ಬಾಗಲಕೋಟೆ:ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂದೆ, ತಾಯಿ ಗುರುಗಳ ಋಣವನ್ನು ತೀರಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕೆಂದು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಜಿ.ವ್ಹಿ.ವ್ಹಿ.ಎಸ್ ಸಂಘದ ಚೇರ್ಮನ್ ಎಸ್.ಜಿ. ನಾಗಠಾಣ ಹೇಳಿದರು. ಸಮಾರೋಪ ಸಮಾರಂಭ ಹಾಗೂ ಬಿ.ಎ, ಬಿಕಾಂ, ಬಿ.ಎಸ್ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಪ್ರಾಮಾಣಿಕ ಪ್ರಯತ್ನಗಳ ಮೂಲಕ ಎತ್ತರದ ಸ್ಥಾನಗಳನ್ನು ತಲುಪಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಜಿ. ವಿ. ವಿ. ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಲ್.ಟಿ. ಚೌವ್ಹಾಣ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ನಾಡಿನ ಆಸ್ತಿಗಳಾಗಿದ್ದು ಸಂಸ್ಕಾರಯುತ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದ ಪ್ರಾಚಾರ್ಯ ಎಸ್.ಆರ್. ಬಿರಾದಾರ ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು; ಪುಸ್ತಕಗಳ ಒಡನಾಡಿಗಳಾಗಬೇಕು. ಸಮಾಜದಲ್ಲಿನ ಅಂಧಕಾರ ಅನೀತಿಗಳನ್ನು ದೂರಮಾಡುವ ನಿಟ್ಟಿನಲ್ಲಿ ತಮ್ಮ ಸೇವಾಕಾರ್ಯಗಳನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಅವರು ಹೇಳೀದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಎನ್.ಎಸ್. ಕೂಚಬಾಳ ಸೇರಿದಂತೆ ಬಿ.ಬಿ. ಕುಂದರಗಿ, ಬಿ.ಬಿ. ಮಸೂತಿ, ಕೆ. ಬಿ. ದಿಂಡವಾರ, ಎಸ್.ಸಿ ಬೀಳಗಿ, ಟಿ.ಬಿ. ಮೇಟಿ, ಎಸ್.ಎಸ್. ಗೋರಬಾಳ, ಶಿವಾಜಿ ಧರೇಕರ, ಲಕ್ಷ್ಮೀ ಬಿರಾದಾರ, ಭಾಗ್ಯಶ್ರೀ ಸರಗಣಾಚಾರಿ, ಗಿರಿಜಾ ಕುಂಬಾರ, ಇಟಗಿ ಉಪನ್ಯಾಸಕಿಯರು, ಸುನೀತಾ ಕೆ. ಹಾಗೂ ಸುನೀತಾ ಪತ್ತಾರ, ವೈಷ್ಣವಿ ಕೊಟ್ಯಾಳ,ಎ.ಬಿ.ಗೌಡರ ಭಾಗಿಯಾಗಿದ್ದರು.ಎಂ.ಬಿ ಪಾಟೀಲ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಸ್ವಾಗತ ಗೀತೆಗಳನ್ನು ಹಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.