ಮದುವೆಯಲ್ಲಿ ಊಟ, ನೀರು ಸೇವಿಸಿ ವಾಂತಿ-ಬೇದಿ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾ ಮತ್ತು ಶ್ರೀರಂಗಪುರ ತಾಂಡದ ಗ್ರಾಮಸ್ಥರು ಮದುವೆ ಮನೆಯಲ್ಲಿ ಊಟ, ನಿರು ಸೇವಿಸಿ ಕಳೆದ ಮೂರು ದಿನಗಳಿಂದ ವಾಂತಿ ಬೇದಿಯಿಂದ ಒಬ್ಬೊಬ್ಬರಾಗಿ ಅಸ್ವಸ್ಥರಾಗುತ್ತಿದ್ದಾರೆ. ಗ್ರಾಮದಲ್ಲಿ ವಾಂತಿ ಬೇದಿಯಿಂದ ಆತಂಕದಿಂದ ಭಯಭೀತರಾಗಿದ್ದಾರೆ.
ತಾಲೂಕಿನ ನಾಗನೇಹಳ್ಳಿ ಗ್ರಾಮದಲ್ಲಿ ಕುಟುಂಬಗಳಿದ್ದು, ಕಳೆದ 4 ದಿನಗಳಿಂದ ಕಲುಷಿತ ಊಟ, ನೀರು ಸೇವಿಸಿ ಸುಮಾರು 20 ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ ಬೇದಿಯಿಂದ ಬಳಲಿ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಪ್ರಕರಣ:ನಾಗೇನಹಳ್ಳಿ ಮತ್ತು ಶ್ರೀರಂಗಪುರ ತಾಂಡಗಳಲ್ಲಿ ಕಳೆದ ಬುಧವಾರ ಮತ್ತು ಗುರುವಾರ 2 ದಿನ ಮದುವೆ ಕಾರ್ಯ ನಡೆದಿದ್ದು,ಮದುವೆಯ ಎರಡು ದಿನದಲ್ಲಿ ಯಾವುದೇ ವಾಂತಿ ಬೇದಿ ಕಾಣಿಸಿಕೊಂಡಿಲ್ಲ. ಶುಕ್ರವಾರ ಇದ್ದಕ್ಕಿದ್ದಂತೆ ನಾಗೇನಹಳ್ಳಿ ಗ್ರಾಮದಲ್ಲಿ ಕೆಲವರಿಗೆ ಸಾಮೂಹಿಕವಾಗಿ ವಾಂತಿ ಬೇದಿ ಕಾಣಿಸಿಕೊಂಡಿದೆ. ಕೆಲವರು ಸಮೀಪದಲ್ಲೇ ಇದ್ದ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ ಇನ್ನು ಕೆಲವರು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇನ್ನೊಬ್ಬರು ಹಿಂದೂಪುರ ಹಾಗೂ ಒಬ್ಬರು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ರವಾನಿಸಿದ ರಾಮೀ ಬಾಯಿ (70) ರವರು ಭಾನುವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಗ್ರಾಮದಲ್ಲಿ ಭಯದ ವಾತಾವಣರ ಸೃಷ್ಠಿಯಾಗಿ ವಾಂತಿ ಬೇದಿಗೆ ಕಾರಣ ತಿಳಿಯದೆ ಗ್ರಾಮಸ್ಥರು ಚಿಂತಜನಕರಾಗಿದ್ದಾರೆ.ಅಧಿಕಾರಿಗಳು ಭೇಟಿ ನೀಡಿದರೂ ಸಹ ಯಾವ ಕಾರಣಕ್ಕೆ ಆಗುತ್ತಿದೆ ಎಂಬುದನ್ನು ತಿಳಿಸಿಲ್ಲವೆಂದು ಗ್ರಾಮಸ್ಥರು ಭಯದ ವಾತಾವರಣದಲ್ಲೇ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ನಾಗೇನಹಳ್ಳಿ ತಾಂಡಾ ಗ್ರಾಮಕ್ಕೆ ಭೇಟಿ ಮಾಡಿ ಗ್ರಾಮದಲ್ಲಿನ ಸ್ಥಳೀಯರ ಯೋಗ ಕ್ಷೇಮ ವಿಚಾರಿಸಿ ವಾಂತಿ-ಬೇದಿಗೆ ಕಾರಣವನ್ನು ಕಲೆ ಹಾಕಲು ಪರಿಶೀಲನೆ ನಡೆಸಿ ದೃತಿ ಗೆಡದಂತೆ ಗ್ರಾಮಸ್ಥರಿಗೆ
ಆತ್ಮ ಸ್ಥೈರ್ಯ ತುಂಬಿದ್ದಾರೆ.
1 ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ವಾಂತಿ-ಬೇದಿಗೆ ಚಿಕಿತ್ಸೆ ಪಡೆಯುತ್ತಿದ್ದು,ಯಾವ ಕಾರಣಕ್ಕೆ ವಾಂತಿ ಬೇದಿ ಆಗುತ್ತಿದಿಯೋ ಗೊತ್ತಿಲ್ಲಾ. ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಡಾ,ಗಳು ಇಲ್ಲದ ಕಾರಣ ಪಟ್ಟಣದ ಖಾಸಗಿ ಬೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ.
ಹರಿನಾಯ್ಕ ನಾಗೇನಹಳ್ಳಿ
2 ವಾಂತಿ-ಬೇದಿಯಿಂದ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆಂದು ಹೋಗಿದ್ದೇವು ಸರಿಯಾದ ಚಿಕಿತ್ಸೆ ನೀಡದ ಕಾರಣ, ಹಿಂದೂಪುರಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ.
-ಅಂಜೇ ನಾಯ್ಕ,ನಾಗೇನಹಳ್ಳಿ ತಾಂಡಾ
ವರದಿ :ಕೆ.ಮಾರುತಿ ಮುರಳಿ