ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅವ್ವನ ಅಡುಗೆ ಮನೆ ವಿಶ್ವವಿದ್ಯಾಲಯವಿದ್ದಂತೆ: ಶ್ರೀಕಾಂತ ಕೆಂದೂಳಿ

ಬಾಗಲಕೋಟೆ :ನಮ್ಮ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ರೊಟ್ಟಿಯನ್ನು ಹದವಾಗಿ ಮಾಡೋದನ್ನ ಯಾವ ಕಾಲೇಜು ವಿಶ್ವವಿದ್ಯಾಲಯಗಳು ಕಲಿಸಿಲ್ಲ ಅದು ಅವ್ವನ ಕರಳು, ಕೊರಳು, ಬೆರಳಿನಿಂದ ಸಂಸ್ಕಾರ ರೂಪದಲ್ಲಿ ಮಕ್ಕಳಿಗೆ ಕರಗತವಾಗಿರುತ್ತದೆ. ಜನನಿ ಮೊದಲ ಗುರು, ಅವ್ವನ ಅಡುಗೆ ಮನೆ ವಿಶ್ವವಿದ್ಯಾಲಯ ಇದ್ದಂತೆ ಎಂದು ರಬಕವಿಯ ಜನಪದ ಸಾಹಿತಿ ಉಪನ್ಯಾಸಕ ಶ್ರೀಕಾಂತ ಕೆಂದೂಳಿ ಹೇಳಿದರು. ಬಾಗಲಕೋಟೆ ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವಜ್ರದಂತಹ ಓದು ವಿದ್ಯಾರ್ಥಿಗಳದ್ದಾಗಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದು ಹೇಳಿದರು.
ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಇತಿಹಾಸ ಉಪನ್ಯಾಸಕ ಡಾ. ಎ.ಎಂ. ಗೊರಚಿಕ್ಕನವರ.ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬದುಕು ಸುಂದರವಾಗಲು ಭವಿತವ್ಯದ ದಿನಗಳು ಉಜ್ವಲವಾಗಿ ಬೆಳಗಲು ನಮ್ಮ ಮಹಾವಿದ್ಯಾಲಯದ ಉಪನ್ಯಾಸಕ ಗುರು ವೃಂದದವರು ಆಶೀರ್ವಾದ ಪೂರಕ ಹಾರೈಕೆಗಳನ್ನು ಸದಾ ಕಾಲ ಹಾರೈಸುತ್ತಾರೆ. ಜನ್ಮಕೊಟ್ಟ ತಂದೆ-ತಾಯಿ ಅಕ್ಷರ, ಅರಿವು,ಜ್ಞಾನ ಸಂಸ್ಕಾರಗಳನ್ನು ಕೊಟ್ಟ ಗುರು ಪರಂಪರೆಯ ಋಣವನ್ನು ಯಾರಿಂದಲೂ ತೀರಿಸಲು ಆಗುವುದಿಲ್ಲ; ಸಮಾಜದ ಆಸ್ತಿಗಳಾಗಿ ತಾವೆಲ್ಲರೂ ಬೆಳೆಯಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆ.ವಿ.ವ ಸಂಘದ ಸದಸ್ಯರಾದ ಶ್ರೀಯುತ ಸಿದ್ದಪ್ಪ ವಾಯ್ ಶಿರೂರ ಮಾತನಾಡಿ ಇಂದು ಸಾಕಷ್ಟು ಸರ್ಕಾರದ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ನೆರವಾಗಿವೆ. ಕಲಿತ ಕಾಲೇಜಿನ ಒಳಿತಿಗಾಗಿ ತಾವೆಲ್ಲರೂ ಸಹಕರಿಸಬೇಕು. ಎಂದು ತಿಳಿಸುತ್ತಾ ಜನಪದ ಹಂತಿಯ ಹಾಡನ್ನು ಹಾಡಿ ಜೀವನ ಮೌಲ್ಯಗಳನ್ನು ಜನಪದರ ನುಡಿಗಳಲ್ಲಿ ಕಾಣಬೇಕೆಂದು ಹೇಳಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಜಗದೀಶ ಗು.ಭೈರಮಟ್ಟಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಬಿ. ಬಿ. ಬೇವೂರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಡಾ.ಸಂಗಮೇಶ ಬಿ. ಹಂಚಿನಾಳ ಅತಿಥಿ ಮಹನೀಯರ ಪರಿಚಯವನ್ನು ನಡೆಸಿಕೊಟ್ಟರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಎಸ್.ಎಸ್.ಆದಾಪೂರ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನೇರವೇರಿಸಿಕೊಟ್ಟರು. ಇಂಗ್ಲೀಷ ವಿಭಾಗದ ಉಪನ್ಯಾಸಕರಾದ ಡಿ.ವಾಯ್. ಬುಡ್ಡಿಯವರ ಮಾಲಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಅಡಿಯ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ ಜಿ.ಎಸ್. ಗೌಡರ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ನಾಗಲಿಂಗೇಶ ಬೆಣ್ಣೂರ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಪ್ರತಿಭಾ ಅ ಹೆಳವರ, ಕು. ಹೃತೀಕ್ ಭಜಂತ್ರಿ ತಮ್ಮ ಮೂರು ವರ್ಷದ ಅನುಭವದ ಅನಿಸಿಕೆ ನುಡಿಗಳನ್ನು ಹಂಚಿಕೊಂಡರು. ಹಳೆಯ ವಿದ್ಯಾರ್ಥಿಗಳಾದ ಶ್ರೀಶೈಲ ಜೋಗಿ,ಪ್ರತಿಭಾ ಬಳ್ಳಾರಿ, ಭಾಗ್ಯಶ್ರೀ ಬೆನಕನವಾರಿ, ಐಶ್ವರ್ಯ ಉಂಡೋಡಿ ಪ್ರತಿಭಾ ಪುರಸ್ಕಾರದ ಅಂಗವಾಗಿ ನಗದು ಬಹುಮಾನ ಪಡೆದರು. ಕ್ರೀಡಾ, ಸಾಂಸ್ಕೃತಿಕ ಹಾಗೂ ಭಾರತ ಸಂವಿಧಾನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಪುಸ್ತಕಗಳ ಬಹುಮಾನಗಳನ್ನು ನೀಡಲಾಯಿತು.ವಿಜಯಲಕ್ಷ್ಮಿ ಬಂಡಿವಡ್ಡರ, ಲಕ್ಷ್ಮಿ ಮಾಗನೂರ ಸಂಗಡಿಗರು ಪ್ರಾರ್ಥಿಸಿದರು. ಜ್ಯೋತಿ ಗೌಡರ, ನಾಗರತ್ನ ಪೂಜಾರಿ ಸ್ವಾಗತಿಗೀತೆ ಹಾಡಿದರು. ವಸಂತಲಕ್ಷ್ಮಿ ಸಜ್ಜನ, ಸಂಗೀತಾ ಮಾಗನೂರ, ಸುಷ್ಮಾ ಸಂದಿಮನಿ, ಪವಿತ್ರಾ ಮಾಗನೂರ, ಫಾತಿಮಾ ನಧಾಪ ಸಂಗಡಿಗರು ಪ್ರತಿಭಾ ಪುರಸ್ಕಾರ ಅಂಗವಾಗಿ ಜನಪದ ಸೊಗಡಿನ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕೆಂಧೂಳಿ ಅವರ ಗಾಯನ ವೈಭವ:ಜನನದಿಂದ ಮರಣದ ತನಕ ಕಂಡು ಬರುವ ಜನನ, ಮಕ್ಕಳು, ಹೆಂಡತಿ, ವಿದ್ಯಾರ್ಥಿ, ಶಿಕ್ಷಕ, ಬದುಕು, ಉದ್ಯೋಗ, ಹೀಗೆ ಅನೇಕ ಜೀವನದ ಸ್ವಾರಸ್ಯದ ಸಂಗತಿಗಳನ್ನು ಅಕ್ಷರ ಮೂರಕ್ಷರ ಜೀವನ ಮೂರಕ್ಷರ ಎಂಬ ಹಾಡಿನ ವೈಭವದ ಮೂಲಕ ಕಾರ್ಯಕ್ರಮದ ಸೊಬಗನ್ನು ಗಾಯಕ ಶ್ರೀಕಾಂತ ಕೆಂದೂಳಿ ಅವರ ವಾದ್ಯ ಸಾಥಿ ಸಲಿಂ ಅವರು ಹೆಚ್ಚಿಸಿದರು.ಆಧುನಿಕ ಪರಂಪರೆಯ ತಲ್ಲಣಗಳನ್ನು,ತಂದೆ ತಾಯಿ ಮೌಲ್ಯಗಳನ್ನು ತಿಳಿಸುವ ಅನೇಕ ಗೀತೆಗಳನ್ನು ತಮ್ಮ ಉಪನ್ಯಾಸದ ನಡುವೆ ಪ್ರಸ್ತುತ ಪಡಿಸುತ್ತಾ ಸಮಾರಂಭಕ್ಕೆ ಸಂಗೀತದ ಮೆರುಗನ್ನು ತಂದುಕೊಟ್ಟರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ