಮರೆಯಾಗುತ್ತಿರುವಂತೆ ಭಾಸವಾಗುತ್ತಿದೆ ಯಾಕೆಂದರೆ ಕಾನೂನು ಕಾಯ್ದೆಗಳು ಎಷ್ಟೇ ಕಠಿಣವಾಗಿ ಜಾರಿಗೆ ಬಂದರೂ ಸಹಿತ ದೇಶದ ಒಂದಲ್ಲ ಒಂದು ಕಡೆ ಇಂಥ ಹೀನ ಕೃತ್ಯಗಳು ನಡೆಯುತ್ತಿರುವುದು ದುರಂತವೇ ಸರಿ. ಇಂತಹ ಘಟನೆಗಳನ್ನು ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಕಾಯ್ದೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಂತಹ ಕಾಯ್ದೆಯನ್ನು ಜಾರಿಗೆ ತರಬೇಕು. ಹಾಗು ಅತ್ಯಾಚಾರ ಮಾಡಿದಂತಹ ಆರೋಪಿಗಳಿಗೆ ದೇಶದ ಯಾವ ವಕೀಲರು ಕೂಡಾ ಅತ್ಯಾಚಾರಿಗಳ ಪರ ವಾದ ಮಂಡಿಸಬಾರದು.ಇಂತಹ ಹೀನ ಬೆಳವಣಿಗೆಯಿಂದ ಕಾನೂನು ಬಗ್ಗೆ ಅತ್ಯಾಚಾರಿಗಳಿಗೆ ಭಯವಿಲ್ಲದಂತಾಗಿದೆ ಹಾಗೂ ವಿಕೃತ ಮನಸ್ಸಿನ ಪೈಶಾಚಿಕ ಕೃತ್ಯವೆಸಗುವ ಆರೋಪಿಗಳಿಗೆ ಅತಿ ಶೀಘ್ರದಲ್ಲಿ ನೇಣುಗಂಬಕ್ಕೇರಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಅಂದಾಗ ಮಾತ್ರ ಅತ್ಯಾಚಾರ ಮಾಡುವಂತಹ ಆರೋಪಿಗಳಿಗೆ ಕಾನೂನಿನ ಬಗ್ಗೆ ಭಯ ಹುಟ್ಟುತ್ತೆ. ಅದೇ ರೀತಿಯಾಗಿ ಪ್ರತಿಯೊಂದು ಇಲಾಖೆಯ ಶಾಲಾ ಕಾಲೇಜುಗಳಲ್ಲಿ ಕರಾಟೆ ಶಿಕ್ಷಣ ಕಡ್ಡಾಯಗೊಳಿಸಬೇಕು ಅಂದಾಗ ಮಾತ್ರ ಇಂತಹ ಅಪಾಯಕಾರಕ ಸನ್ನಿವೇಶದಲ್ಲಿ ವಿದ್ಯಾರ್ಥಿನಿಯರು ಆತ್ಮ ರಕ್ಷಣೆ ಮಾಡಿಕೊಳ್ಳಬಹುದು ಕೂಡಲೇ ಸರಕಾರ ಇಂತಹ ಕ್ರಾಂತಿಕಾರಕ ನಿರ್ಧಾರಕ್ಕೆ ಪಣ ತೊಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಪರ ಚಿಂತಕರಾದ ಶಿವಶಂಕರ್ ಗುಂಡಗುರ್ತಿ ಬಳಬಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.