ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಹೋಗುವ ರಸ್ತೆ ಕುಸಿದಿದ್ದು ದಿನ ಬೆಳಗಾದರೂ ಮಕ್ಕಳು ಮತ್ತು ಶಿಕ್ಷಕರು ಆತಂಕದಲ್ಲಿ ತಿರುಗಾಡುವಂತಾಗಿದೆ ಹಾಗೆ ವಸತಿ ಶಾಲೆಗೆ ಅಂಟಿಕೊಂಡು ಹಳ್ಳ ಇದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಶಾಲೆಗೆ ಸಮರ್ಪಕ ರಕ್ಷಣಾ ಗೋಡೆ ಇಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ವಸತಿ ಶಾಲೆಯ ಪಾಲಕರಾದ ಚನ್ನಪ್ಪ ಆಂದೆಲಿ ಪತ್ರಿಕೆಗೆ ತಿಳಿಸಿದ್ದಾರೆ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಜಾಲಹಳ್ಳಿ ವಸತಿ ಶಾಲೆಯ ಕಡೆ ಗಮನಹರಿಸಿ ಮಕ್ಕಳಿಗೆ ಶಿಕ್ಷಕರಿಗೆ ತಿರುಗಾಡಲು ಅನುಕೂಲ ಮಾಡಿಕೊಡಬಹುದಾ ಎಂದು ಕಾದು ನೋಡಬೇಕಾಗಿದೆ.
ವರದಿ: ಶರಣು ಹುಣಸಗಿ ಜಾಲಹಳ್ಳಿ