ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಸರಕಾರಿ ಫ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಬಸರಿ ಮರದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ರಕ್ಷಾ ಬಂಧನ ಜೊತೆಗೆ ವೃಕ್ಷ ಬಂಧನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಬಸರಿ ಮರದ ಸುತ್ತಲೂ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಪುಷ್ಪಾಲಂಕಾರದಿಂದ ಅಲಂಕಾರಗೊಳಿಸಿ ಬಸರಿ ಮರಕ್ಕೆ ರಾಖಿ ಕಟ್ಟುವ ಮೂಲಕ ಗಿಡಮರಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಅವುಗಳನ್ನು ಸಂರಕ್ಷಣೆ ಮಾಡಬೇಕೆಂದು ಅಣ್ಣತಮ್ಮಂದಿರಂತೆ ಗಿಡಮರಗಳನ್ನು ರಕ್ಷಣೆ ಮಾಡಬೇಕೆಂದು ವೃಕ್ಷ ಬಂಧನ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ BV ಮಾತನಾಡಿ ನಮ್ಮ ಶಾಲೆಯ ಆವರಣದಲ್ಲಿ ದಿನಾಂಕ 27-06-2022 ರಂದು ಗಾಳಿ ಮಳೆಗೆ ಬಸರಿ ಮರ ನೆಲಕ್ಕುರುಳಿತು.ನಂತರ ಇದನ್ನು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರ ಗಮನಕ್ಕೆ ತಂದಾಗ ಹಳೆಯ ವಿದ್ಯಾರ್ಥಿ ಬಳಗದ ಸಹಕಾರದಿಂದ ಅದಕ್ಕೆ ಮರುಜೀವ ನೀಡಲಾಯಿತು.ಅಂದು ನೆಟ್ಟ ಮರ ಇಂದು ನಿಮ್ಮ ಕಣ್ಣೆದುರು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಶುದ್ಧವಾದ ಗಾಳಿ ಮತ್ತು ನೆರಳನ್ನು ನೀಡುತ್ತಿದೆ.ಪ್ರತಿನಿತ್ಯ ವೃಕ್ಷವನ್ನು ಬೆಳಸುವ ಕಾರ್ಯದಲ್ಲಿ ವನಸಿರಿ ತಂಡ ತೊಡಗಿದೆ.ಕರೋನಾ ಸಮಯದಲ್ಲಿ ಆಕ್ಸಿಜನ್ ಸಿಗುವುದು ಕೂಡ ಕಷ್ಟವಾಗಿತ್ತು.ಈ ಆಕ್ಸಿಜನ್ ನಾವು ಬೆಳಸಿದ ಮರಗಳಿಂದ ಸಿಗುತ್ತದೆ.ಮರಗಳೇ ಹೋದರೆ ನಮ್ಮ ಜೀವ ಕೂಡ ಹೋದಂತೆ.ಇಂತಹ ಮರಗಳನ್ನು ಬೆಳಸುವ ವನಸಿರಿ ತಂಡವನ್ನು ಜೀವದಾನಿಗಳು ಎಂದು ಕರೆಯಬೇಕು.ಯಾಕೆಂದರೆ ಈ ವನಸಿರಿ ತಂಡ ರಾಜ್ಯದ ಎಲ್ಲಾ ಭಾಗಗಳಿಗೆ ತೆರಳಿ ಗಿಡ ಬೆಳಸಿ ಮರ ಉಳಿಸಿ ಎಂದು ತಿಳಿಸುತ್ತಾರೆ.ಆದ್ದರಿಂದ ಇವರನ್ನು ಜೀವದಾನಿಗಳು ಎಂದು ಕರೆಯುತ್ತೇವೆ ಎಲ್ಲರೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದ ತಿಳಿಸಿದರು.ನಂತರ ಪರಿಸರ ಪ್ರೇಮಿ ಸಿದ್ದನಗೌಡ ಗೋನವಾರ ಮಾತನಾಡಿ ವನಸಿರಿ ಫೌಂಡೇಶನ್ ತಂಡ ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಿದೆ.ಎಲ್ಲಿಯಾದರೂ ಗಿಡಮರಗಳನ್ನು ಕಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ತಡೆಯುವುದು, ಗಿಡಗಳು ಗಾಳಿ ಮಳೆಗೆ ಬಿದ್ದರೆ ಮರುಜೀವ ನೀಡುವುದು, ಗಿಡಗಳು ಒಣಗುತ್ತಿದ್ದರೆ ಔಷದೋಪಾಯದಿಂದ ಮತ್ತೆ ಬೆಳೆಸುವುದು ಹೀಗೆ ಅನೇಕವಕಾರ್ಯಗಳಲ್ಲಿ ತೊಡಗಿದೆ. ಅಲ್ಲದೆ ಕಳೆದ ಎರಡು ವರ್ಷದಲ್ಲಿ ನಮ್ಮ ಗ್ರಾಮದಲ್ಲೇ ಮಳೆಗಾಳಿಗೆ ಬಿದ್ದ ಬಸರಿ ಮರಕ್ಕೆ ಮರುಜೀವ ನೀಡಿದ್ದು ವನಸಿರಿ ಫೌಂಡೇಶನ್ ಕಾರ್ಯದ ನಿದರ್ಶನವಾಗಿದೆ.ಇದಕ್ಕೂ ಮೊದಲು ಸಿಂಧನೂರಿನ PWD ಕ್ಯಾಂಪ್ ನ ಅಮರ ಶ್ರೀ ಆಲದ ಮರವನ್ನು ಕೂಡಾ ಅಮರೇಗೌಡ ಮಲ್ಲಾಪೂರ ನೇತೃತ್ವದಲ್ಲಿ ನೆಟ್ಟು ಪೋಷಿಸಲಾಗಿದೆ ಇದರಿಂದ ಗೊತ್ತಾಗುತ್ತದೆ ವನಸಿರಿ ಫೌಂಡೇಶನ್ ತಂಡ ಪರಿಸರಕ್ಕಾಗಿ ಹಗಲಿರುಳೆನ್ನದೆ ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಶ್ರಮಿಸುತ್ತಿದೆ. ಅಮರೇಗೌಡ ಮಲ್ಲಾಪೂರ ಅವರ ತಂಡಕ್ಕೆ ಶುಭವಾಗಲಿ ಇನ್ನಷ್ಟು ಹೆಚ್ಚಿನ ಪರಿಸರ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ನಂತರ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ಗೋನವಾರ ಗ್ರಾಮದ ಶಾಲೆಯ ಶಿಕ್ಷಕರು,ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಮಳೆಗಾಳಿಗೆ ಬಿದ್ದ ಮರವನ್ನು ಮತ್ತೆ ಚಿಗುರೊಡೆಯುವಂತೆ ಮಾಡಲು ಸಾಧ್ಯವಾಯಿತು.ನಿಮ್ಮ ಸಹಾಯ ಸಹಕಾರ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ನಿಮಗೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ನಮ್ಮ ವನಸಿರಿ ತಂಡ ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಿದೆ ಯಾಕೆಂದರೆ ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಗಿಡಮರಗಳ ಸಂಖ್ಯೆ ಕಡಿಮೆ ಇದೆ.ಅತೀ ಹೆಚ್ಚು ಬಿಸಿಲನ್ನು ಹೊಂದಿದೆ ಕಡಿಮೆ.ಮಳೆ ಕಡಿಮೆಯಾಗುತ್ತದೆ. ಆದ್ದರಿಂದ ನಮ್ಮ ವನಸಿರಿ ತಂಡ ಎಲ್ಲಾ ಸರಕಾರಿ ಶಾಲೆಗಳನ್ನು ಹಸಿರು ಶಾಲೆಗಳಾಗಿ ನಿರ್ಮಿಸುವುದು ಮತ್ತು ಕಲ್ಯಾಣ ಕರ್ನಾಟಕವನ್ನು ಹಸಿರಾಗಿಸುವ ಗುರಿಯನ್ನು ಹೊಂದಿದ್ದೇವೆ ಇದಕ್ಕೆ ತಾವುಗಳೆಲ್ಲರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಮುಖ್ಯಗುರುಗಳಾದ ಬಸವರಾಜ BV ಪರಿಸರ ಪ್ರೇಮಿ ಸಿದ್ದನಗೌಡ ಗೋನವಾರ, ಮಂಜುನಾಥ ಪಾಟೀಲ ಮುಳ್ಳೂರು,ವನಸಿರಿ ಫೌಂಡೇಶನ್ ಸದಸ್ಯರಾದ ಮುದುಕಪ್ಪ ಹೊಸಳ್ಳಿ ಕ್ಯಾಂಪ್,ಪ್ರೀತಮ್, ವೀರಭದ್ರಯ್ಯಸ್ವಾಮಿ ತಿಮ್ಮಾಪೂರ,ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಬಳಗದ ಸದಸ್ಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.